ಮಂಗಳೂರು:
ಕಲಾಭಿ (ರಿ.), ಮಂಗಳೂರು ವತಿಯಿಂದ ಆಯೋಜಿಸಲಾದ ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಾಗಾರ “ಅರಳು 2026” ಇದರ ಸಮಾರೋಪ ಸಮಾರಂಭವು
ಏಪ್ರಿಲ್ 23ರಂದು ಸಂಜೆ ಕಲಾಗ್ರಾಮ, ಬೊಂದೆಲ್ನಲ್ಲಿ ನಡೆಯಿತು. ಕಲಾಗ್ರಾಮವು ಕಳೆದ ಒಂದು ವರ್ಷದಿಂದ
ಕಲಾವಿದರು ನಿರಂತರವಾಗಿ ತಮ್ಮನ್ನು ಕಲೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕಲಾವಿದರ ಮನೆಯಾಗಿದೆ.
ಕಾರ್ಯಕ್ರಮ
ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಿದ್ದು, ಚರಿತ್
ಸುವರ್ಣ ನಿರ್ದೇಶನದ “ಐ ಶಭಾಷ್” ನಾಟಕ
ಪ್ರಸ್ತುತಿಗೊಂಡಿತು. ಅದ್ಭುತವಾಗಿ ಅಭಿನಯಿಸಿದ
ಎರಡು ತಂಡಗಳಿಗೆ ಉತ್ತಮ ಬಹುಮಾನವನ್ನು ಹಾಗೂ ಪ್ರಾಮಿಸಿಂಗ್ ಆರ್ಟಿಸ್ಟ್
- ಶ್ರಾವ್ಯ ಶ್ರೀಯನ್, ಬೆಸ್ಟ್ ಪರ್ಫಾರ್ಮರ್ - ಮಯಾಂಕ್ ಪಿ. ಕುಮಾರ್, ಡೆಡಿಕೇಟೆಡ್
ಆರ್ಟಿಸ್ಟ್ - ಜೀತ್ ವಿ. ದೇವಾಡಿಗ,
ಸ್ಟಾರ್ ಆಫ್ ಸ್ಟೇಜ್ - ನಿಕಿಲನ್
ಎಸ್, ಅರಳು ಕ್ರಿಯೇಟಿವ್ ಆರ್ಟಿಸ್ಟ್
- ಪ್ರತೀಷಾ ಕೆ. ಜೆ., ಎಮರ್ಜಿಂಗ್
ಆಕ್ಟರ್ - ರಿಷಿಕಾ ಡಿ. ದೇವಾಡಿಗ ಹೀಗೆ
ಮಕ್ಕಳಿಗೆ ಹಲವಾರು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.
ರಂಗಭೂಮಿ
ಮತ್ತು ಚಲನಚಿತ್ರ ನಟ ಹಾಗೂ ಗಾಯಕರಾಗಿರುವ
ಶ್ರೀ ಮೈಮ್ ರಾಮದಾಸ್ ಸಮಾರೋಪ ನುಡಿಗಳನ್ನಾಡಿದರು. ಸಭಾ ಕಾರ್ಯಕ್ರಮದಲ್ಲಿ ಶ್ರೀ
ಮೋಹನ್ ಶೇಣಿ, ರಂಗಭೂಮಿ ಮತ್ತು ಚಲನಚಿತ್ರ ನಟ, ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿದ್ದರು. ರಮ್ಯಾ ಪ್ರದೀಪ್ ಕುಮಾರ್, ಹೆಲ್ತ್ ಇನ್ಸ್ಪೆಕ್ಟರ್ ಏನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಚರಣ್ ಕುಮಾರ್,
ನೃತ್ಯ ನಿರ್ದೇಶಕರು ಹಾಗೂ ಸಂಯೋಜಕರು ನ್ಯೂ
ಓಷನ್ ಕಿಡ್ಸ್ ಡಾನ್ಸ್ ಇನ್ಸ್ಟಿಟ್ಯೂಟ್, ನಾಟಕ ನಿರ್ದೇಶಕ ಚರಿತ್ ಸುವರ್ಣ
ಹಾಗೂ ಕಲಾಭಿ (ರಿ.) ಮಂಗಳೂರು ಅಧ್ಯಕ್ಷ
ಸುರೇಶ್ ಬಿ ವರ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಾಗಿದ್ದರು.
ಮಕ್ಕಳ
ರಂಗ ಸಂಗೀತದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಸ್ಕಂದ ನಿರೂಪಿಸಿದರು. ಅಸ್ಮಿತಾ ಸ್ವಾಗತಿಸಿ, ಉಜ್ವಲ್ ಯು.ವಿ. ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



