ಎಸ್ಸೆಸ್ಸೆಲ್ಸಿ ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಯ 93 ವಿದ್ಯಾರ್ಥಿಗಳು 95% ಕ್ಕಿಂತ ಅಧಿಕ ಅಂಕ

Upayuktha
0

 


ವಿದ್ಯಾಗಿರಿ: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಶಾಲೆಯ  75 ವಿದ್ಯಾರ್ಥಿಗಳು 625ರಲ್ಲಿ 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಾಧ್ವಿ ಪಿ.ವಿ (622),  ಪ್ರಥ್ವಿರಾಜ್ ರೆಡ್ಡಿ  (621), ಆದರ್ಶ (620), ಲಕ್ಷ್ಮಿ(619), ಪವನ್ ಕುಮಾರ್ (619), ಶಾಂಭವಿ (618), ಅನ್ವಿತಾ ಬಿ(617), ಶಂಕರ ಗೌಡ(617), ಶ್ರೇಯಾ (616), ಸುಶ್ಮಿತಾ (616), ದಿಲೀಪ್ (615), ಕೇಶವ (615), ಪ್ರಿಯಾಂಕ (615), ಸ್ವಾತಿ (615), ವೀರೇಶ್(615) ಅಂಕಗಳನ್ನು ಪಡೆಯುವುದರ ಮೂಲಕ ವಿಶಿಷ್ಠ ಸಾಧನೆ ಮೆರೆದಿದ್ದಾರೆ.


93 ವಿದ್ಯಾರ್ಥಿಗಳು ಶೇ. 95ಕ್ಕೂ ಅಧಿಕ, 184 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ, 247 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು. ನಾಲ್ಕು ವಿಷಯಗಳಲ್ಲಿ  5 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 13, ಎರಡು ವಿಷಯಗಳಲ್ಲಿ 37, ಹಾಗೂ 1 ವಿಷಯದಲ್ಲಿ 85 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ. ಆಳ್ವಾಸ್ ಒಟ್ಟು ಪ್ರೌಢಶಾಲಾ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯಲ್ಲಿ 95%ಕ್ಕಿಂತ 139 ವಿದ್ಯಾರ್ಥಿಗಳು ಅಂಕವನ್ನು ಗಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top