ಮಂಗಳೂರು: ಕುಪ್ಮ ಕರ್ನಾಟಕ ವತಿಯಿಂದ ಏಪ್ರಿಲ್ 22 ರಂದು ವಿಕಾಸಸೌಧದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯ ಶ್ರೀ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ರಶ್ಮಿ ಮಹೇಶ್, ಪಿ.ಯು. ಬೋರ್ಡ್ನ ನಿರ್ದೇಶಕರಾದ ಶ್ರೀ ಭರತ್ ಹಾಗೂ ಕುಪ್ಮಾ ಸಂಘಟನೆಯ ಬೆಂಗಳೂರು ಉತ್ತರ ಜಿಲ್ಲೆಯ ಕುಪ್ಮಾ ಕಾರ್ಯದರ್ಶಿಯಾದ ಡಾ. ದೇವರಾಜ್ ಬಿ ಕೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಕುಪ್ಮಾ ಅಧ್ಯಕ್ಷರಾದ ಡಾ. ಜಯರಾಮ್ ಶೆಟ್ಟಿ ಹಾಗೂ ಇತರ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಪ್ರಸ್ತುತ ಖಾಸಗಿ ಪಿ.ಯು. ಕಾಲೇಜುಗಳಿಗೆ ಕೆಲವು ವಿದ್ಯಾರ್ಥಿ ಸಂಘಟನೆಗಳಿAದ ದ್ವಿತೀಯ ಪಿ.ಯು. ತರಗತಿಗಳನ್ನು ನಡೆಸದಂತೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಹಾಗೂ ವಿದ್ಯಾರ್ಥಿಗಳ ಟಿ.ಸಿ.ಗಳನ್ನು ಡಿಜಿ ಲಾಕರ್ ಮೂಲಕ ವಿತರಿಸುವ ಇಲಾಖೆಯ ನಿರ್ಧಾರದಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ, ಪೋಷಕರ ಸಹಮತದೊಂದಿಗೆ ವಿಶೇಷ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆದಿದ್ದು, ಶ್ರೀಮತಿ ರಶ್ಮಿ ಮಹೇಶ್ ಅವರು ಸಕಾರಾತ್ಮಕ ಭರವಸೆ ನೀಡಿದರು. ಜೊತೆಗೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀ ಭರತ್ ಅವರಿಗೆ ಈ ಸಂಬಂಧ ಸೂಕ್ತ ಸುತ್ತೋಲೆ ಹೊರಡಿಸಲು ಸಭೆಯಲ್ಲಿಯೇ ಸೂಚಿಸಿದರು. ಮರುದಿನವೆ ಸುತ್ತೊಲೆ ಹೊರಡಿಸಲಾಗಿದೆ.



