'ನಾನು ಮತ್ತು ನನ್ನ ಗೀಚು' ಸಾಹಿತ್ಯ ಬಳಗದಿಂದ ಯುಗಾದಿಯ ಸ್ಪರ್ಧಾ ಫಲಿತಾಂಶ ಪ್ರಕಟ

Upayuktha
0



ಮಂಗಳೂರು: ಕಳೆದ ಸುಮಾರು ಏಳು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ಗುರುತಿಸಿಕೊಂಡಿರುವ, ರಾಜ್ಯದ ವಿವಿಧ ಪ್ರದೇಶಗಳ, ಅಂತರ್ ರಾಜ್ಯ, ಹಾಗೂ ವಿದೇಶಿ ಕನ್ನಡ ಸಾಹಿತಿಗಳನ್ನೊಳಗೊಂಡ ಕೊಂಬಾರಿನ 'ನಾನು ಮತ್ತು ನನ್ನ ಗೀಚು' ಸಾಹಿತ್ಯ ಬಳಗ, 2026 ರ ಯುಗಾದಿ ವಿಶೇಷವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆ ಹಾಗೂ ಹನಿಗವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. 


ಪ್ರಥಮ ಬಹುಮಾನಕ್ಕೆ ಈ ಬಾರಿ ಒಟ್ಟು 5 ಕಥೆಗಳು ಆಯ್ಕೆ ಆಗಿದ್ದು ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಹಂಚಲಾಗುತ್ತದೆ. ಉಳಿದಂತೆ ಇತರ ಬಹುಮಾನಿತ ಬರಹಗಳಿಗೆ ಪುಸ್ತಕ ಬಹುಮಾನ ಹಂಚಲಾಗುತ್ತದೆ. 




ಪ್ರವೀಣ ಕುಮಾರ್ ಸಾರಥ್ಯ:

ಕಳೆದ ಹಲವು ವರ್ಷಗಳಿಂದ ಗೀಚು ಬಳಗ ಈ ಸಾಹಿತ್ಯ ಸ್ಪರ್ಧೆಗಳನ್ನು ಕನ್ನಡದ ವಿವಿಧ ಪ್ರಕಾರಗಳಾದ ಕಥೆ, ಕಿರುಗಥೆ, ನ್ಯಾನೋ ಕತೆ, ಕವನ, ಹನಿಗವನ, ಚುಟುಕು, ರೂಬಾಯಿ, ಹೈಕು, ತನಗ, ಗಝಲ್, ಜಡೆಗವನ, ಅಬಾಬಿ ವ್ಯಂಗ್ಯ ಚಿತ್ರ ಹೀಗೆ ಹತ್ತು ಹಲವು ವಿಭಾಗಗಳಲ್ಲಿ  ನಡೆಸುತ್ತಿದ್ದು ಈವರೆಗೆ ಸುಮಾರು ನಾಲ್ಕೈದು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ನಗದು ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ಹಂಚಲಾಗಿದೆ. ಇಲ್ಲಿನ ಬರಹಗಾರರೇ ಬರೆದಿರುವ 'ಬದುಕು ನೂರೊಂದು' ಹಾಗೂ 'ಜೀವ ವೀಣೆ ಮೀಟಿದ ಜಾಣೆ'  ಪುಸ್ತಕಗಳನ್ನು ಕೊಂಬಾರಿನ ಕುಮಾರಪುರ ಪ್ರಕಾಶನವು ಪ್ರಕಟಿಸಿದೆ.


ಕೊಂಬಾರು ಎಂಬ ಕುಗ್ರಾಮದಲ್ಲಿ ಹುಟ್ಟಿ ಆರಂಭವಾದ ಈ ಸಾಹಿತ್ಯ ಬಳಗ ಕನ್ನಡದ ಸಾರಸ್ವತ ಲೋಕಕ್ಕೆ ತನ್ನದೇ ಆದ ಅಳಿಲು ಸೇವೆ,  ಕೊಡುಗೆ ನೀಡಿ ಬರಹಗಾರರಲ್ಲಿ ಬರೆಯುವ ಕಿಚ್ಚು ಆಸಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ಹುಟ್ಟು ಹಾಕಿ  ತನ್ನ ಛಾಪನ್ನು ಮೂಡಿಸಿದೆ.‌


ಬೆಂಗಳೂರಿನಲ್ಲಿ ಹಿರಿಯ ವಕೀಲರೂ, ಬರಹಗಾರರೂ ಆಗಿರುವ  ಕೆ.ಎನ್. ಪ್ರವೀಣ ಕುಮಾರ್ ಕಟ್ಟೆ  ಗೀಚು ಬಳಗದ ಸಾರಥ್ಯ ವಹಿಸಿದ್ದು ಹಲವು ಸಾಹಿತ್ಯಾಸಕ್ತರು ಅವರಿಗೆ ಸಹಕರಿಸುತ್ತಿದ್ದಾರೆ.


ಸ್ಪರ್ಧಾ ವಿಜೇತರ ವಿವರ:

ಈ ಬಾರಿ ಹಮ್ಮಿಕೊಂಡಿದ್ದ ಗೀಚು 2026 ಕಥಾ ಸ್ಪರ್ಧೆಯಲ್ಲಿ ಐದು ಅತ್ಯುತ್ತಮ ಕಥೆಗಳ ಆಯ್ಕೆಯಾಗಿವೆ. ಅವುಗಳೆಂದರೆ- ವರಲಕ್ಷ್ಮಿ ಮಂಜುನಾಥ್ ಅವರ 'ಮೇಷ್ಟ್ರು', ನರೇಂದ್ರ ಎಸ್.ಗಂಗೊಳ್ಳಿಯವರ 'ಕಬಂಧ ಬಾಹು', ವಾಗೀಶ ಆರಾಧ್ಯಮಠರ 'ದಿಶಾ', ಸಂಧ್ಯಾ ಭಟ್ ಅರಂತಾಡಿ ಬರೆದ 'ಅರುಣಿಮಾ' ಮತ್ತು ನಗುವಾ ನಯನ ಬರೆದಿರುವ 'ಸಾಕ್ಷಾತ್ಕಾರ' ಕಥೆಗಳು ಪ್ರಥಮ ಬಹುಮಾನಕ್ಕೆ ಅರ್ಹವಾಗಿವೆ.


ಹನಿಗವನ ವಿಭಾಗದಲ್ಲಿ ಖ್ಯಾತ ಕವಯತ್ರಿ ವಿದ್ಯಾಶ್ರೀ ಅಡೂರ್ ಅವರು ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟಿದ್ದು, ವಾಗೀಶ ಆರಾಧ್ಯ ಮಠ ಇವರ ಕವನ ಅತ್ಯುತ್ತಮ ಸ್ಥಾನ ಪಡೆದರೆ ಉತ್ತಮ ಸ್ಥಾನ ವನ್ನು ನಗುವ ನಯನ ಹಾಗೆಯೇ ಮೆಚ್ಚುಗೆಯ ಸ್ಥಾನಗಳನ್ನು ಸತ್ಯವತಿ ಭಟ್ ಕೊಳ್ಚಪ್ಪು ಮತ್ತು ನರೇಂದ್ರ ಎಸ್. ಗಂಗೊಳ್ಳಿ ಪಡೆದುಕೊಂಡಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top