ಶ್ರೀನಿವಾಸ್ ವಿವಿಯಿಂದ ಶ್ರೀಮತಿ ಶಾಲಿನಿ ಸಿಕ್ವೇರಾ ಅವರಿಗೆ ಪಿ.ಎಚ್.ಡಿ ಪದವಿ

Upayuktha
0




ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಕೂಳೂರು ಮಂಗಳೂರು- ಇಲ್ಲಿನ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥೆಯಾಗಿರುವ ಶ್ರೀಮತಿ ಶಾಲಿನಿ ಸಿಕ್ವೇರಾ ಅವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.


ಸಾಹಿತಿ, ಪ್ರೀತಿ ಶೆಣೈ ಅವರ ಆಯ್ದ ಕಾದಂಬರಿಗಳಲ್ಲಿ "ಮಾನವ ಸಂಬಂಧಗಳ ವಿಮರ್ಶಾತ್ಮಕ ವಿಶ್ಲೇಷಣೆ" ಎಂಬ ಪ್ರಬಂಧಕ್ಕಾಗಿ ‘ಪಿ.ಎಚ್.ಡಿ’ ಪದವಿ ಲಭಿಸಿದೆ. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕರಾದ ಡಾ. ಎ. ಲೌರ್ದುಸಾಮಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಫೆಬ್ರವರಿ 9 ರಂದು ಮೌಖಿಕ ಪರೀಕ್ಷೆ ನಡೆದು, ಮಾರ್ಚ್ 28 ರಂದು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.


ಶ್ರೀ ಮೋಹನ್ ಥಾಮಸ್ ಸಿಕ್ವೇರಾ ಅವರ ಪತ್ನಿಯಾಗಿರುವ ಶ್ರೀಮತಿ ಶಾಲಿನಿ ಸಿಕ್ವೇರಾ, ಕಾಲೇಜಿನ ಸಾಹಿತ್ಯಿಕ ಸಂಘದಲ್ಲಿ ಸಕ್ರಿಯರಾಗಿದ್ದಾರೆ. ಬರವಣಿಗೆ, ವಾರ್ತಾಪತ್ರಿಕಾ ನಿರ್ವಹಣೆ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಯುವವಾಣಿ ಮೂಲಕ ವಿದ್ಯಾರ್ಥಿಗಳ ಆಂಗ್ಲ ಭಾಷಾ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top