ಅಕ್ಷಯ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ "ಕೃತ್ವ ಫೆಸ್ಟ್ 2K26"

Upayuktha
0


ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಪದವಿ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ ಕೃತ್ವ ಫೆಸ್ಟ್ 2K26 ಸಂಪನ್ನಗೊಂಡಿತು.


ಅಕ್ಷಯ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಭೆಗಳ ಅನಾವರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳೇ ಆಯೋಜಿಸಿದ ಸ್ಪರ್ಧೆಯ ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.


ಕೃತ್ವ 2K26 ಇದರ ಸಂಯೋಜಕರಾದ ಗಂಧರ್ವ ಇವರು ಪ್ರಸ್ತಾವನೆ ಗೈದು ಕಾರ್ಯಕ್ರಮ ಕುರಿತಾಗಿ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಾ ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ಜಯಂತ್ ನಡುಬೈಲು ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ದೊರಕಿದ ವೇದಿಕೆಯಲ್ಲಿ ಸ್ಪರ್ಧಿಸಿ, ಅದರಿಂದ ಕಲಿತ ಶಿಕ್ಷಣ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗಲಿ ಎಂದು ಶುಭಹಾರೈಸಿದರು.


ಇದೇ ವೇಳೆ ಕಾಲೇಜು ವಿದ್ಯಾರ್ಥಿ ಪ್ರತಿನಿಧಿಗಳು ಕೃತ್ವ ವಿನ್ನರ್ಸ್ ಟ್ರೋಫಿಯನ್ನು ಅನಾವರಣಗೊಳಿಸಿದರು.


ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಅವರು ಶುಭ ಹಾರೈಸಿದರು.



ವೈಯಕ್ತಿಕ ಮತ್ತು ಗುಂಪು ಸೇರಿದಂತೆ 27 ಕಾಲೇಜುಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಂಗಭೂಮಿ ಕಲಾವಿದ, ನಿರೂಪಕ ಶ್ರೀ ವಿಜಯ್ ಶೋಭರಾಜ್ ಪಾವೂರ್ ಅವರು ಭಾಗವಹಿಸಿ, ಭಯ ಬಿಟ್ಟು ಬದುಕುವುದನ್ನು ಕಲಿಯಬೇಕು. ಶಿಕ್ಷಣದ ಜೊತೆ ಪ್ರತಿಭೆ ಎನ್ನುವುದು ಕೂಡ ಭವಿಷ್ಯವನ್ನು ನಿರ್ಧರಿಸುತ್ತದೆ. ಜೀವನದಲ್ಲಿ ಕುಗ್ಗದೆ ಮುನ್ನುಗ್ಗಿದರೆ ಗುರಿ ಮುಟ್ಟುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.


ನೃತ್ಯೋಪಾಸನ ಕಲಾ ಅಕಾಡೆಮಿ(ರಿ.) ಪುತ್ತೂರು ಇದರ ನೃತ್ಯ ಗುರುವಾದ ವಿಧುಷಿ ಶಾಲಿನಿ ಆತ್ಮಭೂಷಣ್ ಅವರು ಅವಕಾಶಗಳು ಯಾವಾಗಲೂ ಬರುವುದಿಲ್ಲ. ಅವಕಾಶ ಬಂದಾಗ ಕಾರ್ಯ ಸನ್ನದ್ದರಾಗಬೇಕು ಎನ್ನುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಅನ್ವೇಷಣೆಯನ್ನು ಮಾಡುತ್ತ ಸಾಗುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.


ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಶ್ ಕ್ಷತ್ರಿಯ ಮಾತನಾಡಿ ಕಾಲೇಜು ಅತೀ ಕಡಿಮೆ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಿದೆ. ಇದಕ್ಕೆ ಕಾರಣ ಅಕ್ಷಯ ಕಾಲೇಜಿನ ಆಡಳಿತ ಮಂಡಳಿಯ ಸಹಕಾರ, ಉಪನ್ಯಾಸಕರ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಛಲ. ಇದು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ವಾಗಿಯೂ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುವಂತದ್ದು ಎಂದು ಹೇಳಿ ಕಾಲೇಜಿಗೆ ಸ್ಪರ್ಧೆಗೆ ಬಂದ ಎಲ್ಲಾ ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.


ವೇದಿಕೆಯಲ್ಲಿ IQAC ನಿರ್ದೇಶಕಿಯಾದ ರಶ್ಮಿ, ಕಾಲೇಜು ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಕು. ಕಲಂದರ್ ಶಮಾ ಉಪಸ್ಥಿತರಿದ್ದರು.


ಅಕ್ಷಯ ಕಾಲೇಜಿನ ಮತ್ತು ಕೃತ್ವ ಫೆಸ್ಟ್ ಕುರಿತು ವಿದ್ಯಾರ್ಥಿಗಳ ಅನಿಸಿಕೆ :

ಲೋಲಾಕ್ಷ :

ಕಾಲೇಜಿನ ವ್ಯವಸ್ಥೆ, ಸಮಯ ಪಾಲನೆ, ಉಟೋಪಚಾರ ಒಟ್ಟಿನಲ್ಲಿ ಉತ್ತಮ ಸಂಸ್ಕಾರದಲ್ಲಿದೆ ಎಂದರು.

ರಶ್ಮಿ :

ಮೊದಲ ಬಾರಿಗೆ ಕಾಲೇಜಿಗೆ ಬಂದದ್ದು, ಇದಕ್ಕಿಂತ ಮೊದಲೇ ಬರಬೇಕಿತ್ತು ಅನಿಸಿತು, ಇನ್ನು ಮುಂದೆಯೂ ಬರುತ್ತೇನೆ. ಕಾರಣ ಕಾಲೇಜಿನ ಪ್ರತಿಯೊಂದು ಧನಾತ್ಮಕ ವಾತಾವರಣ ಎಂದರು.

ರಜಿತಾ ಕುಲಾಲ್ :

ಸ್ಪರ್ಧೆ ಅಂತ ಬಂದು ಕುಟುಂಬದ ವಾತಾವರಣ ದೊರಕಿತು. ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಸಹಕಾರ ನಿಜವಾಗಲೂ ಅದ್ಭುತ. ಹಾಗಾಗಿ ನಾವು ಎಂದಿಗೂ ಈ ವಿದ್ಯಾಸಂಸ್ಥೆಗೆ ಋಣಿಯಾಗಿದ್ದೇವೆ.


ಕೃತ್ವ 2K26 ಸಮಗ್ರ ಪ್ರಶಸ್ತಿ :

ಮ್ಯಾಪ್ಸ್ ಕಾಲೇಜು ಮಂಗಳೂರು.

ಪ್ರಥಮ ರನ್ನರ್ ಆಪ್ ಪ್ರಶಸ್ತಿ :

ವಿವೇಕಾನಂದ ಬಿ.ಎಡ್ ಕಾಲೇಜು ಪುತ್ತೂರು.

ದ್ವಿತೀಯ ರನ್ನರ್ ಆಪ್ ಪ್ರಶಸ್ತಿ :

ಸಂತ ಫಿಲೋಮಿನ ಕಾಲೇಜು ಪುತ್ತೂರು.


ವಿದ್ಯಾರ್ಥಿಗಳಾದ ಸೃಜನ್ ತೃತೀಯ ಬಿಸಿಎ ಮತ್ತು ಕಲಂದರ್ ಶಮಾ ಅತಿಥಿಗಳನ್ನು ಪರಿಚಯಿಸಿದರೆ, ವಿಜೇತರ ಪಟ್ಟಿಯನ್ನು ಉಪನ್ಯಾಸಕಿ ಕು. ಶೃತ ವಾಚಿಸಿದರು. ಕು. ಪ್ರಕೃತಿ ತೃಳ ಪ್ರಾರ್ಥಿಸಿ, ಉಪನ್ಯಾಸಕಿ ಸುಪ್ರಭ ಕೆ. ಮತ್ತು ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ರಾಕೇಶ್ ಸ್ವಾಗತಿಸಿ, ಉಪನ್ಯಾಸಕರಾದ ಅವಿನಾಶ್ ಮತ್ತು ವಿದ್ಯಾರ್ಥಿನಿ ಜೆನಿಫರ್ ಡಿಸೋಜ ತೃತೀಯ ಎಫ್. ವಂದಿಸಿದರು. ಆಯಿಷತುಲ್ ರಝೀನ ಬಾನು ಮತ್ತು ಕು. ಶಹನಾ ನಿರೂಪಿಸಿದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top