ಪೆರಡಾಲ ಬ್ರಹ್ಮಕಲಶೋತ್ಸವ: ಜ್ಯೋತಿಷಿ ಬೇಳ ಪದ್ಮನಾಭ ಶರ್ಮರಿಂದ ಭದ್ರದೀಪ ಸಮರ್ಪಣೆ

Upayuktha
0


ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 8ನೇ ಪ್ರಸಿದ್ಧ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಇರಿಂಞಲಕ್ಕುಡ ಅವರು ಭದ್ರದೀಪವನ್ನು ಶ್ರೀದೇವರಿಗೆ ಸೇವಾರೂಪದಲ್ಲಿ ಅರ್ಪಿಸಿದರು. ಪ್ರಧಾನ ಅರ್ಚಕ ಶಿವರಾಮ ಭಟ್ ಪೆರಡಾಲ ಶ್ರೀ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.


ಈ ಸಂದರ್ಭದಲ್ಲಿ ಪದ್ಮನಾಭ ಶರ್ಮ ಅವರು ಮಾತನಾಡಿ ಮಧೂರು ಹಾಗೂ ಪೆರಡಾಲ ದೇವಸ್ಥಾನದೊಂದಿಗೆ ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗೂ ಅವಿನಾಭಾವ ಸಂಬಂಧವಿದೆ. ಶಾಲಾ ಜೀವನದಲ್ಲಿ ವರ್ಷಕ್ಕೊಂದು ಬಾರಿ ಶಾಲೆಯಿಂದ ಅಧ್ಯಾಪಕರು ವಿದ್ಯಾರ್ಥಿಗಳನ್ನು ಕೂಡಿಕೊಂಡು ಪೆರಡಾಲ ಹಾಗೂ ಮಧೂರು ದೇಗುಲಕ್ಕೆ ಭೇಟಿ ನೀಡುವ ಪರಿಪಾಠವಿತ್ತು. ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಪ್ರಸ್ತು ಜೀರ್ಣೋದ್ಧಾರಗೊಂಡು ಶ್ರೀಕ್ಷೇತ್ರವು ಅತ್ಯಂತ ವೈಭವದಿಂದ ಕಂಗೊಳಿಸುತ್ತಿದೆ. ಉದನೇಶ್ವರನ ಸಾನ್ನಿಧ್ಯ ಇನ್ನಷು ವೃದ್ಧಿಯಾಗಿ ನಾಡು ಸಂಪದ್ಭರಿತವಾಗಲಿ ಎಂದು ಅವರು ಶುಭಕೋರಿದರು.



ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ, ಗೌರವಾಧ್ಯಕ್ಷ ಜಯದೇವ ಖಂಡಿಗೆ, ಹೊರೆಕಾಣಿಸಮಿತಿ ಅಧ್ಯಕ್ಷ ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಚಪ್ಪರ ಸಮಿತಿ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top