ಕಾಂಗ್ರೆಸ್‌ನಿಂದ ಮಹಿಳಾ ವಿರೋಧಿ ನೀತಿ; ನಾರಿಶಕ್ತಿ ವಂದನ್ ಅಧಿನಿಯಮಕ್ಕೆ ಅಡ್ಡಿ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಾಗ್ದಾಳಿ

Upayuktha
0


ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬಲು ತಂದಿರುವ 'ನಾರಿಶಕ್ತಿ ವಂದನ್ ಅಧಿನಿಯಮ' ಮತ್ತು ಕ್ಷೇತ್ರ ಪುನರ್ವಿಂಗಡಣಾ ವಿಧೇಯಕವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ನಿಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದರು.


ಸೋಮವಾರ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು 'ಇಂಡಿ' ಒಕ್ಕೂಟದ ಪಕ್ಷಗಳು ಮಹಿಳಾ ಮೀಸಲಾತಿ ಜಾರಿಗೆ ತಾಂತ್ರಿಕ ಅಡೆತಡೆಗಳನ್ನು ಒಡ್ಡಿ ವಿಳಂಬ ಮಾಡುತ್ತಿವೆ ಎಂದು ಆರೋಪಿಸಿದರು.


ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:

ವೈಜ್ಞಾನಿಕ ಪ್ರಕ್ರಿಯೆ: ಜನಗಣತಿಯ (Census) ನಂತರ ಕ್ಷೇತ್ರ ಪುನರ್ವಿಂಗಡಣೆ (Delimitation) ಮಾಡುವುದು ಒಂದು ಸಹಜ ಮತ್ತು ವೈಜ್ಞಾನಿಕ ಪ್ರಕ್ರಿಯೆ. 2023ರ ಬಿಲ್‌ನಲ್ಲಿ ನಾರಿಶಕ್ತಿ ವಂದನ್ ಅಧಿನಿಯಮವನ್ನು ಜನಗಣತಿಯ ನಂತರವೇ ಜಾರಿಗೆ ತರಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಕಾಂಗ್ರೆಸ್ ಈಗ ಈ ವಿಚಾರದಲ್ಲಿ 'ಬ್ಯಾಕ್‌ಟ್ರ್ಯಾಕ್' ಮಾಡುತ್ತಿದೆ ಎಂದು ಸಂಸದರು ಟೀಕಿಸಿದರು.


ದಕ್ಷಿಣ ಭಾರತದ ಹಿತರಕ್ಷಣೆ: ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಕಾಂಗ್ರೆಸ್‌ನ ಸುಳ್ಳು ನರೇಟಿವ್ ಅನ್ನು ಸಂಸದರು ಅಲ್ಲಗಳೆದರು. ದಕ್ಷಿಣದ ರಾಜ್ಯಗಳ ಹಿತರಕ್ಷಣೆಗಾಗಿ ಪ್ರಧಾನಿ ಮೋದಿಯವರು 2011ರ ಜನಗಣತಿಯನ್ನು ಆಧಾರವಾಗಿಟ್ಟು ಕೊಂಡು ವಿಶೇಷ ಸಾಂವಿಧಾನಿಕ ತಿದ್ದುಪಡಿಯೊಂದಿಗೆ ಈ ಬಿಲ್ ತಂದಿದ್ದಾರೆ.


ಸ್ಥಾನಗಳ ಏರಿಕೆ: ಕ್ಷೇತ್ರ ಪುನರ್ವಿಂಗಡಣೆಯ ನಂತರ ಕರ್ನಾಟಕದ ಲೋಕಸಭಾ ಸ್ಥಾನಗಳು 28 ರಿಂದ 42ಕ್ಕೆ ಏರಿಕೆಯಾಗಲಿವೆ. ಅದೇ ರೀತಿ ತಮಿಳುನಾಡು (39 ರಿಂದ 59), ಆಂಧ್ರಪ್ರದೇಶ (25 ರಿಂದ 38), ತೆಲಂಗಾಣ (17 ರಿಂದ 26) ಮತ್ತು ಕೇರಳದ ಸ್ಥಾನಗಳು (20 ರಿಂದ 30) ಹೆಚ್ಚಾಗಲಿವೆ. ಸಂಸತ್ತಿನಲ್ಲಿ ದಕ್ಷಿಣ ಭಾರತದ ಒಟ್ಟಾರೆ ಪ್ರಾತಿನಿಧ್ಯವು ಪ್ರಸ್ತುತ ಇರುವ 23.7% ರಿಂದ 23.9% ಕ್ಕೆ ಏರಿಕೆಯಾಗಲಿದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ಅಂಕಿ-ಅಂಶಗಳ ಸಮೇತ ಸ್ಪಷ್ಟಪಡಿಸಿದರು.


ಚುನಾವಣಾ ಗಿಮಿಕ್ ಅಲ್ಲ: 2024ರ ಚುನಾವಣೆಯ ಭಯದಿಂದ ಕಾಂಗ್ರೆಸ್ ಈ ಹಿಂದೆ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿತ್ತು, ಆದರೆ ಈಗ ಮಹಿಳೆಯರಿಗೆ ಅಧಿಕಾರ ಸಿಗುವುದನ್ನು ತಪ್ಪಿಸಲು ಇಲ್ಲಸಲ್ಲದ ಕಾರಣಗಳನ್ನು ನೀಡುತ್ತಿದೆ ಎಂದು ಚೌಟ ಕಿಡಿಕಾರಿದರು.


ಗಣ್ಯರ ಉಪಸ್ಥಿತಿ:

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಜಿಲ್ಲಾ ಖಜಾಂಚಿ ಸಂಜಯ್ ಪ್ರಭು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top