ಜಮಖಂಡಿ: 2026ರ ಮಾರ್ಚ್-ಏಪ್ರಿಲ್‌ನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ-1ಕ್ಕೆ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಿಂದ ಪರೀಕ್ಷೆ ಬರೆದಿದ್ದ ಎಲ್ಲ 40 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ನೀಡಿದ್ದಾರೆ ಎಂದು ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ತಿಳಿಸಿದ್ದಾರೆ.
ಉತ್ತೀರ್ಣರಾದವರಲ್ಲಿ 12 ಡಿಸ್ಟಿಂಕ್ಷನ್, 25 ಪ್ರಥಮ ಶ್ರೇಣಿ ಹಾಗೂ 3 ದ್ವಿತೀಯ ಶ್ರೇಣಿಯಲ್ಲಿದ್ದಾರೆ. ಸರಸ್ವತಿ ರಾಜಪುರೋಹಿತ ಶೇ 97.6 ಅಂಕಗಳಿಸಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಿರಣ ಮರನೂರ ಶೇ 92.64, ನವ್ಯಾ ಅವಳೆ ಶೇ 92.48, ಗೌರಿ ಮೋರೆ ಶೇ 91.84, ರೋಹಿತ ಅರ್ಜುನವಾಡಿ ಶೇ 91.36 ಹಾಗೂ ಭಾಗ್ಯಶ್ರೀ ಶೇ 89.92 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸರಸ್ವತಿ ರಾಜಪುರೋಹಿತ ಹಿಂದಿಗೆ 100ಕ್ಕೆ 100, ರೋಹಿತ ಅರ್ಜುನವಾಡಿ, ಸಾನ್ವಿ ನರಸಗೊಂಡ ಇಬ್ಬರೂ ಕನ್ನಡಕ್ಕೆ 100ಕ್ಕೆ 100 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಗಿರೀಶ ಕಡ್ಡಿ, ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಮುಖ್ಯಗುರುಗಳು ಪಿ.ಐ. ಹೊಸಮಠ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

