ಸುದಾನ ಶಾಲೆಯಲ್ಲಿ ಬಾಲ್ ಬ್ಯಾಂಡ್ಮಿಟನ್ ತರಬೇತಿ ಸಂಪನ್ನ

Upayuktha
0


ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಮಾರ್ಚ್ 31 ರಂದು ಆರಂಭವಾದ ಬಾಲ್ ಬ್ಯಾಡ್ಮಿಂಟನ್ ತರಬೇತಿ ಶಿಬಿರವು ಏಪ್ರಿಲ್ 6ನೇ ತಾರೀಕಿನಂದು ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಂಡಿತು.


ಸುಮಾರು 45 ಕ್ಕಿಂತಲು ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಅಧಿಕಾರಿಯಾಗಿರುವ ಸುಶಾಂತ್ ಹಾರ್ವಿನ್ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ,ಉಪ ಮುಖ್ಯ ಶಿಕ್ಷಕಿಯಾಗಿರುವ ಲವೀನಾ ಹ್ಯಾನ್ಸ್ ರವರು "ಬಾಲ್ ಬ್ಯಾಡ್ಮಿಂಟನ್ ಆಟದಿಂದ ಸುಪ್ತ ಪ್ರತಿಭೆಗಳ ಶೋಧನೆಗೆ ಅವಕಾಶ ದೊರೆಯುವಂತಾಗುತ್ತದೆ" ಎಂದು ಅಭಿಪ್ರಾಯ ಪಟ್ಟರು.


ದೈಹಿಕ ಶಿಕ್ಷಣ ಶಿಕ್ಷಕಿಯರಾದ ಲೀಲಾವತಿ, ಜೀವಿತ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್ ರವರು ವಂದನಾರ್ಪಣೆಗೈದು, ಪುಷ್ಪರಾಜರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ತರಬೇತಿ ಶಿಬಿರವನ್ನು ಶಾಲೆಯ ಶಕ್ತಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿತ್ತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top