- ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625
- ನಾಗರಬೆಟ್ಟ ಆಕ್ಸಫರ್ಡ್ ಶಾಲೆಯ ವಿದ್ಯಾರ್ಥಿ
ಹುನಗುಂದ: ಹುನಗುಂದ ಪಟ್ಟಣದ ಕುವರಿ ಸೌಜನ್ಯ ಬಸವರಾಜ ಕಂದಕೂರ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ.
ಹುನಗುಂದ ಪಟ್ಟಣದ ಶಿಕ್ಷಕ ದಂಪತಿಗಳಾದ ಬಸವರಾಜ ಕಂದಕೂರ ಮತ್ತು ಸುಜಾತಾ ಕಂದಕೂರ ದಂಪತಿಗಳ ಮಗಳಾದ ಸೌಜನ್ಯ ಕಂದಕೂರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ತಾಲೂಕಿನ ಕೀರ್ತಿ ಇಡೀ ರಾಜ್ಯಕ್ಕೆ ತೋರಿದ್ದಾಳೆ.
ಸೌಜನ್ಯ ತನ್ನ ಪ್ರಾಥಮಿಕ ಶಿಕ್ಷಣವಾದ 1 ರಿಂದ 5 ತರಗತಿಯನ್ನು ಪಟ್ಪಣದ ಎಸ್.ಎಸ್. ಕಡಪಟ್ಪಿ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಪೂರೈಸಿ ನಂತರ 6 ಮತ್ತು 7 ನೆಯ ತರಗತಿಯನ್ನು ಪಟ್ಪಣದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಶಾಲೆಯಲ್ಲಿ ಮುಗಿಸಿ. 8 ರಿಂದ 10 ತರಗತಿಯ ಪ್ರೌಢ ಶಾಲಾ ಶಿಕ್ಷಣವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸಫರ್ಡ್ (ಪಾಟೀಲ) ಶಾಲೆಯಲ್ಲಿ ಕಲಿತು ಸದ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಕುಟುಂಬದವರೊಂದಿಗೆ ಸಂಭ್ರಮ- ಪ್ರೌಢ ಶಿಕ್ಷಣ ಇಲಾಖೆ ಬುಧವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಪಡಿಸುತ್ತಿದ್ದಂತೆ ಸೌಜನ್ಯ ಕಂದಕೂರ ರಾಜ್ಯಕ್ಕೆ ಪ್ರಥಮ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಮಗಳ ಸಾಧನೆಯನ್ನು ಕಂಡ ಶಿಕ್ಷಕ ದಂಪತಿಗಳು ಸೇರಿದಂತೆ ಕುಟುಂಬಸ್ಥರು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಮಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸುವುದರ ಜೊತಗೆ ಹರ್ಷ ವ್ಯಕ್ತಪಡಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


