ಕೆಂಗೇರಿ ಕರಗ ಮಹೋತ್ಸವ: ಶ್ರೀಹೃದ್ಯಾ ಅಕಾಡೆಮಿ ತಂಡದಿಂದ ಮನಮೋಹಕ ನೃತ್ಯ ಪ್ರದರ್ಶನ

Upayuktha
0


ಬೆಂಗಳೂರು: ನಗರದ ಕೆಂಗೇರಿಯ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಮಾರ್ಚ್ 30ರಂದು ನಡೆದ 50ನೇ ವರ್ಷದ ಸುವರ್ಣ ಕರಗ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಹೃದ್ಯಾ ಅಕಾಡೆಮಿ ಬಳಗದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು.


ರಾತ್ರಿ 7ರಿಂದ 9 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ನೃತ್ಯ ಗುರು ವಿದುಷಿ ಶ್ರೀಮತಿ ರೂಪಶ್ರೀ ಕೆ. ಎಸ್. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಮನಮೋಹಕ ನೃತ್ಯಗಳನ್ನು ಪ್ರಸ್ತುತಪಡಿಸಿದರು.


ಹೃದ್ಯಾ ಭಟ್ ಕೆ, ಅಶ್ವತಿ ಮಹೇಶ್, ಅನನ್ಯ ಡಿ.ಎಚ್., ಧನ್ಯತಾ, ಅಹನ, ಪ್ರೀತಿ ಎಚ್.ಎಸ್., ರಿತಿ ಎಚ್.ಎಸ್., ದುತಿಶ್ರೀ ಸಿ., ನಮಿತ ಎಂ., ಪ್ರಣತಿ ಜಿ.ಎಸ್., ಲಿಶಿಕ ಗೌಡ, ನಿಶ್ಚಿತ, ಧನ್ಯತಾ ನಾಡಗೌಡರ್, ಪ್ರಣಮ್ಯ ಎಸ್., ಸಾಯಿ ಹಾರಿಕ, ಜಿನೋವಿಯ ಪಿ., ನಿವಿಶ ವಿನೋದ್, ವೃಷಭ, ಶ್ರದ್ಧಾ ಎಚ್.ಎಸ್. ಹಾಗೂ ಸಮನ್ವಿ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ವಿವಿಧ ನೃತ್ಯ ಪ್ರಕಾರಗಳನ್ನು ಆಕರ್ಷಕವಾಗಿ ಪ್ರದರ್ಶಿಸಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿದರು.


ಸಾಂಸ್ಕೃತಿಕ ವೈಭವವನ್ನು ಮೆರೆದ ಈ ನೃತ್ಯ ಕಾರ್ಯಕ್ರಮ ಕರಗ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top