ಬಳ್ಳಾರಿ:
ನಗರದ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್
ಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಮಾಜಿ
ಸಚಿವ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ಶಾಸಕ
ನಾರಾ ಭರತರೆಡ್ಡಿ, ಮಾಜಿ ಶಾಸಕ ಜಿ.
ಸೋಮಶೇಖರರೆಡ್ಡಿ, ಮೇಯರ್ ಪಿ. ಗಾದೆಪ್ಪ, ಶ್ರೀರಾಮಕೃಷ್ಣ
ವಿವೇಕಾನಂದ ಆಶ್ರಯದ ಅಧ್ಯಕ್ಷ ಶ್ರೀಧರ ಬೋನಗೇರಿ, ಪದಾಧಿಕಾರಿಗಳಾದ ಪೃಥ್ವಿರಾಜ್ ಭೂಪಾಲ್, ಸಿ. ಎರ್ರಿಸ್ವಾಮಿ ಅವರು
ಭಕ್ತಾಧಿಗಳ ಸಮ್ಮುಖದಲ್ಲಿ ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್
ನ ಸಹ ಕಾರ್ಯದರ್ಶಿ ಸತ್ಯೇಶನಂದಾ, ಬೆಂಗಳೂರಿನ ಶಿವನಹಳ್ಳಿಯ ಮಹಾವಾಕ್ಯನಂದ ಮತ್ತು ಬಳ್ಳಾರಿಯ ಉಸ್ತುವಾರಿಗಳಾಗಿರುವ ಮಂಗಳನಾಥಾನಂದ ಅವರು ದಾಖಲೆಗಳನ್ನು ಹಸ್ತಾಂತರ
ಮಾಡಿದರು.
ದಾಖಲೆಗಳನ್ನು
ಸ್ವೀಕರಿಸಿದ ಶ್ರೀಗಳು ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಶ್ರೀರಾಮಕೃಷ್ಣ
ವಿವೇಕಾನಂದ ಸೆಂಟರ್ನ ಕಾರ್ಯದರ್ಶಿ ಜಗನ್ನಾಥ್ ಸ್ವಾಗತಿಸಿದರು. ಶಿಕ್ಷಕ ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿ,. ಕಾರ್ಯಕಾರಿ ಸಮಿತಿ ಸದಸ್ಯ ಗಡಿಗಿ ರಾಕೇಶ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
