ಅಮೆರಿಕಾದ ಅಟ್ಲಾಂಟಾ ನಗರದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

Upayuktha
0


ಅಟ್ಲಾಂಟಾ: ಅಮೆರಿಕಾದ ಅಟ್ಲಾಂಟಾ ಮಹಾನಗರ ದಲ್ಲಿರುವ ಶ್ರೀ ಪುತ್ತಿಗೆ ಮಠದ ವತಿಯಿಂದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಮಾರ್ಗದರ್ಶನದಂತೆ ಲೋಕ ಕಲ್ಯಾಣಕ್ಕಾಗಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವವು ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಅತ್ಯಂತ ವೈಭವದಿಂದ ಇಂದು ಜರಗಿತು.


ಹಿಂದಿನ ದಿನದಂದು ತರಕಾರಿ ಮುಹೂರ್ತವು ಜರಗಿ ಮರುದಿನ ಶನಿವಾರದಂದು ಬೆಳಿಗ್ಗೆ ವೈಭವದ ಮೆರವಣಿಗೆಯೊಂದಿಗೆ ಶ್ರೀ ಭೂ ಸಹಿತ ಶ್ರೀನಿವಾಸ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ವಿವಿಧ ಹಾಡು ನರ್ತನೆಗಳೊಂದಿಗೆ ಸಭಾಂಗಣಕ್ಕೆ ತರಲಾಯಿತು.


ಬಳಿಕ ಸಾಲಂಕೃತ ಸಭಾ ಗುರುಕುಲ ಸಭಾಭವನದಲ್ಲಿ ಪುಣ್ಯಾಹವಚನ,ಮಾಂಗಲ್ಯ ಧಾರಣಾದಿ ಮದುವೆಯ ಧಾರ್ಮಿಕ ವಿಧಿ ವಿಧಾನಗಳನ್ನು ಭಕ್ತರ ಸಮ್ಮುಖದಲ್ಲಿ ವೇದಮೂರ್ತಿ ಶ್ರೀ ಕಿರಣ್ ರಾವ್, ಶ್ರೀ ಜಯ ಪ್ರಸಾದ್ ಅಮ್ಮಣ್ಣಾಯ, ಶ್ರೀ ತೇಜಸ ಚಡಗ ನೆರವೇರಿಸಿಕೊಟ್ಟರು.


ಕಾಪು ಹರೀಶ್ ಭಟ್ಟರ ನೇತೃತದಲ್ಲಿ ಉಡುಪಿ ಭೋಜನ ಸಿದ್ದಗೊಂಡಿದ್ಫುಸುಮಾರು ಎರಡು ಸಾವಿರಕ್ಕೂ ಮಿಕ್ಕಿ ನೆರೆದ ಭಕ್ತರು ಭೋಜನ ಪ್ರಸಾದ ವನ್ನು ಸ್ವೀಕರಿಸಿ ಧನ್ಯರಾದರು.


ವಿಶ್ವ ಗೀತಾ ಪರ್ಯಾಯ ಸ್ಮಾರಕವಾಗಿ ಮಂದಿರ


ಶ್ರೀ ಪುತ್ತಿಗೆ ಮಠದ ವಿದೇಶೀಯ 15 ಶಾಖೆಗಳಲ್ಲಿ ಅಟ್ಲಾಂಟ ನಗರದಲ್ಲಿರುವ ಮಠವು ಆರನೆಯ ಶಾಖೆಯಾಗಿರುತ್ತದೆ. ಇಲ್ಲಿ ಆರು ಎಕರೆಯ ವಿಸ್ತೀರ್ಣ ಜಾಗದಲ್ಲಿ 23 ಸಾವಿರ ಚದರಡಿಯಲ್ಲಿ ಶ್ರೀಕೃಷ್ಣ ಮಂದಿರವು ನಿರ್ಮಾಣಗೊಳ್ಳಲಿದೆ.


ಪೂಜ್ಯ ಪುತ್ತಿಗೆ ಶ್ರೀಪಾದರು ತಮ್ಮ ಚತುರ್ಥ ಬಾರಿಯ ವಿಶ್ವಗೀತಾ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ತೆರಳುವ ಮುನ್ನ ದಿನಾಂಕ 6-11-2023 ರಂದು ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಮಾತ್ರವಲ್ಲ ಇಲ್ಲಿ ಪವಿತ್ರ ಭಗವದ್ಗೀತೆಯ 700 ಶ್ಲೋಕಗಳನ್ನು ತಾಮ್ರದ ಇಟ್ಟಿಗೆಗಳಲ್ಲಿ ಬರೆಯಿಸಿ ಮಂದಿರದ ಪಂಚಾಂಗದಲ್ಲಿ ಇರಿಸುವ ಅಪೇಕ್ಷೆಯನ್ನು ಭಕ್ತರಿಗೆ ತಿಳಿಸುವ ಮೂಲಕ ಮೂಲಕ ತಮ್ಮ ಚತುರ್ಥ ಬಾರಿಯ ವಿಶ್ವ ಗೀತಾ ಪರ್ಯಾಯದ ಸ್ಮಾರಕವಾಗಿ ಈ ಮಂದಿರ ತಲೆಯೆತ್ತಲಿದೆ ಎಂದು ಘೋಷಿಸಿದ್ದರು.


ಮಂದಿರದ ನಿರ್ಮಾಣದ ಹಂತಗಳನ್ನು ಅಟ್ಲಾಂಟಾ ಶಾಖಾ ಮಠದ ಪ್ರಧಾನ ಅರ್ಚಕರಾದ ಶ್ರೀ ಜಯಪ್ರಸಾದ ಅಮ್ಮಣ್ಣಾಯ ಸಭೆಗೆ ವಿವರಿಸಿ ಭಕ್ತರ ಸಹಕಾರವನ್ನು ವಿಶೇಷ ಕೋರಿದರು.


ಮಂದಿರವು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸುಸಜ್ಜಿತ ಸಭಾ ಭವನವನ್ನು ಒಳಗೊಂಡಿದ್ದು ಭಕ್ತರ ಸಹಕಾರದ ಜೊತೆಗೆ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಪೂಜ್ಯ ಶ್ರೀಪಾದರ ಕನಸಿನಂತೆ ಪ್ರಾಕ್ತನ ಶೈಲಿ ಆಧುನಿಕ ತಂತ್ರ ಜ್ಞಾನದ ಜೊತೆಗೆ ಶ್ರೀ ಕೃಷ್ಣ ಮಂದಿರವು ಅಪೂರ್ವವಾಗಿ ಆಕರ್ಷಣೀಯವಾಗಿ ಕಾಣಿಸಿಕೊಳ್ಳಲಿದೆಯೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top