ಶ್ರೀ ಸುರೋತ್ತಮ ತೀರ್ಥರ ಆರಾಧನೋತ್ಸವ

Upayuktha
0


ಉಡುಪಿ: ಇಂದು (ಏ.20) ಅಕ್ಷಯ ತೃತೀಯ ಶ್ರೀ ಮಠದಲ್ಲಿ ಶ್ರೀ ವಾದಿರಾಜರ ತೀರ್ಥರ ಅನುಜರಾದ ಹಾಗೂ ಯುಕ್ತಿ ಮಲ್ಲಿಕೆಗೆ ವ್ಯಾಖ್ಯಾನಕಾರರಾದ ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿಗಳಾದ ಶ್ರೀ ಸುರೋತ್ತಮ ತೀರ್ಥರ ಆರಾಧನಾ ಅಂಗವಾಗಿ ಶ್ರೀಗಳ ಆದೇಶಾನುಸಾರವಾಗಿ ಶ್ರೀಮಠದ ಭಕ್ತರಾದ ಶ್ರೀ ಸೀತಾರಾಮಚಾರ್ಯರಿಂದ ತತ್ವಹೋಮ ತತ್ವಕಲಶಗಳಿಂದ ಅಭಿಷೇಕ ನೆರವೇರಿತು.


ಉಡುಪಿ ಶ್ರೀ ಪೇಜಾವರ ಮಠದ ಪೂರ್ವಸೂರಿಗಳೂ, ಹಾಗೂ ಸುರತ್ಕಲ್ ಚಿತ್ರಾಪುರ ಮಠದ ಸಂಸ್ಥಾಪಕರೂ, ಶ್ರೀ ಮದ್ಭಾಗವತ ಪುರಾಣಕ್ಕೆ ವ್ಯಾಖ್ಯಾನ ಬರೆದ ಅಪರೋಕ್ಷ ಜ್ಞಾನಿಗಳೂ ಆಗಿರುವ ಶ್ರೀ ವಿಜಯಧ್ವಜ ತೀರ್ಥ ಶ್ರೀಪಾದರ ಆರಾಧನೋತ್ಸವವು ತಲಪಾಡಿ ಸಮೀಪದ ಕಣ್ವತೀರ್ಥ ಮಠದಲ್ಲಿ ಅಕ್ಷಯ ತೃತೀಯಾ ಪರ್ವದಿನ ಸೋಮವಾರದಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನೆರವೇರಿತು.


ಬಾರಕೂರಿನ ಶ್ರೀ ಭಂಡಾರಕೇರಿ ಮಠದಲ್ಲಿ ಸೋಮವಾರ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸುರೋತ್ತಮ ತೀರ್ಥರ ಆರಾಧನೋತ್ಸವ ನೆರವೇರಿತು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top