ಜೀವನದಲ್ಲಿ ಪ್ರತಿಯೊಬ್ಬರೂ ಪ್ರವೀಣರೇ!

Upayuktha
0

 


'ಹೇ ನಿನಗೆ ಮೊನ್ನೆ ನಡೆದ ಪರೀಕ್ಷೆಯಲ್ಲಿ ನೂರರಲ್ಲಿ 95 ಅಂಕನಾ...! ಅದು ಹೇಗೆ ಓದಿ ಯಾವತ್ತೂ ಹೆಚ್ಚಿನ ಅಂಕಗಳನ್ನು ಪಡಿತಿಯ, ನಾನೆಷ್ಟು ಓದಿದರೂ ಅಷ್ಟೇ, ತಲೆಗೆ ಹತ್ತುವುದೂ ಇಲ್ಲ, ಇತ್ತ ಅಂಕಗಳೂ ಬರುವುದಿಲ್ಲ' ಎಂದು ತನ್ನ ತರಗತಿಯ ಸಹಪಾಠಿಯ ಬಳಿ ಕೇಳುತ್ತಾ, ತನ್ನೊಳಗೆ ಹಲವಾರು ಆತಂಕಕಾರಿ ಚಿಂತೆಯ ವಿಷಯಗಳನ್ನು ತಲೆಯೊಳಗೆ ತುಂಬಿಸಿಕೊಳ್ಳುತ್ತಾ,'ಆತ ಎಷ್ಟು ಚಂದಮಾಡಿ ಓದುತ್ತಾನಲ್ಲ, ದೊಡ್ಡವನಾದ ನಂತರ ಒಳ್ಳೆಯ ಕೆಲಸವನ್ನು ಪಡೆದುಕೊಂಡು ಜೀವನದಲ್ಲಿ ಚಿಂತೆ ಇಲ್ಲದೆ ಬದುಕಬಲ್ಲನು. 'ಆದರೆ ನನಗೆ ಯಾವ ಒಂದಿಷ್ಟು ಬರಹಗಳೂ ತಲೆಗೆ ಸೋಂಕಿಯೂ ನೋಡುವುದಿಲ್ಲವಲ್ಲ, ನನ್ನ ಮುಂದಿನ ಜೀವನ ಹೇಗಿರಬಹುದು? ಯಾಕೆ ಹೀಗೆ ಆಗುತ್ತಿದೆ?'ಎಂದು ಜೀವನವೇ ಅಂತ್ಯವನ್ನು ಕಂಡಿತೋ ಏನೋ ಎಂಬಂತೆ ಯೋಚಿಸುತ್ತಾನೆ.


ಇದು ಸಾಮಾನ್ಯವಾಗಿ ಚಿಗುರೊಡೆದು, ಅತ್ತ ಗಿಡವೂ ಅಲ್ಲ, ಇತ್ತ ಮರವೂ ಅಲ್ಲ ಎನ್ನುವಂತಹ ವಯಸ್ಸಿನ ಹಂತಕ್ಕೆ ಬೆಳೆದ ಕೆಲವು ಯುವಕರ ಯುವತಿಯರ ಮನದಲ್ಲಿರುವ ಚಿಂತೆಯಾಗಿದೆ. 


ಅಂತಹ ಸಂದರ್ಭದಲ್ಲಿ 'ಜೀವನವೇ ನಿಂತು ಹೋಯ್ತೇನೋ'ಎಂದು ಯೋಚನೆ ಮಾಡುವುದು ನಿಜವಾಗಿಯೂ ಬಲು ತಪ್ಪು. ಅದೇಕೆ 'ಓದಿ, ಜ್ಞಾನ ಸಂಪಾದಿಸಿ, ಒಂದೊಳ್ಳೆ ವೈಟ್ ಕಾಲರ್ ಜಾಬ್ ಅನ್ನು ಹಿಡಿದುಕೊಂಡವ ಮಾತ್ರ ಜೀವನವನ್ನು ಸುಗಮವಾಗಿ ಸಾಧಿಸುತ್ತಾನೆ'ಎಂದು ಯೋಚಿಸುತ್ತೀರಿ. ಇತ್ತ ತನ್ನ ಕಲೆಯನ್ನು ಪ್ರೋತ್ಸಾಹಿಸಿ ಅದನ್ನೇ ಜೀವನ ಆಧಾರವನ್ನಾಗಿಸಿಕೊಂಡ ಹಲವು ಚಿತ್ರಗಾರರನ್ನು, ನೃತ್ಯ ಕಲೆಗಾರರನ್ನು, ವ್ಯವಹಾರಗಳಲ್ಲಿ ಆಸಕ್ತಿಯನ್ನು ಇರಿಸಿಕೊಂಡು ಅದರಲ್ಲಿ ಮುಂದುವರಿದ ಉದ್ಯಮಿಗಳನ್ನ ಹೀಗೆಯೇ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿ ಜೀವನವನ್ನು ಆರಮದಾಯಕವಾಗಿ ಸಾಗಿಸುತ್ತಿರುವ ವ್ಯಕ್ತಿಗಳನ್ನು ಮೊದಲೊಮ್ಮೆ ಗಮನಿಸಬೇಕಾಗಿದೆ. 


ಮುಖ್ಯವಾಗಿ, ಏನೆಂದರೆ ' ಪ್ರತಿಯೊಬ್ಬರ ಮಸ್ತಕದ ಸ್ಥಿತಿ, ಮನದೊಳಗಿನ ಬಯಕೆ ಹೊರ ಪ್ರಪಂಚದ ಏನನ್ನೋ ತನ್ನದನ್ನಾಗಿಸಲು ಹಂಬಲಿಸುತ್ತಿರುತ್ತದೆ. ಅದಕ್ಕೆ ಸರಿಯಾಗಿ ನಮ್ಮ ಲಕ್ಷ್ಯ ವನ್ನು ಹರಿಸಬೇಕಷ್ಟೆ.' ಅಂದರೆ ಮೊದಲಾಗಿ ನಾವು ಯಾವುದರಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದೇವೆ, ಯಾವುದನ್ನು ಬಲುವಾಗಿ ಅನುಸರಿಸುತ್ತಾ ಬಂದಿದ್ದೇವೆ ಅಂತೆಯೇ ದಿನನಿತ್ಯದ ಸಂದರ್ಭದಲ್ಲಿ ಅವುಗಳನ್ನ ಜೊತೆಯಾಗಿಸುವಷ್ಟರಮಟ್ಟಿಗೆ ನಮ್ಮ ನಿಲುವು ಹೊಂದಿರುತ್ತದೊ ಅಂಥವುಗಳನ್ನೇ ನಮ್ಮ ಜೀವನದ ಆಧಾರ ಸ್ತಂಭವನ್ನಾಗಿಸಿ ಅವುಗಳನ್ನೇ ಮುಂದುವರಿಸಬಹುದಲ್ಲವೇ.!‍? 


ಹೌದು, ನಾವು ಯಾವತ್ತೂ ಕೂಡ ಆಸುಪಾಸಿನ ಅನ್ಯ ವ್ಯಕ್ತಿಗಳನ್ನ ಕಂಡು, ಆತ ಒಬ್ಬ ಉತ್ತಮ ವೈದ್ಯನಾಗಿದ್ದಾನೆ, ದೊಡ್ಡ ವಿಜ್ಞಾನಿಯಾಗಿದ್ದಾನೆ, ಆದರೆ ತನ್ನಿಂದ ಏನೂ ಆಗಲು ಸಾಧ್ಯವಿಲ್ಲವೇ ಎನ್ನುವ ರೀತಿಯಲ್ಲಿ ತಮ್ಮನ್ನು ಬೇರೆಯವರೊಂದಿಗೆ ತುಲನೆ ಮಾಡಿಕೊಳ್ಳುವುದರ ಬದಲು, ನಮ್ಮಲ್ಲಿರುವ ಆಸಕ್ತ ಕಲೆಗಳನ್ನು ಜೊತೆಯಾಗಿಸಿಕೊಂಡು ಜೀವನವನ್ನು ಮುಂದುವರಿಸಬೇಕು.


ಉದಾಹರಣೆಗೆ, ಇಂದಿನ ಭಾರತದ ಅತ್ಯಂತ ಯಶಸ್ವಿ ಆಟಗಾರನಲ್ಲಿ ಒಬ್ಬರಾದ ಎಂ ಎಸ್ ಧೋನಿಯವರ ಉದಾಹರಣೆಯನ್ನೇ ನಾವು ತೆಗೆದುಕೊಳ್ಳಬಹುದು. ತನ್ನ ಮನೆಯವರು ಆಟವನ್ನು ವಿರೋಧಿಸಿ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿದರೂ ಕೂಡ, ಧೋನಿಯವರು ತಮ್ಮ ಆಸಕ್ತ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡಿ ಇಂದು ವಿಶ್ವ ಪ್ರಖ್ಯಾತರಾಗಿದ್ದಾರೆ.


ಹಾಗಾಗಿ ತಮ್ಮಲ್ಲಿರುವ ಕೊರತೆಯನ್ನ ಸ್ಮರಿಸಿಕೊಂಡು ಅಸಾಧ್ಯತೆಯನ್ನ ನೆನೆದು ಕೊರಗಿಕೊಳ್ಳುವುದಕ್ಕಿಂತ, ಮೊದಲಾಗಿ‌ ತಮ್ಮ ಮನದೊಳಗಿನ ಚಿಗುರಿನಂತಿರುವ ಆಸಕ್ತಿಯನ್ನು, ಪ್ರತಿಭೆಯನ್ನು ಕೀಳರಿಮೆಯಿಂದ ಕಾಣದೆ ಅವುಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಜೀವನದಲ್ಲಿ ಸಾಧನೆಯನ್ನು ಮಾಡಬೇಕಾಗಿದೆ.



-ಕೆ.ಎನ್. ಧನುಷ್, ದಿಡುಪೆ 

ಪ್ರಥಮ ಪತ್ರಿಕೋದ್ಯಮ ವಿಭಾಗ 

ಎಸ್ ಡಿ ಎಂ ಕಾಲೇಜು ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top