ಎನ್‌ಐಟಿಕೆ ಸುರತ್ಕಲ್ ಮತ್ತು ಗೇಲ್ ಗ್ಯಾಸ್ ಲಿಮಿಟೆಡ್: ಬ್ರಹ್ಮಗಿರಿ ಹಾಸ್ಟೆಲ್ ಮೆಸ್‌ನಲ್ಲಿ ಪಿಎನ್‌ಜಿ ಸರಬರಾಜು ಉದ್ಘಾಟನೆ

Upayuktha
0


ಸುರತ್ಕಲ್: ಎನ್‌ಐಟಿಕೆ ಸುರತ್ಕಲ್ ತನ್ನ ಸ್ವಚ್ಛ, ಸ್ವಸ್ಥ, ಸುರಕ್ಷಿತ ಮತ್ತು ಸಮೃದ್ಧ ಕ್ಯಾಂಪಸ್ ದೃಷ್ಟಿಕೋನದೊಂದಿಗೆ, ಪರಿಸರ ಸ್ನೇಹಿ ಮೂಲ ಸೌಕರ್ಯವನ್ನು ಬಲಪಡಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಸಂಸ್ಥೆಯ ವಸತಿ ನಿಲಯಗಳು ಮತ್ತು ಹಾಸ್ಟೆಲ್ ಸೌಲಭ್ಯಗಳಿಗೆ ಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸರಬರಾಜನ್ನು ಗೇಲ್ ಗ್ಯಾಸ್ ಲಿಮಿಟೆಡ್ ಮೂಲಕ ಅಳವಡಿಸಲಾಗಿದೆ.


ಬ್ರಹ್ಮಗಿರಿ ಹಾಸ್ಟೆಲ್ ಮೆಸ್‌ನಲ್ಲಿ ಪಿಎನ್‌ಜಿ ಸರಬರಾಜಿನ ಉದ್ಘಾಟನೆ ಏಪ್ರಿಲ್ 27, 2026 ರಂದು ನಡೆಯಿತು. ಈ ಸಂದರ್ಭದಲ್ಲಿ ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ. ಬಿ. ರವಿ, ರಿಜಿಸ್ಟ್ರಾರ್ (ಇನ್‌ಚಾರ್ಜ್) ಪ್ರೊ. ಕುಮಾರ್ ಜಿ. ಎನ್., ಯೋಜನೆ ಮತ್ತು ಅಭಿವೃದ್ಧಿ ಡೀನ್ ಪ್ರೊ. ವೆಂಕಟೇಶ ಪೆರಮಲ್, ಪಿಎನ್‌ಜಿಆರ್‌ಬಿ ತಾಂತ್ರಿಕ ನಿರ್ದೇಶಕ ಶ್ರೀ ಪ್ರದೀಪ್ ತನ್ವಾರ್, ಪಿಎನ್‌ಜಿಆರ್‌ಬಿ ಸಹಾಯಕ ನಿರ್ದೇಶಕ (ತಾಂತ್ರಿಕ) ಶ್ರೀ ಅರ್ಪಿತ್ ಜೋಹರಿ, ಗೇಲ್ ಗ್ಯಾಸ್ ಲಿಮಿಟೆಡ್ ಮಹಾಪ್ರಬಂಧಕ ಶ್ರೀ ಸಾಯಿ ಶಂಕರ್ ಹಾಗೂ ಸಂಸ್ಥೆ ಮತ್ತು ಗೇಲ್ ಗ್ಯಾಸ್ ಲಿಮಿಟೆಡ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಎನ್‌ಐಟಿಕೆ ಸುರತ್ಕಲ್ ಕ್ಯಾಂಪಸ್‌ನಲ್ಲಿ ಸುಮಾರು 20 ವಾಣಿಜ್ಯ ಸಂಸ್ಥೆಗಳು, ಹಾಸ್ಟೆಲ್ ಮೆಸ್‌ಗಳು ಮತ್ತು ಕ್ಯಾಂಟೀನ್‌ಗಳನ್ನು ಒಳಗೊಂಡಿವೆ. ವಸತಿ ನಿಲಯಗಳಿಗೆ PNG ಸರಬರಾಜು ಈಗಾಗಲೇ ವಿಸ್ತರಿಸಲಾಗಿದ್ದು, ಪ್ರತಿ ಮನೆಮಂದಿಗೆ ಸ್ವಚ್ಛ ಮತ್ತು ನಿರಂತರ ಇಂಧನವನ್ನು ಒದಗಿಸಲಾಗುತ್ತಿದೆ. ಬ್ರಹ್ಮಗಿರಿ ಹಾಸ್ಟೆಲ್ ಮೆಸ್ LPGಯಿಂದ PNGಗೆ ಪರಿವರ್ತನೆಯಾದ ಮೊದಲ ಮೆಸ್ ಆಗಿದ್ದು, ಉಳಿದ ಸಂಸ್ಥೆಗಳನ್ನು ಹಂತ ಹಂತವಾಗಿ ಪರಿವರ್ತನೆ ಮಾಡುವ ಯೋಜನೆ ಇದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top