ಕನ್ನಡ ನಾಡು-ನುಡಿ ಹೃದಯ ಭಾಗದಲ್ಲಿ ಇರಬೇಕು: ಡಾ. ಸುಬ್ಬಣ್ಣ ಕರಕನಳ್ಳಿ

Upayuktha
0

  


ದಾವಣಗೆರೆ: ಕೆಲವು ಸಾಧಕರು ಕೇವಲ ಸನ್ಮಾನಕ್ಕೆ ಸೀಮಿತವಾಗಿದೆ ನಿರಂತರವಾಗಿ ಸಮಾಜ ಸೇವೆ, ಕನ್ನಡ ನಾಡು-ನುಡಿ ಹೃದಯ ಭಾಗದಲ್ಲಿ ಇರಬೇಕು ಅನೇಕ ಸಂಘ ಸಂಸ್ಥೆಗಳು ಮಾಡದ ಹೊಸ ಹೊಸ ಪರಿಕಲ್ಪನೆಯೊಂದಿಗೆ ಕಳೆದ 36 ವರ್ಷಗಳಿಂದ ನಿರಂತರ ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಿರುವ ಸಂಸ್ಥೆ ಕಲಾಕುಂಚ ಕೆಲವು ಸಂಘಟನೆಗಳು ಆರಂಭ ಶೂರುತ್ವಕ್ಕೆ ಸೀಮಿತವಾಗಿರುತ್ತದೆ ದಾವಣಗೆರೆಯ ಈ ಸಂಸ್ಥೆ ಇತರ ಸಂಘಟನೆಗಳಿಗೆ ಮಾದರಿ ಎಂದು ಬೀದರ್‍ನ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಳ್ಳಿ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.


ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಮತ್ತು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಿನ್ನೆ ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ “ಸರಸ್ವತಿ ಕನ್ನಡ ರತ್ನ”ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ಮಾತನಾಡಿ, ಕಲಾಕುಂಚ ಕೇವಲ ದಾವಣಗೆರೆಗೆ ಸೀಮಿತವಾಗದೇ ವಿವಿಧ ಜಿಲ್ಲೆಗಳ ಜೊತೆಗೆ ಕೇರಳ ಗಡಿನಾಡ ಶಾಖೆಗಳನ್ನು ಪ್ರಾರಂಭ ಮಾಡಿ, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಯಕ್ಷಗಾನ ಚಟುವಟಿಕೆಗಳನ್ನು ಕಳೆದ ಮೂರವರೆ ದಶಕಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.


ಸಾಮಾನ್ಯ ಜ್ಞಾನ ಇಲ್ಲದ ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಕಾಳಜಿಯ ಅರಿವು ಮೂಡಿಸುವ ಮಕ್ಕಳ ಮುಂದಿನ ಜೀವನದ ಭವ್ಯ-ದಿವ್ಯ ಸಾಧನೆ ಮಾಡುವ ಹೊಸ ಪರಿಕಲ್ಪನೆಯೊಂದಿಗೆ ವಿವಿದ ಜಿಲ್ಲೆಗಳ, ಹಳ್ಳಿ ಗ್ರಾಮಾಂತರ ಶಾಲೆಗಳಿಗೆ ಪರೀಕ್ಷೆಯ ಮೊದಲೇ ಉಚಿತವಾಗಿ ಪರೀಕ್ಷಾ ಪೂರ್ವ ಸಿದ್ದತೆಯ ಕಾರ್ಯಾಗಾರ ಮಾಡುತ್ತಿರುವ ಕಲಾಕುಂಚ ಸಾಂಸ್ಕøತಿಕ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಸಾಧನೆ ಪ್ರೌಢಶಾಲೆಯ ಮೆಟ್ಟಲೇರದೇ ಕೇವಲ ಪ್ರಾಥಮಿಕ ಶಾಲೆಗೆ ಸೀಮಿತವಾದ ಶೆಣೈಯವರು ಮಾಡಿದ ಮೆಚ್ಚುಗೆ ಅದೇ ಅವರ ದೇವರ ಸೇವೆ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದಾರೆ ಎಂದರು.


ಉದ್ಘಾಟಕರು ಸೇರಿದಂತೆ ಮುಖ್ಯ ಅತಿಥಿಗಳಿಗೆ ಸಮಾರಂಭ ಪ್ರಾರಂಭದಲ್ಲಿ ವಿದುಷಿ ನೇತ್ರಾವತಿ ಸಾಯಿಪ್ರಕಾಶ್ ಪ್ರಾರ್ಥನೆ ಮಾಡಿದರು. ಪುಷ್ಪ ಮಂಜುನಾಥ್ ಸ್ವಾಗತಿಸಿದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು 175 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಸರಸ್ವತಿ ಕನ್ನಡ ರತ್ನ”ರಾಜ್ಯ ಪ್ರಶಸ್ತಿ ವಿತರಿಸಲಾಯಿತು ಎಂದು ಕಲಾಕುಂಚ ಮಹಿಳಾ ವಿಭಾಗದ ಸಮಿತಿಯ ಸದಸ್ಯರಾದ ಶಿಲ್ಪಾ ಉಮೇಶ್ ತಿಳಿಸಿದರು.


ಕವಿಯತ್ರಿ, ಸಾಹಿತಿ ಶೈಲಾ ವಿನೋದ್ ದೇವರಾಜ್‍ರವರು ಅಚ್ಚುಕಟ್ಟಾಗಿ ನಿರೂಪಿಸಿದರು.  ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಬಗ್ಗೆ ವಿವಿರ ತಿಳಿಸಿದರು. ಕೊನೆಯಲ್ಲಿ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ವಂದಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top