ನಿರಂಜನ ಪ್ರಶಸ್ತಿಗೆ ಪ್ರೊ. ನರೇಂದ್ರ ರೈ ದೇರ್ಲ, ಶಂಕರ ಸಾಹಿತ್ಯ ಪ್ರಶಸ್ತಿಗೆ ಜಗದೀಶ ಶರ್ಮ ಸಂಪ ಆಯ್ಕೆ

Upayuktha
0

ವಿವೇಕಾನಂದ ಕಾಲೇಜಿನಿಂದ ಕೊಡಲ್ಪಡುವ  ಪ್ರಶಸ್ತಿ



 
ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರವು ಕೊಡಮಾಡುವ 2026ನೇ ಸಾಲಿನ ನಿರಂಜನ ಪ್ರಶಸ್ತಿಗೆ ಪ್ರೊ. ನರೇಂದ್ರ ರೈ ದೇರ್ಲ ಅವರನ್ನು ಹಾಗೂ  2026ನೇ ಸಾಲಿನ ಶಂಕರ ಸಾಹಿತ್ಯ ಪ್ರಶಸ್ತಿಗೆ ಜಗದೀಶ ಶರ್ಮ ಸಂಪ ಅವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಆಯ್ಕೆ ಮಾಡಿದೆ ಮಾಡಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಡಾ. ನರೇಂದ್ರ ರೈ ದೇರ್ಲ

 ದೇರ್ಲರು . ಜಿಲ್ಲೆಯ  ಪುತ್ತೂರು ತಾಲೂಕಿನ ಮಾಡಾವುನಲ್ಲಿ ವಾಸವಾಗಿದ್ದು ಕನ್ನಡದ ಪ್ರಸಿದ್ಧ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಹಾಗೂ ಪರಿಸರ ಮತ್ತು ಕೃಷಿ ಚಿಂತಕರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆ ಎನ್ನುವ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ ಎಚ್ ಡಿ ಪದವಿ ಪಡೆದಿದ್ದು ಇವರು ಪರಿಸರ ಕಾಳಜಿಯುಳ್ಳ ಬರಹಗಾರರು. ಸಾವಯವ ಕೃಷಿಯಲ್ಲಿ ಇವರಿಗೆ ಹೆಚ್ಚಿನ ಆಸಕ್ತಿಯಿದ್ದು, ಸ್ವತಃ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದಾರೆ. ವಿವಿಧ ಕನ್ನಡ ಪತ್ರಿಕೆಗಳಲ್ಲಿ ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಲೇಖನಗಳನ್ನು ಹಾಗೂ ಅಂಕಣಗಳನ್ನು ಬರೆಯುತ್ತಾ ಇದ್ದಾರೆ. ಶ್ರೀಯುತರು ಹಲವಾರು ಪುಸ್ತಕಗಳನ್ನು ಬರೆದಿದ್ದು, ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ.

 

ಜಗದೀಶ ಶರ್ಮ ಸಂಪ

 ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ಶ್ರೀಯುತರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಎಂ. ಪದವಿ ಪಡೆದಿದ್ದಾರೆ. ಗೋಕರ್ಣದ ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣ ಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿರುವ ಅವರು, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಲಂಕಾರ ವಿದ್ವತ್ ವಿದ್ಯಾಭ್ಯಾಸ ಮಾಡಿದ್ದಾರೆ. ಅವರು ಅದ್ವೈತ ವೇದಾಂತ, ನ್ಯಾಯ-ವೈಶೇಷಿಕ, ಸಾಂಖ್ಯ-ಯೋಗ ತತ್ವಶಾಸ್ತ್ರಗಳಲ್ಲಿ ಆಳವಾದ ಅಧ್ಯಯನವನ್ನು ನಡೆಸಿದ್ದಾರೆ. ಪರಿಣಿತ ವಾಗ್ಮಿಯಾಗಿರುವ ಅವರು, ರಾಷ್ಟ್ರೀಯ ಮಟ್ಟದಸಂಸ್ಕೃತ ವಾಕ್ ಪ್ರತಿಯೋಗಿತಾದಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಸಂಸ್ಕೃತ ಸಾಹಿತ್ಯ, ಭಾಷಾ ವಿಜ್ಞಾನ, ಯೋಗ, ಪುರಾಣ ಸಾಹಿತ್ಯ ಮತ್ತು ಪ್ರಾಚೀನ ಜ್ಞಾನ ಕ್ಷೇತ್ರಗಳಲ್ಲಿ ವಿಶಿಷ್ಟ ಪಾಂಡಿತ್ಯ ಹೊಂದಿರುವ ಜಗದೀಶ್ ಶರ್ಮಾ ಸಮೃದ್ಧ ಬರಹಗಾರರಾಗಿದ್ದಾರೆ. ಅವರುಕನ್ನಡಪ್ರಭಮತ್ತುಹೊಸದಿಗಂತಪತ್ರಿಕೆಗಳಿಗೆ ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ, ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ ದಿನಾಂಕ 02-05-2026 ಶನಿವಾರದಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

 

 

Post a Comment

0 Comments
Post a Comment (0)
To Top