ಚೇತನಾಗೆ ಹೋಮಿಯೋಪತಿ ಸಂಶೋಧನಾ ಪ್ರಶಸ್ತಿ

Upayuktha
0


ಉ‍ಳ್ಳಾಲ: ವಿಶ್ವ ಹೋಮಿಯೋಪತಿ ದಿನ ಅಂಗವಾಗಿ ದೇರಳಕಟ್ಟೆ ಫಾದರ್‌ ಮುಲ್ಲರ್ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಚೇತನ ಪಿ.ಎಲ್. ಅವರಿಗೆ ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿ (ಸಿಸಿಆರ್‌ಎಚ್‌) ವತಿಯಿಂದ ಸಂಶೋಧನಾ ಪ್ರಶಸ್ತಿ (ಎಲ್‌ಟಿಎಸ್‌ಎಚ್‌2024) ಲಭಿಸಿದೆ.


ದೆಹಲಿಯ ವಿಜ್ಞಾನ ಭವನದಲ್ಲಿ ಏ. 10 ಮತ್ತು 11ರಂದು ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ‘ಕಾಳುಮೆಣಸು ಬೆಳೆಗೆ ತಗಲುವ ಶಿಲೀಂಧ್ರ (ಫೈಟೊಪ್ಥೋರಾ ಕ್ಯಾಪ್ಸಿಸಿ) ವಿರುದ್ಧ ಹೋಮಿಯೋಪತಿ ಔಷಧಿಗಳ ಬಳಕೆ’ ಕುರಿತಾದ ಅವರ ಸಂಶೋಧನಾ ಯೋಜನೆಗಾಗಿ ಈ ಪ್ರಶಸ್ತಿ ಲಭಿಸಿದೆ. ಅವರು ಉಳ್ಳಾಲ ತಾಲೂಕು ಲಾಡ ಬಗಂಬಿಲ ಜಿ.ಕೆ. ಪ್ರಸಾದ್ ಮತ್ತು ಜಯಶ್ರೀ ಪಿ. ದಂಪತಿ ಪುತ್ರಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top