ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 8ನೇ ದಿನದ ಧಾರ್ಮಿಕ ಸಭೆ
ಬದಿಯಡ್ಕ: ಧರ್ಮದ ಆಧಾರದಲ್ಲಿ ಭಾರತವು ಉಳಿದುಕೊಂಡಿದೆ. ಬಹುರೂಪದ ಸಮಾಜದಲ್ಲಿ ಏಕತೆಯನ್ನು ಕಾಣಬೇಕಾಗಿದೆ. ಸತ್ಯದ ಆಧಾರದಲ್ಲಿ ಭಯಪಡದೆ ಜೀವನ ಮಾಡುವ ಗುಣ ನಮ್ಮದಾಗಬೇಕು. ಅಂತರ್‌ಬಾಹ್ಯ ಶುದ್ಧತೆಯನ್ನು ನಾವು ಹೊಂದಿರಬೇಕು. ಹಿಂದಿನ ಕಾಲದಲ್ಲಿ ಇದ್ದ ಪದ್ಧತಿ ಈಗ ಬದಲಾವಣೆಗೊಂಡಿದೆ. ನಾಗರಿಕತೆ ಬದಲಾದರೂ ನಮ್ಮ ಸಂಸ್ಕೃತಿ ಶಾಶ್ವತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರು ಹೇಳಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 8ನೇ ದಿನ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಭಾಷಣವನ್ನು ಮಾಡಿದರು. ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಹೆಗಲಿಗೆ ಹೆಗಲುಕೊಡೋಣ. ಹಿಂದೂ ಜೀವನಶೈಲಿಗಳನ್ನು ನೆಲೆಗೊಳಿಸುವ ಕೇಂದ್ರ ದೇವಸ್ಥಾನ. ಅನ್ನದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡುವ ದೇವಸ್ಥಾನಗಳು ಸಮಾಜದ ಏಕತೆಯ ಕೇಂದ್ರವಾಗಿದೆ. ಕಟ್ಟಡಗಳು ಜೀರ್ಣೋದ್ಧಾರಗೊಳ್ಳುವುದರೊಂದಿಗೆ ವ್ಯವಸ್ಥೆಗಳೂ ಪ್ರಗತಿಯಾಗಬೇಕು ಎಂದರು.
ಶ್ರೀಕ್ಷೇತ್ರ ಕೇಮಾರು ಸಾಂದೀಪಿನಿ ಸಾಧನಾಶ್ರಮದ ಪರಮಪೂಜ್ಯ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನವನ್ನು ನೀಡುತ್ತಾ ದೇವಸ್ಥಾನಗಳು ಆತ್ಮಶಕ್ತಿಯನ್ನು ತುಂಬುವ ಕೇಂದ್ರವಾಗಬೇಕು. ಕೇವಲ ಅಂಕಗಳಿಕೆಯಿAದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲಾ ಸ್ಥರಗಳಲ್ಲಿಯೂ ನಮ್ಮ ಮಕ್ಕಳು ಬೆಳಗಬೇಕು. ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ. ಸಮಾಜದ ಕಟ್ಟಕಡೆಯ ಜನರಿಗೂ ಶಿಕ್ಷಣ ಲಭಿಸಬೇಕು. ಬಡವನ ಕಣ್ಣೀರೊರೆಸುವ ಕಾರ್ಯ ದೇವಸ್ಥಾನದಲ್ಲಿ ನಡೆಯಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡೆಕ್ಕಾನ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ದೇವಸ್ಥಾನವು ಸಮಾಜದ ಶಕ್ತಿಕೇಂದ್ರಗಳಾಗಬೇಕು. ಜೀರ್ಣೋದ್ಧಾರದಿಂದ ದೇವಾಲಯ ಬೆಳಗಿದ ಹಾಗೆ ಊರೂ ಬೆಳಕನ್ನು ಕಾಣುತ್ತದೆ ಎಂದರು.
ಉದುಮ ಶಾಸಕ ಸಿ.ಎಚ್.ಕುಞಂಬು ಘನ ಉಪಸ್ಥಿತರಿದ್ದು ಮಾತನಾಡಿದರು. ಬೆಂಗಳೂರಿನ ಉದ್ಯಮಿ ಆರ್. ಕೆ.ಭಟ್ ಬೆಳ್ಳಾರೆ, ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ, ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ್ ಭಟ್ ಏತಡ್ಕ, ಖ್ಯಾತ ವಕೀಲರಾದ ಎಂ. ನಾರಾಯಣ ಭಟ್, ಡಾ| ಕಿಶೋರ್ ಕುಮಾರ್ ಉಬ್ರಂಗಳ, ಶ್ರೀಕ್ಷೇತ್ರ ಕೊಲ್ಲಂಗಾನದ ತಂತ್ರಿ ಗಣಾಧಿರಾಜ ಉಪಾಧ್ಯಾಯ, ಉದ್ಯಮಿ ರಾಜೇಶ್ ಭಟ್ ಉಬರಡ್ಕ, ಗಣ್ಯರುಗಳಾದ ವಿಷ್ಣುಶರ್ಮ ಪಟ್ಟಾಜೆ ತಿರುಪತಿ ಕುಮಾರ ಪೆರ್ಮುಖ, ಗಣೇಶ್ ಕೃಷ್ಣ ಭಟ್ ಅಳಕ್ಕೆ, ವೆಂಕಟಗಿರೀಶ ಪಟ್ಟಾಜೆ, ಕುಂಞಣ್ಣ, ಶ್ರೀನಿವಾಸ ನಾಯ್ಕ್ ಪಿ., ಉದಯಕುಮಾರ್ ಬದಿಯಡ್ಕ, ವೆಂಕಟೇಶ್ವರ ಭಟ್ ಪಟ್ಟಾಜೆ, ಉದಯಕೇಶವ ಭಟ್ ಕೋರಿಕ್ಕಾರು, ಪ್ರತೀಕ್ ಆಳ್ವ ಪೆರಡಾಲ, ಸುಬ್ಬನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯ ರಾಜೇಶ್ ಚಂಬಲ್ತಿಮಾರು ನಿರೂಪಿಸಿದರು. ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಶ್ಯಾಮಪ್ರಸಾದ ಸರಳಿ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


