ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪಿಯು ಸಾಧಕರಿಗೆ ಅಭಿನಂದನೆ - ಸನ್ಮಾನ

Upayuktha
0

ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 75 ಶೇಕಡಾ ಮಂದಿಗೆ ವಿಶಿಷ್ಟ ಶ್ರೇಣಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳಿಂದ ಪರೀಕ್ಷೆಗೆ ಹಾಜರಾದ ಒಟ್ಟು 484 ವಿದ್ಯಾರ್ಥಿಗಳಲ್ಲಿ 363 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಶೇ. 75 ಮಂದಿ ವಿಶಿಷ್ಟ ಶ್ರೇಣಿಯಲ್ಲೇ ಉತ್ತೀರ್ಣ ಹೊಂದಿದ ದಾಖಲೆ ಮೂಡಿಬಂದಿದೆ. ಪಿಯು ಫಲಿತಾಂಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಲಾಯಿತು. 


ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 597 ಅಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ ನಿವಾಸಿ ಶಾರ್ವರೀ ಆರ್ ಎಸ್ ಹಾಗೂ ಇವರ ತಾಯಿ  ಸುಗುಣ ಎ., 594 ಅಂಕವನ್ನು ಪಡೆದು 6ನೇ ಸ್ಥಾನ ಪಡೆದ ತ್ರಿಶೂಲ್ ಎನ್.ಡಿ ಹಾಗೂ ಇವರ ತಂದೆ ದಾಮೋದರ ಎನ್., 594 ಅಂಕವನ್ನು ಪಡೆದು 6ನೇ ಸ್ಥಾನ ಪಡೆದ ಗಗನ್ ಕೆ.ಆರ್. ಹಾಗೂ ತಂದೆ ರಾಜಶೇಖರ್, ವಾಣಿಜ್ಯ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಪಡೆದ ಪ್ರತೀಕ್ಷಾ ಶೆಣೈ ಹಾಗೂ ಪೋಷಕರಾದ ಎಮ್. ನರಸಿಂಹ ಶೆಣೈ ಹಾಗೂ ಶ್ರೀಲಕ್ಷ್ಮೀ ಶೆಣೈ ಹಾಗೂ 593 ಅಂಕ ಪಡೆದ ಅನನ್ಯಾ ವಿ. ಹಾಗೂ ಇವರ ತಾಯಿ ಹೇಮಲತಾ ವಿ. ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಗೌರವಿಸಿದರು. 


ಈ ಸಂದರ್ಭದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಪಾಧ್ಯಾಯ, ಉಪಪ್ರಾಂಶುಪಾಲೆ ಶೈನಿ, ಉಪನ್ಯಾಸಕರಾದ ಕಿಶೋರ್ ಸಿ., ರಾಮ ಪ್ರಸಾದ್, ಸತೀಶ್ ಇರ್ದೆ, ಸಚಿನ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top