ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಚಿಸುವ ಎಸ್.ಎಸ್.ಎಲ್.ಸಿ ಅಥವಾ ಐ.ಟಿ.ಐ ವಿದ್ಯಾರ್ಹತೆಯಲ್ಲಿ ಮೆಕ್ಯಾನಿಕ್ ಡಿಸೇಲ್, ಎಲೆಕ್ಟ್ರಿಷಿಯನ್, ಮೆಷಿನಿಸ್ಟ್, ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್, ವೆಲ್ಡರ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಪ್ರೋಗ್ರಾಮಿಂಗ್ ಮತ್ತು ಸಿಸ್ಟಮ್ ಎಡ್ಮಿನಿಸ್ಟ್ರೇಟಿವ್ ಎಸಿಸ್ಟೆಂಟ್ ವೃತ್ತಿಗಳಲ್ಲಿ ಪಾಸಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಎಪ್ರಿಲ್ 21 ರಿಂದ ಮೇ 8 ರೊಳಗಾಗಿ ನಗರದ
ಬಿಜೈನಲ್ಲಿರುವ ಕೆ.ಎಸ್.ಆರ್.ಟಿ.ಸಿ ವಿಭಾಗೀಯ
ಕಛೇರಿಗೆ ಅರ್ಜಿ ಸಲ್ಲಿಸಬೇಕು. ಮೇ 12 ರಂದು ಬೆಳಿಗ್ಗೆ 10 ಗಂಟೆಗೆ ಮೂಲ ದಾಖಲಾತಿಗಳೊಂದಿಗೆ ಶಿಶಿಕ್ಷು
ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗಬೇಕು
ಎಂದು ಕೆ.ಎಸ್.ಆರ್.ಟಿ.ಸಿ ಹಿರಿಯ
ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


