ಏ.23ರಂದು ಅಸ್ಥಿಶಾಸ್ತ್ರ ಕುರಿತು ಐಎಂಎ ದತ್ತಿ ಉಪನ್ಯಾಸ

Upayuktha
0


ಮಂಗಳೂರು: ಭಾರತೀಯ ವೈದ್ಯ ಸಂಘ (ಐಎಂಎ) ಹಾಗೂ ಕೆನರಾ ಆರ್ಥೋಪೆಡಿಕ್ ಸೊಸೈಟಿ (ಸಿಒಎಸ್) ಸಂಯುಕ್ತ ಆಶ್ರಯದಲ್ಲಿ, ಖ್ಯಾತ ಅಸ್ಥಿಶಾಸ್ತ್ರ ತಜ್ಞರಾದ ದಿವಂಗತ ಡಾ. ಎಂ. ಸುಧಾಕರ್ ಶೆಟ್ಟಿ ಅವರ ಸ್ಮರಣಾರ್ಥ ಐಎಂಎ ಎಂಡೋಮೆಂಟ್ ಉಪನ್ಯಾಸ ಕಾರ್ಯಕ್ರಮ ಏಪ್ರಿಲ್ 23ರಂದು ಮಂಗಳೂರಿನಲ್ಲಿ ನಡೆಯಲಿದೆ.


ಈ ಕಾರ್ಯಕ್ರಮವು ಗುರುವಾರ ಸಂಜೆ 7.30ಕ್ಕೆ ಅತ್ತಾವರ ರಸ್ತೆಯ ಐಎಂಎ ಹೌಸ್‌ನ ಡಾ. ಎ.ವಿ. ರಾವ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದ್ದು, ಐಎಂಎ ಸದಸ್ಯರು ಹಾಗೂ ಅವರ ಕುಟುಂಬದವರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೆಎಸ್ಎಚ್‌ಇಎಂಎ (ಕೆ.ಎಸ್‌. ಹೆಗ್ಡೆ ಮೆಡಿಕಲ್ ಅಕಾಡೆಮಿ) ಡೀನ್ ಡಾ. ಸಂದೀಪ್ ರೈ ಬಿ ಭಾಗವಹಿಸಲಿದ್ದಾರೆ. ಉಪನ್ಯಾಸವನ್ನು ಅದೇ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜೇಶ್ ಬಲ್ಲಾಳ್‌ ನೀಡಲಿದ್ದಾರೆ.


ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ, ಖಜಾಂಚಿ ಡಾ. ಜೂಲಿಯನ್ ಸಾಲ್ಡಾನ್ಹಾ ಸೇರಿದಂತೆ ಸಿಒಎಸ್ ಅಧ್ಯಕ್ಷ ಡಾ. ಸುದೀಪ್ ಶೆಟ್ಟಿ, ಕಾರ್ಯದರ್ಶಿ ಡಾ. ಸುಮಂತ್ ನಾಯಕ್ ಮತ್ತು ಖಜಾಂಚಿ ಡಾ. ದೈವಿಕ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.


ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆಯೂ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top