ಧವಳ ಕೋ ಆಪರೇಟಿವ್ ಸೊಸೈಟಿ ನಿಯಮಿತ ಮಂಗಳೂರು: ರೂ. 50.95 ಲಕ್ಷ ನಿವ್ವಳ ಲಾಭ

Upayuktha
0

2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸುಮಾರು ರೂ. 200 ಕೋಟಿ ವ್ಯವಹಾರ




ಮಂಗಳೂರು: ಕಳೆದ ಮೂರು ವರ್ಷದ ಹಿಂದೆ 2022 ನೇ ಜೂನ್ ತಿಂಗಳಲ್ಲಿ ರಾಜ್ಯಮಟ್ಟದ ಉದ್ದೇಶವನ್ನು ಇಟ್ಟುಕೊಂಡು ಕಾರ್ಯ ಆರಂಭಗೊಂಡ ನಮ್ಮ ಈ ಸಂಸ್ಥೆಯು 2025-2026 ಸಾಲಿನಲ್ಲಿ ಸುಮಾರು ರೂ. 200 ಕೋಟಿ ಅಷ್ಟು ವ್ಯವಹಾರ ನಡೆಸಿ ರೂ. 50.95 ರಷ್ಟು ನಿವ್ವಳ ಲಾಭಗಳಿಸಿದೆ. ಮಂಗಳೂರಿನ ಹೃದಯ ಭಾಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ನಮ್ಮ ಈ ಸಂಸ್ಥೆ ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಹಾಗೂ ಕಾರ್ಕಳ ತಾಲೂಕಿನ ಹೊಸ್ಮಾರ್ ನಲ್ಲಿ ಶಾಖೆಯನ್ನು ತೆರೆದಿರುತ್ತದೆ. ಸಂಸ್ಥೆಯು ದಿನಾಂಕ 31.03.2026 ಕ್ಕೆ ರೂ. 22.75 ಕೋಟಿ ಠೇವಣಿಯೊಂದಿಗೆ ರೂ. 20.80 ಕೋಟಿಯಷ್ಟು ಮುಂಗಡಸಾಲ ಸೌಲಭ್ಯ ನೀಡಿ ವ್ಯವಹಾರ ಹೊಂದಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಸಂಸ್ಥೆಯು ತನ್ನ ಕೇಂದ್ರ ಕಚೇರಿ ಮತ್ತು ಶಾಖೆಗಳಲ್ಲಿ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲದೇ, ಚಿನ್ನಾಭರಣ ಭದ್ರತಾ ಸಾಲ, ಈ ಸ್ಟ್ಯಾಂಪ್ ಮಾರಾಟ ವ್ಯವಸ್ಥೆ, ಕಳಸ ಶಾಖೆಯಲ್ಲಿ ಕೃಷಿ ಉತ್ಪನ್ನ ಈಡಿನ ಸಾಲ ವ್ಯವಸ್ಥೆಯೊಂದಿಗೆ, ಪ್ರಾಮಾಣಿಕ ನಿರ್ದೇಶಕರು ಹಾಗೂ ಉತ್ತಮ ಸದಸ್ಯರು ಮತ್ತು ಪ್ರಾಮಾಣಿಕ ಸಿಬ್ಬಂದಿಗಳಿಂದಾಗಿ ಅಲ್ಪಾವಧಿಯಲ್ಲಿ ವಿಶೇಷ ಸಾಧನೆಯನ್ನು ಮಾಡಲಾಗಿದೆ.


ಸಂಘವು ಪ್ರತಿ ವರ್ಷವೂ ಶಾಸನ ಬದ್ಧ ಲೆಕ್ಕಪರಿಶೋಧನೆಯಲ್ಲಿ 'ಎ' ಶ್ರೇಣಿ ಕಾಯ್ದುಕೊಂಡಿದೆ ಎಂದು ತಿಳಿಸಿದರು. ಸಂಘವು ತನ್ನ ಸದಸ್ಯರಿಗೆ ವಿಶೇಷ ಕೊಡುಗೆಯಾಗಿ ಠೇವಣಿಗಳ ಮೇಲೆ ಒಂದು ವರ್ಷಕ್ಕೆ 10% ಹಾಗೂ ಹಿರಿಯ ನಾಗರಿಕರಿಗೆ 10.5% ಬಡ್ಡಿಯನ್ನು ನೀಡುತ್ತಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top