ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮಾತೃಸಮಾವೇಶ

Upayuktha
0

 ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಾತೆಯರಿಗೆ ಬಲುದೊಡ್ಡ ಜವಾಬ್ದಾರಿ: ಸಾಧ್ವಿ ಮಾತಾನಂದಮಯಿ




ಬದಿಯಡ್ಕ: ಉತ್ತಮ ಸಮಾಜದ ನಿರ್ಮಾಣದಲ್ಲಿ ಮಾತೆಯರಿಗೆ ಬಲುದೊಡ್ಡ ಜವಾಬ್ದಾರಿಯಿದೆ. ಪರಿಸರದ ಬಂಧುಗಳ ಮುಗ್ದತೆ, ನಿಷ್ಟೆ, ಸೇವಾ ಮನೋಭಾವವಿದ್ದರೆ ಭಗವಂತನ ಅನುಗ್ರಹವಿರುತ್ತದೆ ಎಂಬುದಕ್ಕೆ ಈ ಪೆರಡಾಲವೇ ಸಾಕ್ಷಿಯಾಗಿದೆ. ಸಮರ್ಪಣಾ ಭಾವ, ಸೇವಾಮನೋಭಾವ ಇದ್ದ ಊರು ಅಭಿವೃದ್ಧಿಯನ್ನು ಕಾಣುತ್ತದೆ ಎಂದು ಒಡಿಯೂರು ಶ್ರೀ ದತ್ತಾತ್ರೇಯ ಕ್ಷೇತ್ರದ ಪರಮಪೂಜ್ಯ ಸಾಧ್ವಿ ಮಾತಾನಂದಮಯಿ ನುಡಿದರು.


ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 5ನೇ ದಿನ ನಡೆದ ಧಾರ್ಮಿಕ ಸಭೆ ಮಾತೃಸಮಾವೇಶದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಾ ದೇವಸ್ಥಾನ ಹಾಗೂ ಶಾಲೆ ಆ ಊರಿಗೆ ಕಣ್ಣು ಇದ್ದಂತೆ. ಅವೆರಡನ್ನೂ ಜೋಪಾನವಾಗಿ ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯ. ಇಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ನಾಡಿನ ಜನರ ಒಗ್ಗಟ್ಟಿನ ಫಲವಾಗಿದೆ ಎಂದರು.


ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕಳ ಮಲಾರ್‌ಬೀಡು ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಡಾ| ಆಶಾ ಜ್ಯೋತಿ ರೈ ಮಾಲಾಡಿ ಧಾರ್ಮಿಕ ಭಾಷಣ ಮಾಡಿದರು. ಹಿರಿಯ ಸ್ತ್ರೀ ರೋಗ ತಜ್ಞೆ ಡಾ| ಶಾಂಭವಿ ಎಚ್., ಡಾ| ಕವಿತಾ ಶೆಟ್ಟಿ ಕಂಡೆತ್ತೋಡಿ, ಡಾ| ವಸುಂಧರಾ ಕೈಲಾಸನಾಥ್, ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.


ಡಾ| ಮಾಲತಿ ಪ್ರಕಾಶ್ ನೀರ್ಚಾಲು, ಪ್ರಮೀಳಾ ನಾಯ್ಕ, ಮುಖ್ಯೋಪಾಧ್ಯಾಯಿನಿ ಮಿನಿ, ಬ್ರಹ್ಮಕಲಶೋತ್ಸವ ಮಾತೃಸಮಿತಿ ಅಧ್ಯಕ್ಷೆ ವಿನಯಾ ಜೆ.ರೈ, ಗೌರವಾಧ್ಯಕ್ಷೆ ಸೀತಾಲಕ್ಷಿö್ಮ ಪಂಜಿತ್ತಡ್ಕ, ಅಧ್ಯಾಪಿಕೆ ಪ್ರಭಾವತಿ ಕೆದಿಲ್ಲಾಯ, ಪ್ರತಿಭಾ, ದೀಪಶ್ರೀ, ಮಧುಶ್ರೀ ಅಳಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾತೃಸಮಿತಿ ಕಾರ್ಯದರ್ಶಿ ಅಧ್ಯಾಪಿಕೆ ಅನಿತಾ ಸ್ವಾಗತಿಸಿ, ಅಧ್ಯಾಪಿಕೆ ಜಯಲತಾ ಟೀಚರ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top