ಪದೋನ್ನತಿ: ಅಭಿನಂದನಾ ಸಮಾರಂಭ

Upayuktha
0


ಸುರತ್ಕಲ್‌: ಸುರತ್ಕಲ್ ರೋಟರಿ ಕ್ಲಬ್, ಹಿಂದು ವಿದ್ಯಾದಾಯಿನೀ ಸಂಘ (ರಿ) ಸುರತ್ಕಲ್ ಮತ್ತು ಇನ್ನರ್ ವೀಲ್ ಕ್ಲಬ್ ಸುರತ್ಕಲ್ ಸಹಭಾಗಿತ್ವದಲ್ಲಿ ಪಾರಾದೀಪ್ ಫೋಸ್ಫಟ್ಸ್ ಲಿಮೆಟೆಡ್ ಸಂಸ್ಥೆಯ ಮುಖ್ಯ ಉತ್ಪಾದನಾ ಅಧಿಕಾರಿ ಎಸ್. ಗಿರೀಶ್ ಅವರು ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವು ವಿರಾಟ್ ಸಭಾಭವನದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ ಎಸ್. ಗಿರೀಶ್ ಸಂಸ್ಥೆಯ ಏಳಿಗೆಗೆ ಹಾಗೂ ಸಾಮಾಜಿಕ ಸೇವೆಯ ನೆಲೆಯಲ್ಲಿ ಸಮುದಾಯದ ಅಭಿವೃದ್ದಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.


ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್.ಅವರು ಶುಭ ಹಾರೈಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಿರೀಶ್ ಎಸ್. ಕೃತಜ್ ಸಹಕರಿಸಿದ ಸರ್ವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.


ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಅಧ್ಯಕ್ಷತೆ ವಹಿಸಿ ರೋಟರಿಯ ತತ್ವಗಳನ್ನು ಅನುಸರಿಸಿ ಸಮುದಾಯದ ಉನ್ನತಿಗೆ ಪರಿಸರ ಅಭಿವೃದ್ದಿಗೆ ದಕ್ಷ ಅಧಿಕಾರಿ ಗಿರೀಶ್ ಎಸ್. ಅನುಪಮ ಕೊಡುಗೆ ನೀಡಿದ್ದಾರೆ ಎಂದರು.


ರೋಟರಿ ಯುವ ಸೇವಾ ನಿರ್ದೇಶಕ ಶ್ರೀಶ ಭಟ್ ಅಭಿನಂದನಾ ಪತ್ರ ವಾಚಿಸಿದರು. ನಿಯೋಜಿತ ಕಾರ್ಯದರ್ಶಿ ಶ್ರೀನಿವಾಸ ರಾವ್ ಪಾದೆಬೆಟ್ಟು ಪರಿಚಯಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ರಾಮಮೋಹನ್ ವೈ. ವಂದಿಸಿದರು. ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ ಕಾರ್ಯಕ್ರಮ ನಿರೂ ಪಿಸಿದರು.


ವಾಣಿ ಗಿರೀಶ್ ಎಸ್, ವಿದ್ಯಾದಾಯಿನಿ ಸಂಘದ ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ವಿರಾಟ್ ಸಂಸ್ಥೆಯ ಕಾರ್ಯದರ್ಶಿ ಪಿ.ವಿ. ಗಿರೀಶ್, ರೋಟರಿ ಝೋನಲ್ ಲೆಫ್ಟ್ನೆಂಟ್ ಸಂದೀಪ್ ರಾವ್ ಇಡ್ಯಾ, ರೋಟರಿ ಸಮುದಾಯ ಸೇವಾ ನಿರ್ದೇಶಕ ಚಂದ್ರಕಾಂತ್ ಮರಾಠೆ, ವೃತ್ತಿ ಸೇವಾ ನಿರ್ದೇಶಕಿ ಯಶೋಮತಿ ರವೀಂದ್ರನಾಥ್, ಇನ್ನರ್ ವೀಲ್ ಕ್ಲಬ್ ನ ಸುಮಿತ್ರಾ, ಕುಳಾಯಿ ಮಹಿಳಾ ಮಂಡಳಿಯ ರೇವತಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top