ಬಾಗಲಕೋಟ: ನಗರದ ಭಾರತೀಯ ಜೀವವಿಮಾ ಪ್ರತಿನಿಧಿ ಬಾವಾಸಾಬ .ಬ. ವಾಲಿಕಾರ ರವರ ಸುಪುತ್ರಿ ಕುಮಾರಿ ಅಮಿಶಾ ಬಾವಾಸಾಬ ವಾಲಿಕಾರ ಇವಳು ಜಮಖಂಡಿ ತಾಲೂಕಿನ ತುಂಗಳದ ಬಾಗಲಕೋಟೆಯ ವಿದ್ಯಾಗಿರಿ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ 2025-26 ಸಾಲಿನ ಪರೀಕೆಯಲ್ಲಿ ಈಚೆಗೆ ಪ್ರಕಟವಾಗಿರುವ ಫಲಿತಾಂಶದಲ್ಲಿ ಒಟ್ಟು 600 ಅಂಕಗಳಿಗೆ 571 ಅಂಕಗಳನ್ನು ಪಡೆಯುದರ ಮೂಲಕ 95.17 % ರಷ್ಟು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ ವಿದ್ಯಾರ್ಥಿನಿಯ ತಂದೆ ನಗರದ ಎಲ್ಐಸಿ ಪ್ರತಿನಿಧಿಯಾಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ ಮಗಳ ಸಾಧನೆ ತಂದೆ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಷಯವಾರು ಪಡೆದ ಅಂಕಗಳ ವಿವರ: ಕನ್ನಡ (96) ಇಂಗ್ಲೀಷ (88) ಭೌತಶಾಸ್ತ್ರ (95) ಗಣಿತ (98) ಜೀವಶಾಸ್ತ (97) ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಪ್ರಾಶುಪಾಲರು ಮತ್ತು ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


