ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಭೇಟಿ

Upayuktha
0


ಬದಿಯಡ್ಕ: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಕೊಡುಗೈದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಭೇಟಿ ನೀಡಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.


ಶ್ರೀದೇವರಲ್ಲಿ ಪ್ರಾರ್ಥಿಸಿದ ಅವರು ಬ್ರಹ್ಮಕಲಶೋತ್ಸವದ ಉಗ್ರಾಣ, ವೇದಿಕೆಗಳನ್ನು ವೀಕ್ಷಿಸಿ ಗೋಮಾತೆಗೆ ನಮಿಸಿದರು. ಪಾಕಶಾಲೆಯನ್ನು ವೀಕ್ಷಿಸಿ ಕಾರ್ಯಕರ್ತರೊಂದಿಗೆ ಕುಶಲೋಪರಿಯಾಗಿ ಮಾತನಾಡುತ್ತಾ ಶ್ರೀಕ್ಷೇತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಊರಿನ ಜನರ ಶ್ರಮ, ಕಾರ್ಯಕರ್ತರ ಬೆವರ ಹನಿಗೆ ಶಿವನ ಅನುಗ್ರಹವಾಗಿದೆ ಎಂಬುದು ಇಲ್ಲಿನ ಅಭಿವೃದ್ಧಿಯೇ ಸಾಕ್ಷಿ ಎಂದು ತಿಳಿಸಿದರು. ಬ್ರಹ್ಮಕಲಶೋತ್ಸವದ ಸಿದ್ಧತೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ಶ್ರೀಕ್ಷೇತ್ರದ ವತಿಯಿಂದ ಅವರನ್ನು ಶಾಲುಹೊದೆಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಮೊಕ್ತೇಸರ ಸೀತಾರಾಮ ವಿ., ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಜಯದೇವ ಖಂಡಿಗೆ, ಪ್ರೊ.ಎ. ಶ್ರೀನಾಥ್, ಕಾರ್ತಿಕ್ ಶೆಟ್ಟ, ಭಾಸ್ಕರ ಪಂಜಿತ್ತಡ್ಕ, ಚಂದ್ರಹಾಸ ರೈ ಪೆರಡಾಲಗುತ್ತು, ಜಯಪ್ರಕಾಶ ಶೆಟ್ಟಿ ಕಡಾರುಬೀಡು, ರಾಜೇಶ್ ಮಾಸ್ತರ್ ಅಗಲ್ಪಾಡಿ, ಗಂಗಾಧರ ಗೋಳಿಯಡ್ಕ, ಮಹೇಶ್ ವಳಕ್ಕುಂಜ ಜೊತೆಗಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top