ಶ್ರೀಹೃದ್ಯಾ ಅಕಾಡೆಮಿಯಿಂದ ಮೈಸೂರಿನಲ್ಲಿ ನೃತ್ಯ ನಮನ ಕಾರ್ಯಕ್ರಮ

Upayuktha
0


ಮೈಸೂರು: ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸನ್ನಿಧಿಯಲ್ಲಿ ನಡೆದ ಶಾಸ್ತ್ರೀಯ ಸಂಗೀತ-ನೃತ್ಯ ವೇದಿಕೆಯ 47ನೇ ಸರಣಿಯ ಸಾಂಸ್ಕೃತಿಕ ಕಾರ್ಯಕ್ರಮವು ಭಕ್ತಿಭಾವ ಮತ್ತು ಕಲಾತ್ಮಕ ಮೆರಗು ತುಂಬಿಕೊಂಡು ಯಶಸ್ವಿಯಾಗಿ ನೆರವೇರಿತು.


ಶ್ರೀ ರಾಮನವಮಿಯ ವಿಶೇಷ ಅಂಗವಾಗಿ ಮಾರ್ಚ್ 27 ರಂದು ಶುಕ್ರವಾರ ಸಂಜೆ 5.30ರಿಂದ 7 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ, ಭರತನಾಟ್ಯ ಗುರು ವಿದುಷಿ ರೂಪಶ್ರೀ ಕೆ. ಎಸ್. ಹಾಗೂ ಅವರ ಶಿಷ್ಯವೃಂದ (ಶ್ರೀ ಹೃದ್ಯಾ ಅಕಾಡೆಮಿ (ರಿ.), ಬೆಂಗಳೂರು) “ನೃತ್ಯ ನಮನ”ವನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದರು.


ಗುರು ವಿದುಷಿ ರೂಪಶ್ರೀ ಕೆ. ಎಸ್. ಅವರು ತಮ್ಮ ಶಿಷ್ಯೆ ಮತ್ತು ಮಗಳಾದ ಹೃದ್ಯಾ ಭಟ್ ಕೆ ಅವರೊಂದಿಗೆ ತಾಯಿ ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದ ಧರು ವರ್ಣ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಭಾವ, ರಾಗ ಮತ್ತು ತಾಳಗಳ ಸಮ್ಮಿಲನದಿಂದ ಈ ಪ್ರದರ್ಶನ ವಿಶೇಷವಾಗಿ ಕಂಗೊಳಿಸಿತು.


ಇದಲ್ಲದೆ, ಸಂಸ್ಥೆಯ ವಿದ್ಯಾರ್ಥಿನಿಯರಾದ ತನ್ವಿಕ ಸಿ., ಸಾಯಿ ಹಾರಿಕ, ಪ್ರಣತಿ ಜಿ. ಎಸ್., ಜ್ಯೋತಿ ಕೆ. ಬಿ., ಇಶಿತ ಶರ್ಮ, ಅಭಿಶ್ರುತ ಗಣೇಶ್, ಅಸ್ವತಿ ಮಹೇಶ್ ಹಾಗೂ ವೃಷಭ ಬಿ. ವೈ. ಅವರು ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ಣ ನೃತ್ಯಾರ್ಪಣೆ ಸಲ್ಲಿಸಿ ಗಮನ ಸೆಳೆದರು.


ಕಾರ್ಯಕ್ರಮದ ಅಂತ್ಯದಲ್ಲಿ ಸಂಸ್ಥೆಯ ಸಂಚಾಲಕಿ ವಿದುಷಿ ರಂಜಿತಾ ಅವರು ಎಲ್ಲಾ ಕಲಾವಿದರನ್ನು ಸನ್ಮಾನಿಸಿದರು. ಕಾರ್ಯಕ್ರಮವು ಭಕ್ತಿ ಮತ್ತು ಕಲೆಗಳ ಸಮನ್ವಯವನ್ನು ಸಾರುವ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top