ಬೇವೂರ ಕಾಲೇಜು ಶಿಬಿರಾರ್ಥಿಗಳಿಂದ ಶ್ರಮದಾನ

Upayuktha
0


ಬಾಗಲಕೋಟೆ: ತಾಲೂಕಿನ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ವತಿಯಿಂದ ಒಂದು ವಾರದ ತನಕ ಸಮೀಪದ ಬಿಲ್‌ಕೆರೂರ ಗ್ರಾಮದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಂಡು ವಿವಿಧ ಕಡೆಗಳಲ್ಲಿ ಶ್ರಮದಾನ ಮಾಡಲಾಯಿತು. ಶಿಬಿರಾರ್ಥಿಗಳನ್ನು ಐದು ತಂಡಗಳಾಗಿ ವಿಂಗಡಿಸಿ ಗ್ರಾಮದ ವಿವಿಧ ಕಡೆಗಳಲ್ಲಿ ಶ್ರಮದಾನ ಕೈಗೊಳ್ಳಲಾಯಿತು.


ಶಾಲಾ ಆವರಣ ಸ್ವಚ್ಚತೆ: ಬಿಲ್‌ಕೆರೂರಿನ ಕರವೀರೇಶ್ವರ ಪ್ರೌಢ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಮುಳ್ಳು ಕಂಟೆಗಳನ್ನು ತೆರವು ಗೊಳಿಸಲಾಯಿತು. ನಳದ ನೀರು ಪಡೆಯುವ ಜಾಗದಲ್ಲಿ ಇರಲಾಗಿದ್ದ ಗುಂಡಿಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲು ತೆಗ್ಗುಗಳನ್ನು ತೆಗೆಯಲಾಯಿತು.


ಮಠದ ತೋಟದಲ್ಲಿ ಅಗತಿಗಳ ನಿರ್ಮಾಣ: ಬಿಲ್ ಕೆರೂರಿನ ಬಿಲ್ವಾಶ್ರಮದ ತೋಟದಲ್ಲಿ ಇರಲಾಗಿದ್ದ ಸಣ್ಣ ಸಣ್ಣ ಸಸಿಗಳಿಗೆ ನೀರು ನಿಲ್ಲುವಂತಹ ವ್ಯವಸ್ಥೆ ಕಲ್ಪಿಸಲು 80 ಕ್ಕೂ ಅಧಿಕ ಕಡೆಗಳಲ್ಲಿ ಅಗತಿ ನಿರ್ಮಾಣ ಮಾಡಿ ಅಲ್ಲಿರುವ ಮುಳ್ಳುಕಂಟೆಗಳನ್ನು ತೆಗೆದು ಹಾಕಲಾಯಿತು. ಗ್ರಾಮದ ಹಿರಿಯರಿಂದ ಶ್ರೀ ಮಠದ ಪೂಜ್ಯರಿಂದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ ಎನಿಸಿತು.


ರಥ ಬೀದಿಯಲ್ಲಿ ಶ್ರಮದಾನ: ಬಿಲ್ ಕೆರೂರಿನ ಬಿಲ್ವಾಶ್ರಮದ ರಥದ ಮುಖ್ಯ ಬೀದಿಯಲ್ಲಿ ಶಿಬಿರಾರ್ಥಿಗಳು ಶ್ರಮದಾನ ಕೈಗೊಂಡು ಅಲ್ಲಿರುವ ಕಲ್ಲು ಮುಳ್ಳುಗಳನ್ನು ತೆರವುಗೊಳಿಸಿದರು. ನಾವೆಲ್ಲರೂ ಒಂದಾಗಿ ಬಾಳೋಣ ಬನ್ನಿ ಎಂಬ ದ್ಯೇಯದಂತೆ ಶಿಬಿರಾರ್ಥಿಗಳು ಗ್ರಾಮದ ವಿವಿಧ ಕಡೆಗಳಲ್ಲಿ ಶಿಸ್ತಿನಿಂದ ಶ್ರಮದಾನ ಕೈಗೊಂಡರು.


ಮಠ, ಮಂದಿರ, ಮಸೀದಿಗಳಲ್ಲಿ ಶ್ರಮದಾನ: ಗ್ರಾಮದ ಆಂಜನೇಯ ದೇವಾಸ್ಥಾನ,ಬಿಲ್ವಾಶ್ರಮ ಹೀರೆಮಠ ಇಲ್ಲಿ ಶ್ರಮದಾನ ಕೈಗೊಂಡ ಶಿವಿರಾರ್ಥಿಗಳು ಉತ್ಸಾಹದಿಂದ ಕಾರ್ಯಗಳನ್ನು ಪೂರೈಸಿದರು. ಆಂಜನೇಯ ದೇವಾಸ್ಥಾನದ ಪಕ್ಕದಲ್ಲಿ ಇರಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಿ ಅಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಿದರು. ಗ್ರಾಮದ ಮಸೀದಿ ಕಟ್ಟೆಯಲ್ಲಿ ಕಸಗೂಡಿಸಿ ಅಲ್ಲಿನ ಗಿಡಮರಗಳ ತಪ್ಪಲಗಳ ತ್ಯಾಜ್ಯವನ್ನು ತೆರವುಗೊಳಿಸಿ ಹತ್ತಾರು ಕೊಡಗಳಿಂದ ವಿದ್ಯಾರ್ಥಿಗಳೆ ನೀರನ್ನು ಹೊತ್ತು ತಂದು ಮಸೀದಿಯ ಕಟ್ಟೆಯನ್ನು ಶುಚಿಗೊಳಿಸಿದರು. ಭಾವೈಕ್ಯತೆಯ ಮಂತ್ರ ಜಪಿಸುತ್ತಾ ಗ್ರಾಮದ ವಿವಿಧ ಕಡೆಗಳಲ್ಲಿ ಸ್ವಚ್ಚತಾ ಶ್ರಮದಾನ ಕೈಗೊಂಡರು.


ಶ್ರಮದಾನ ಕೈಗೊಂಡ ಶಿಬಿರಾರ್ಥಿಗಳಿಗೆ ಗ್ರಾಮದ ಯುವಕರು ಹಿರಿಯರು ತಂಪುಪಾನೀಯದ ವ್ಯವಸ್ಥೆ ಕಲ್ಪಿಸಿದರು. ಈ ಶ್ರಮದಾನ ಕಾರ್ಯದಲ್ಲಿ ಶಿಬಿರದ ಅಧ್ಯಕ್ಷ್ಯರಾದ ಡಾ. ಜಗದೀಶ ಗು. ಭೈರಮಟ್ಟಿ, ಯೋಜನಾಧಿಕಾರಿಗಳಾದ ಜಿ.ಎಸ್. ಗೌಡರ, ಸಲಹಾ ಸಮಿತಿಯ ಡಾ. ಎಸ್.ಬಿ. ಹಂಚಿನಾಳ, ಡಾ.ಎ.ಎಂ. ಗೊರಚಿಕ್ಕನವರ, ಉಪನ್ಯಾಸಕರಾದ ಎಸ್.ಎಸ್ ಆದಾಪೂರ, ಬಿ.ಬಿ. ಬೇವೂರ, ಡಿ.ವೈ. ಬುಡ್ಡಿಯವರ, ಶ್ರೀಮತಿ ಶ್ವೇತಾ ಕಾಗಿಯವರ ಶಿಬಿರದ ಪ್ರತಿನಿಧಿಗಳಾದ ಅಭಿಷೇಕ ಪೂಜಾರಿ, ಭಾಗಿರಥಿ ಬಾರಕೇರ, ಬೋಧಕೇತರ ಸಿಬ್ಬಂದಿಗಳಾದ ಆರ್.ಬಿ. ಕರಡಿಗುಡ್ಡ, ಶಿವು ಕಟಗಿ, ಪ್ರದೀಪ ಪಡಶೆಟ್ಟಿ ಸೇರಿದಂತೆ ಶಿಬಿರಾರ್ಥಿಗಳು ಭಾಗಿಯಾಗಿದ್ದರು.


ಶಿಬಿರಕ್ಕೆ ಭೇಟಿ ನೀಡಿ ಶಿಬಿರದ ಕುರಿತು ಪರಿಶೀಲನೆ ನಡೆಸಿದ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಎಸ್.ಎಸ್ ಭೂಮಣ್ಣವರ ಶಿಬಿರದ ಶಿಸ್ತು ಊಟೋಪಚಾರ, ಶ್ರಮದಾನದ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿ ಮುಂತಾದವುಗಳನ್ನು ಪರಿಶಿಲಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಗ್ರಾಮೀಣ ಜನರೊಡನೆ ಸಾಮರಸ್ಯದ ಬದುಕು ಸಾಧಿಸಲು ಈ ತರಹದ ಶಿಬಿರಗಳು ಅವಶ್ಯಕ ಎಂದು ಅವರು ಹೇಳಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top