ಸಾಗರ: ನಗರದ ವಿವಿಧ ಕಂದಾಯಗಳನ್ನು ಪಾವತಿಸಲು ನಗರಸಭೆಯಲ್ಲಿ ಕೈಗೊಳ್ಳಲಾಗಿರುವ ಸುಗಮ ವ್ಯವಸ್ಥೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಗಮನ ಸೆಳೆದಿವೆ.
ಈ ವರ್ಷದ ಕಂದಾಯ ಪಾವತಿಸಲು ಬಂದ ಒಬ್ಬ ಹಿರಿಯ ನಾಗರಿಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬೆಳಗ್ಗೆಲೇ ನಗರಸಭೆಗೆ ತೆರಳಿದಾಗ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದು, ಸಹಕಾರದಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಸಿಬ್ಬಂದಿಗಳಾದ ರವಿ ಕಂಬಳಿಕೊಪ್ಪ ಅವರು ಗೌರವಪೂರ್ವಕವಾಗಿ ಕೂರಿಸಿ ಅಗತ್ಯ ಮಾಹಿತಿಗಳನ್ನು ನೀಡಿದ್ದು, ಕಾಫಿ ಅಥವಾ ತಿಂಡಿ ಬಗ್ಗೆ ವಿಚಾರಿಸುವ ಮೂಲಕ ಆತ್ಮೀಯತೆ ತೋರಿದರು. ತೆರಿಗೆ ಪಾವತಿ ಪ್ರಕ್ರಿಯೆಯನ್ನೂ ಸ್ಪಷ್ಟವಾಗಿ ವಿವರಿಸಿದರು. ಮಾರ್ತಮ್ಮ ಅವರು ಸಹ ಹಣ ಪಾವತಿಸಲು ನೆರವಾಗಿ, ಹಿರಿಯ ನಾಗರಿಕರಿಗೆ ತೊಂದರೆ ಆಗದಂತೆ ಎಲ್ಲಾ ಕಾರ್ಯಗಳನ್ನು ತಾವೇ ಮುಗಿಸಿ ಕೊಟ್ಟರು. ಇತರ ಹಿರಿಯರಿಗೂ ತಂಪು ಪಾನೀಯ ಬೇಕೇ ಎಂದು ವಿಚಾರಿಸಿರುವುದು ಗಮನಾರ್ಹವಾಗಿದೆ.
ಈ ವ್ಯವಸ್ಥೆಯಿಂದ ಕಂದಾಯ ಪಾವತಿ ಪ್ರಕ್ರಿಯೆ ವೇಗವಾಗಿ ಪೂರ್ಣಗೊಂಡಿದ್ದು, ಸುಮಾರು ಎರಡು ಗಂಟೆಗಳೊಳಗೆ ಎಲ್ಲಾ ಕೆಲಸಗಳು ಮುಗಿದಿವೆ. ಇದರಿಂದ ನಾಗರಿಕರಿಗೆ ಸಮಯ ಉಳಿತಾಯವಾಗಿದ್ದು, ಅನುಕೂಲಕರ ಅನುಭವ ಒದಗಿಸಿದೆ.
ನಗರಸಭಾ ಆಯುಕ್ತರಾದ ನಾಗಪ್ಪ ಅವರ ನೇತೃತ್ವದಲ್ಲಿ ಇಂತಹ ವ್ಯವಸ್ಥೆ ಜಾರಿಗೊಂಡಿರುವುದಕ್ಕೆ ಸಾರ್ವಜನಿಕರಿಂದ ಅಭಿನಂದನೆ ವ್ಯಕ್ತವಾಗಿದೆ. ಕಳೆದ ಮೂರು ವರ್ಷಗಳಿಂದ ಈ ರೀತಿಯ ಸೌಲಭ್ಯಕ್ಕಾಗಿ ಪ್ರಯತ್ನಿಸಿದ ಹಿರಿಯ ನಾಗರಿಕ ಅಶೋಕ ಕುಮಾರ ಅವರ ಪ್ರಯತ್ನಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.
ನಾಗರಿಕರು ಈ ರೀತಿಯ ಅನುಕೂಲಗಳನ್ನು ಸದುಪಯೋಗಪಡಿಸಿಕೊಂಡು, ಸ್ವಯಂ ಪ್ರೇರಿತರಾಗಿ ಕಂದಾಯ ಪಾವತಿಸುವ ಮೂಲಕ ನಗರ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


