ಹಿರಿಯರ ಆದರ್ಶಗಳು ನಂದಾದೀಪ: ಡಾ ಪ್ರಭಾಕರ ಭಟ್ ಕಲ್ಲಡ್ಕ
ಕಲ್ಲಡ್ಕ: ಹಿರಿಯ ಅದರ್ಶಗಳು ನಂದಾದೀಪ ಆಗಬೇಕು ಸಾಧಕರ ನೂರು ಹೆಜ್ಜೆಗಳಲ್ಲಿ ಒಂದು ಹೆಜ್ಜೆಯನ್ನಾದರೂ ಅನುಸರಿಸಿ ಸಾರ್ಥಕತೆ ಪಡೆಯೋಣ ಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕೆ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು
ಅವರು ಎ.11ರ ಶನಿವಾರ ಕಲ್ಲಡ್ಕ ಸಮೀಪದ ಜೀವೆ ನೀರಕೋಡಿಯಲ್ಲಿ ಇತ್ತೀಚೆಗೆ ನಿಧನರಾದ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯ ನಿವೃತ್ತ ಹಿಂದಿ ಶಿಕ್ಷಕ ಗೋವಿಂದ ಭಟ್ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.
ಜಾತ್ಯಾತೀತ ವ್ಯವಸ್ಥೆಯ ಪ್ರತಿಪಾದಕರಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಅವರು ಪರಿವಾರ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಶಿಕ್ಷಕನಾಗಿಯೂ ಶಿಸ್ತು ಮತ್ತು ಅನುಕರಣೀಯ ಜೀವನಶೈಲಿಯಿಂದ ಜನಪ್ರಿಯರಾಗಿದ್ದರು. ಅವರ ಸಮರ್ಪಣಾ ಮನೋಭಾವದ ಅನುಕರಣೆಯೇ ಅವರಿಗೆ ಸಮರ್ಪಿಸುವ ನೈಜ ಶ್ರದ್ಧಾಂಜಲಿ ಎಂದು ಡಾ ಪ್ರಭಾಕರ ಭಟ್ ಹೇಳಿದರು.
ಸಂಘ ಪರಿವಾರದ ಹಿರಿಯ ಮುಖಂಡ ರಾಧಾಕೃಷ್ಣ ಅಡ್ಯಂತಾಯ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಸಂತ ಮಾಧವ, ರಮೇಶ್ ಕಲ್ಲಡ್ಕ, ಮಹೇಶ್ ಭಟ್ ಕಜೆ ಮೊದಲಾದವರು ಮಾತನಾಡಿದರು.
ಡಾ ಕಮಲಾ ಪ್ರಭಾಕರ ಭಟ್, ಸಂಘ ಪರಿವಾರದ ಪ್ರಮುಖರು, ಶ್ರೀರಾಮ ವಿದ್ಯಾಸಂಸ್ಥೆ ಯವರು, ದಿವಂಗತ ಗೋವಿಂದ ಭಟ್ ಅವರ ಒಡನಾಡಿಗಳು, ಹಿತೈಷಿಗಳು, ಸಹೋದ್ಯೋಗಿಗಳು, ಬಂಧುಗಳು, ಕುಟುಂಬದವರು ಉಪಸ್ಥಿತರಿದ್ದರು.
ಶ್ರೇಯಸ್ ಸ್ವಾಗತಿಸಿದರು. ರಾಜೇಶ್ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಸಹಭೋಜನ ನಡೆಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


