ಹನುಮಂತ ನಮ್ಮ ಕನ್ನಡ ನಾಡಿನ ಹೆಮ್ಮೆಯ ಪ್ರತೀಕ

Upayuktha
0



ಚೈತ್ರ ಮಾಸದಲ್ಲಿ ರಾಮ ನವಮಿ ಹೇಗೆ ಸಂಭ್ರಮವನ್ನು ತರುತ್ತದೆಯೋ ಹಾಗೆ ಚೈತ್ರ ಹುಣ್ಣಿಮೆ ಹನುಮಂತನ ಜಯಂತಿ ಯನ್ನಾಗಿ. ಆಚರಿಸಲಾಗುತ್ತಿದೆ.


ಪುರಾಣದ ಪ್ರಕಾರ ಹನುಮಂತನು ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿ ಪರಿಗಣಿಸಲಾಗುತ್ತಿದೆ. ರಾಮ ನಾಮದ ಪಠಣ ಎಲ್ಲಿ ನಡೆದಿರುತ್ತದೆಯೋ ಅಲ್ಲಿ ಹನುಮಂತನು. ಇರುತ್ತಾನೆ ಎಂದು. ನಂಬಲಾಗಿದೆ.


ಹುಯಿಲಗೋಳ ನಾರಾಯಣರಾಯರು ತಮ್ಮ ಉದಯವಾಗಲಿ ನಮ್ಮ. ಚೆಲುವ ಕನ್ನಡನಾಡು ಹಾಡಿನಲ್ಲಿ ಹನುಮ  ನುದಿ ಸಿದ ನಾಡು ಎಂದು ಕನ್ನಡ ನಾಡನ್ನು ಬಣ್ಣಿಸಿದ್ದಾರೆ.


ಇದರಿಂದ ಹನುಮಂತ ಕನ್ನಡ ನಾಡಿನ ಹೆಮ್ಮೆಯ ಪುತ್ರ ರೆಂದು ಪರಿಗಣಿಸಲಾಗುತ್ತದೆ. ಪುರಾಣದ ಪ್ರಕಾರ ಹನುಮಂತ ಕೇಸರಿ ರಾಜ ಮತ್ತು ಅಂಜನಾ ದೇವಿಯ ಪುತ್ರ. ರಾಮನ ದಾಸನಾಗಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸೇತುವೆಯಾಗಿ  ಹನುಮಂತ  ಬಾಂಧವ್ಯಕ್ಕೆ ಮುನ್ನುಡಿ ಬರೆದ.


ಹನುಮಂತ ಹುಟ್ಟಿದ ಅಂಜನಾದ್ರಿ ಬೆಟ್ಟ, ವಾಲಿ ಗುಹೆ, ಹಂಪೆಯ ಸಮೀಪದ ಕಿಷ್ಕಿಂಧೆ  ಈಗಲೂ ಆಸ್ತಿಕರ ಪವಿತ್ರ ಸ್ಥಳ ಗಳಾಗಿವೆ.

ನಾವು ಈಗಲೂ ಪ್ರತಿ ಹಳ್ಳಿಯಲ್ಲಿಯೂ ಕೂಡ ಹನುಮನ ಗುಡಿ  ನೋಡ ಬಹುದು.ಅದಕ್ಕೆ ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬ ನಾಣ್ಣುಡಿ ಇದೆ.


ವ್ಯಾಸ ಗುರುಗಳು ಸುಮಾರು 1008 ಹನುಮಂತ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದಾರೆ ಎಂದು ಹೇಳಲಾಗಿದೆ. ಬಾಲಕ್ಕೆ ಗಂಟೆ ಕಟ್ಟಿರುವ ವಿಗ್ರಹಗಳು ವ್ಯಾಸರಾಯರ ಹಸ್ತದಿಂದ ಸ್ಥಾಪಿತವಾಗಿವೆ ಎಂದು ಹೇಳಲಾಗಿದೆ.


ಹಂಪಿಯ ಸಮೀಪದ ಯಂತ್ರೋ ದ್ಧಾರಕ ಹನುಮಂತ ಈಗಲೂ ಜನರ ಮೆಚ್ಚಿನ ದೇವರು ಆಗಿದ್ದ್ದಾನೆ. ಉತ್ತರ ಭಾರತದಲ್ಲಿ ಲೇ ಟೇ ಹನುಮಾನ್ ತುಂಬ ಪ್ರಸಿದ್ಧ. ಯುದ್ಧ ಮುಗಿಸಿ ಹನುಮಂತ ವಿಶ್ರಾಂತಿ ಪಡೆದ. ಸ್ಥಳ ಎಂದು ಹೇಳುತ್ತಾರೆ. ಬನ್ನಿ, ಹನುಮನ  ನೆನೆಯೋಣ, ಕನ್ನಡದ ಹೆಮ್ಮೆಯ ಪುತ್ರನ ಜಯಂತಿಯನ್ನು ಸಂಭ್ರಮಿಸೋಣ.


-ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top