ಕವನ: ನೆಲ್ಲಿಯ ಮೆಲ್ಲಿರೋ

Upayuktha
0



ಒಗರು ತುಂಬಿದ ಬೆಟ್ಟ ನೆಲ್ಲಿಯು

ನಗುತ ಕರೆಯಿತು ನನ್ನನು

ಜಗಿದು ರಸವನು ಹೀರುತಿದ್ದರೆ

ಮೊಗದಿ ಏನೋ ಭಾವವು||


ಜಠರ ಬಾಧೆಗೆ ದಿವ್ಯ ಔಷಧ

ಸಟೆಯ ಮಾತಿದು ಅಲ್ಲವೋ

ಹಠವ ಮಾಡುತ ಕೇಳಿ ಪಡೆಯಿರಿ

ದಿಟಕು ರೋಗವ ಕಳೆಯಿರಿ||


ನೆಲ್ಲಿ ಮೆಲ್ಲುತ ನೀರು ಕುಡಿಯಲು

ಅಲ್ಲಿ ಸ್ವರ್ಗದ ಸುಖವಿದೆ

ಬಲ್ಲಿರೇನೋ ಇದರ ಮಹತಿಯ

ಜೊಲ್ಲು ಸುರಿಸುವ ರುಚಿಯಿದೆ||


ಖಾಲಿ ಹೊಟ್ಟೆಗೆ ನೆಲ್ಲಿ ರಸವನು

ಕಾಲ ನೋಡದೆ ಸೇವಿಸೆ

ಬಾಲೆಯಂತೆಯೆ ಚೆಂದ ಕಾಣುತ

ಹಾಲು ಬಿಳುಪಲಿ ಹೊಳೆವಿರಿ||


ಹೃದಯ ರೋಗಕು ಇದರ ಸೇವನೆ

ಮಧುರವಾಗಿದೆ ನೈಜವೇ 

ಮುದವ ನೀಡಲು ಕಣ್ಣ ಕಾಂತಿಗೆ

ಹದುಳ ಚರ್ಮದ ತೇಜಕೆ||


ರಕ್ತ ಶುದ್ಧಿಗು ಪಚನ ಕ್ರಿಯೆಗೂ

ಸೂಕ್ತವಾಗಿದೆ ಕಾಯಿಯು

ಯುಕ್ತವಾಗಿದೆ ಕೇಶ ವೃದ್ಧಿಗೆ

ಮುಕ್ತ ಮನದಲಿ ಬಳಸಲು||


ಲವಣ ನೀರನು ಕುದಿಸಿ ಬೆರೆಸಲು

ಬವಣೆ ಕಳೆವುದು ಸತ್ಯವೇ

ರವಿಯ ತಾಪಕೆ ಉರಿಯ ಮೂತ್ರಕೆ

ಬೆವರು ಸೋಂಕಿನ ನಾಶಕೆ||


ನೆಲ್ಲಿ ಮೆಲ್ಲಿರಿ ನೆಲ್ಲಿ ಮೆಲ್ಲಿರಿ 

ನೆಲ್ಲಿ ಮೆಲ್ಲಿರಿ ಅನುದಿನ

ಮೆಲ್ಲ ಮೆಲ್ಲನೆ ರೋಗ ಕಾಡದು

ನೆಲ್ಲಿ ಸೇವಿಸೆ ಅನುದಿನ||


- ಲಕ್ಷ್ಮೀ ವಿ ಭಟ್, ತಲಂಜೇರಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top