ಸ್ಫೂರ್ತಿ ಸೆಲೆ: ನಿಮ್ಮ ಆಯ್ಕೆಗಳು ನಿಮ್ಮದೇ ಆಗಿರಲಿ

Upayuktha
0


ಹಲೋ, ಹೇಗಿದ್ದೀರಾ?

ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿ ಇರದಿದ್ದರೂ, ಬದುಕನ್ನು ರೂಪಿಸಿಕೊಳ್ಳುವ ಆಯ್ಕೆ ನಮ್ಮ ಕೈಯ್ಯಲ್ಲಿ ಇರುತ್ತದೆ. ನಮ್ಮ ಬದುಕೆಂಬ ವಾಹನದ   ಸ್ಟಿಯರಿಂಗ್  ನಮ್ಮ ಕೈಯ್ಯಲ್ಲಿ ಇದ್ದರೆ ನಮ್ಮ ಬದುಕು ಸರಿಯಾದ ದಾರಿಯಲ್ಲಿ ಸಾಗುತ್ತದೆ.


ಬದುಕಿನಲ್ಲಿ ನಾವು ಪ್ರತಿ ಬಾರಿಯೂ ಆಯ್ಕೆ ಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ. ಆದರೆ ನಾವು ಸ್ವಲ್ಪ ನಮ್ಮ ಮೆದುಳಿಗೆ ಕೆಲಸ ಕೊಟ್ಟರೆ  ಜೀವನದಲ್ಲಿ ನಮಗೆ ಬೇಕಾದಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು.


ಆದರೆ ನಮ್ಮ ಬದುಕಿನ ಸಂತೋಷದ ಕೀಲಿಕೈ ನಮ್ಮ ಜೇಬಿನೊಳಗಿರುವಂತೆ ನೋಡಿ ಕೊಳ್ಳಬೇಕು. ಆದರೆ ಅದನ್ನು ಒಯ್ದು ಇನ್ನೊಬ್ಬರ ಜೇಬಿನಲ್ಲಿ ಇಟ್ಟರೆ ನಾವು ಪಡಬಾರದ ಪಾಡು ಪಡಬೇಕಾಗುತ್ತದೆ.


ಹಾಗೆಯೇ ನಮ್ಮ ಜೀವನದ ಆಯ್ಕೆಗಳನ್ನು ಇನ್ನೊಬ್ಬರಿಗೆ ಮಾಡಲಿಕ್ಕೆ ಅವಕಾಶ ಮಾಡಿ ಕೊಟ್ಟರೆ, ನಮ್ಮ ಜೀವನ ಎಂಬ ವಾಹನದ ಡ್ರೈವರ್  ಬೇರೆ ಯಾರೋ ಬಂದು ಕುಳಿತು ಕೊಳ್ಳುತ್ತಾರೆ. ಆಗ ನಾವು ಕೇವಲ ಕಂಡಕ್ಟರ್ ಆಗಿ ಸೀಟಿ ಊದ ಬೇಕಾಗುತ್ತದೆ. ನಾವು ಬೇಕಾದರೆ ಇನ್ನೊಬ್ಬರ ಸಲಹೆ ಕೇಳ ಬಹುದು. ಆದರೆ ಅಂತಿಮ ನಿರ್ಣಯ ನಮ್ಮದೇ ಆಗಿರಬೇಕು.


ಯಾಕೆಂದರೆ ನಮ್ಮ ಜೀವನದ ಆಗುಹೋಗುಗಳಿಗೆ ನಾವೇ ಜವಾಬ್ದಾರರು ಅಲ್ಲವೇ? ಬದುಕಿನಲ್ಲಿ ಚೂಸಿ ಆಗಿ ನಡೆಯುವುದು ಕಲಿತುಕೊಂಡರೆ ನಮ್ಮ ತಟ್ಟೆಯಲ್ಲಿ ಹಿಟ್ಟಿನ ಹೊಟ್ಟೆಗೆ ಜೊಳ್ಳು ಬೀಳದಂತೆ ನೋಡಬಹುದು. ನಮ್ಮ ಶಿಕ್ಷಣ, ಸಂಪಾದನೆ, ಸಂಬಂಧಗಳು, ಸ್ಥಾನಮಾನ ಮುಂತಾದವುಗಳ ಬಗ್ಗೆ ಸೆಲೆಕ್ಟಿವ್ ಆಗುತ್ತಾ ಹೋದರೆ ನಮಗೆ ಅವುಗಳ ಮಹತ್ವ ಗೊತ್ತಾಗುತ್ತದೆ.


ಇದರಿಂದ ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ನಮ್ಮ ಜೀವನದ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ, ಎಲ್ಲರನ್ನೂ ದಡ ಸೇರಿಸಿದ ದೋಣಿ ನೀರಿನಲ್ಲಿ ಇರುವಂತೆ ಆಗುತ್ತದೆ ಅಲ್ಲವೇ? ಏನಂತೀರಾ?



- ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top