ಎಸ್.ಎಸ್.ಎಲ್.ಸಿ: ಕೆಲವಡಿ ಸರ್ಕಾರಿ ಪ್ರೌಢಶಾಲೆಗೆ 95.16 % ಫಲಿತಾಂಶ

Upayuktha
0


ಕೆಲವಡಿ/ಗುಳೇದಗುಡ್ಡ: ಗುಳೇದಗುಡ್ಡ ತಾಲೂಕಿನ ಕೆಲವಡಿ ಶ್ರೀ ಲಕ್ಷ್ಮೀ ರಂಗನಾಥ ಸರ್ಕಾರಿ ಪ್ರೌಢ ಶಾಲೆಯು 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರತಿಶತ 95.16 % ರಷ್ಟು ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯರಾದ ಸಂಗಮೇಶ ಕಲ್ಲೂರ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.


ಕೆಲವಡಿ ಶ್ರೀ ಲಕ್ಷ್ಮೀ ರಂಗನಾಥ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಸಕ್ತ 2025-26  ರ ಸಾಲಿನಲ್ಲಿ ಒಟ್ಟು 62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


ಶಾಲೆಗೆ ಅತಿ ಹೆಚ್ಚು ಅಂಕ ಪಡೆದವರು: ಕುಮಾರಿ ಶ್ರೀರಕ್ಷಾ ರಂಗನಗೌಡ ಗೌಡರ 598 ಅಂಕ ಪಡೆದು 95.68% ಪ್ರಥಮ ಸ್ಥಾನ, ಕುಮಾರಿ ಅನ್ನಪೂರ್ಣ ಜನಾರ್ಧನ ಪೂಜಾರಿ 591 ಅಂಕ ಪಡೆದು 94.56% ದ್ವಿತೀಯ ಸ್ಥಾನ, ಕುಮಾರಿ ಚೈತ್ರಾ ಚಂದ್ರಶೇಖರ ಕಾಳನ್ನವರ 589 ಅಂಕ ಪಡೆದು 94.24% ತೃತೀಯ ಸ್ಥಾನ ಮತ್ತು ಸರಸ್ವತಿ ಸಿದ್ದಪ್ಪ ಜೂಳಿ 589 ಅಂಕ ಪಡೆದು 94.24% ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

 

ಶಾಲೆಗೆ ಕೀರ್ತಿ ತಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಪೋಷಕರು ಅಭಿನಂದಿಸಿದ್ದಾರೆ. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top