ಹುಬ್ಬಳ್ಳಿ: ತಾಯಿಯ ಹಾಲಿನ ಕೊರತೆಯಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ ಆಶಾಕಿರಣವಾಗಿರುವ ಹುಬ್ಬಳ್ಳಿಯ ಕೆ.ಎಂ.ಸಿ.ಆರ್.ಐ KMCRI ಆಸ್ಪತ್ರೆಯ ‘ಜೀವಾಮೃತ’ ಹಾಲು ಬ್ಯಾಂಕ್ ಮಹತ್ವದ ಸಾಧನೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಈ ಹಾಲು ಬ್ಯಾಂಕ್ನಲ್ಲಿ ಒಟ್ಟು 7,147 ತಾಯಂದಿರು ಸ್ವಯಂಪ್ರೇರಿತವಾಗಿ ಎದೆಹಾಲು ದಾನ ಮಾಡಿದ್ದಾರೆ. ಇದರ ಫಲವಾಗಿ ಸುಮಾರು 1,530 ಲೀಟರ್ ಹಾಲು ಸಂಗ್ರಹವಾಗಿದ್ದು, 2,599 ಶಿಶುಗಳಿಗೆ ಜೀವಾಮೃತವಾಗಿ ಪರಿಣಮಿಸಿದೆ.
ತಾಯಿಯನ್ನು
ಕಳೆದುಕೊಂಡ ಅಥವಾ ತಾಯಿಯ ಹಾಲು
ಲಭ್ಯವಿಲ್ಲದ ಶಿಶುಗಳಿಗೆ ಈ ಹಾಲು ಅತ್ಯಂತ
ಉಪಯುಕ್ತವಾಗುತ್ತಿದೆ. ಸಂಗ್ರಹಿಸಲಾದ ಹಾಲನ್ನು ಆಧುನಿಕ ಪಾಶ್ಚರೀಕರಣ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಸುರಕ್ಷಿತವಾಗಿ
ಸಂಗ್ರಹಿಸಲಾಗುತ್ತದೆ.
ಆಸ್ಪತ್ರೆಯ
ನಿರ್ದೇಶಕ ಡಾ. ಈಶ್ವರ ಹೊಸಮನಿ
ಅವರ ನೇತೃತ್ವದಲ್ಲಿ ವೈದ್ಯರು ಮತ್ತು ನರ್ಸ್ಗಳ ತಂಡ ಈ
ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ತಾಯಂದಿರಲ್ಲಿ ಜಾಗೃತಿ ಮೂಡಿಸುವ ಮೂಲಕ ಹಾಲು ದಾನದ
ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಯೋಜನೆ ಉತ್ತರ ಕರ್ನಾಟಕ ಭಾಗದಲ್ಲಿ ನವಜಾತ ಶಿಶುಗಳ ಜೀವ ಉಳಿಸುವಲ್ಲಿ ಪ್ರಮುಖ
ಪಾತ್ರ ವಹಿಸುತ್ತಿದ್ದು, ಮಾನವೀಯ ಸೇವೆಯ ಒಂದು ಉತ್ತಮ ಮಾದರಿಯಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


