33% ಮಹಿಳಾ ಮೀಸಲು ವಿಧೇಯಕವನ್ನು ಸೋಲಿಸಿದ ಕಾಂಗ್ರೆಸ್ ಕಾರ್ಯಕರ್ತರ ಮನೆಯ ಮಹಿಳೆಯರೂ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಿರುವ ಸುದ್ಧಿಗಳು ಬರುತ್ತಿವೆ.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮಹತ್ವದ ವಿದೇಯಕವಾದ ಮಹಿಳಾ ಮೀಸಲು ವಿದೇಯಕವನ್ನು ವಿರೋಧಿಸಿ ತಡೆದ ಕಾಂಗ್ರೆಸ್ "ನಾವು ಮೋದಿಯನ್ನು ಸೋಲಿಸಿದ್ದೇವೆ" ಎಂಬ ಭ್ರಮೆಯಲ್ಲಿದ್ದಾರೆ ಅನಿಸುತ್ತದೆ. ಆದರೆ, ಕಾಂಗ್ರೆಸ್ ಸೋಲಿಸಿದ್ದು ಮೋದಿಯನ್ನಲ್ಲ, ಬದಲಾಗಿ ಭಾರತದ ಸಮಸ್ತ ತಾಯಿಯಂದಿರನ್ನು, ಸಹೋದರಿಯರನ್ನು.
ಈಗಾಗಲೆ ಹಿಂದೂ ವಿರೋಧಿ ಪಕ್ಷ, ಅಲ್ಪ ಸಂಖ್ಯಾತರ ತುಷ್ಟೀಕರಣದ ಪಕ್ಷ, ಸದಾ ದ್ವೇಷ ಭಾಷಣ ಮಾಡುವ ಪಕ್ಷ, ಅಪ್ರಬುದ್ಧ ನಾಯಕತ್ವದ ಪಕ್ಷ, ವೈರಿ ರಾಷ್ಟ್ರಗಳನ್ನು ಹೊಗಳುವ ಪಕ್ಷ, ದೇಶವನ್ನು ಒಡೆದ ಮತ್ತು ಒಡೆಯಲು ಪ್ರಯತ್ನಿಸುತ್ತಿರುವ ಪಕ್ಷ, ಸಂವಿಧಾನವನ್ನು ದಿಕ್ಕರಿಸಿ ಎಮರ್ಜನ್ಸಿ ಹೇರಿದ ಪಕ್ಷ, ಶತ್ರು ರಾಷ್ಟ್ರಗಳೊಂದಿಗೆ ಹೋರಾಡುವಾಗ ಬೆಂಬಲ ನೀಡದ ಪಕ್ಷ, ದೇಶದ ಘನತೆಯನ್ನು ಅನುಮಾನಿಸುವ ಪಕ್ಷ... ಇತ್ಯಾದಿ ಋಣಾತ್ಮಕ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ಈಗ ಸ್ತ್ರೀ ಸಮಾನತೆಯ ವಿರೋಧಿ ಲೇಬಲ್‌ನ್ನು ತನ್ನ ಹಣೆಗೆ ಹಚ್ಚಿಕೊಂಡಂತಾಗಿದೆ! ಏನೆಲ್ಲ ಸರ್ಕಸ್‌ಗಳನ್ನು ಮಾಡಿದರೂ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸ್ತ್ರೀ ಸಮಾನತೆಯ ವಿರೋಧಿ ಎಂಬ ಹಣೆ ಪಟ್ಟಿಯಿಂದ ಹೊರಬರುವುದು ಅಷ್ಟು ಸುಲಭವಲ್ಲ ಅಂತ ಅನಿಸುತ್ತಿದೆ. ಈಗಾಗಲೆ ತಕ್ಷಣದ ಡ್ಯಾಮೇಜ್ ಕಂಟ್ರೂಲ್‌ಗೆ ಈಗಿರುವ 543 ಲೋಕಸಭಾ ಕ್ಷೇತ್ರಗಳನ್ನೇ ಪರಿಗಣಿಸಿ, 33% ಮಹಿಳಾ ಮೀಸಲು ವಿದೇಯಕವನ್ನು ಮತ್ತೆ ಮಂಡಿಸುವಂತೆ ಕಾಂಗ್ರೆಸ್ ಮತ್ತು ಡಿಎಂಕೆಗಳು ಕೇಂದ್ರ ಸರಕಾರಕ್ಕೆ ಮನವಿ ಮಾಡಿವೆ. ಸರಕಾರ 543 ಲೋಕಸಭಾ ಕ್ಷೇತ್ರಗಳನ್ನೇ ಪರಿಗಣಿಸಿ, ಮಹಿಳಾ ಮೀಸಲಾತಿ ವಿದೇಯಕವನ್ನು ಮಂಡನೆ ಮಾಡಿದರೂ, ಮಂಡನೆ ಮಾಡಿ ವಿಧೇಯಕ ಪಾಸ್ ಆದರೂ ಅದು ಕಾಂಗ್ರೆಸ್‌ಗೆ ಅಂಟಿದ ಹಣ ಪಟ್ಟಿಯ ಗಾಢ ಋಣಾತ್ಮಕ ಬಣ್ಣಗಳನ್ನು ಬದಲಿಸಲಾರದು ಅನಿಸುತ್ತದೆ.
ಒಟ್ಟಿನಲ್ಲಿ ಮಹಿಳಾ ಮೀಸಲು ವಿದೇಯಕ ತಿರಸ್ಕರಿಸಿದ ಕಾಂಗ್ರೆಸ್ ನಡೆಯಿಂದ ಪ್ರಧಾನಿ ಮೋದಿಯವರು ಸೋತು ಗೆದ್ದಿದ್ದಾರೆ, ಕಾಂಗ್ರೆಸ್ ಗೆದ್ದು ಸೋತಂತಾಗಿದೆ.
ಇನ್ನು ಜನಗಣತಿ ಆದ ನಂತರ, ಜನ ಸಂಖ್ಯೆಯನ್ನು ಆಧರಿಸಿ ಜನ ಪ್ರತಿನಿಧಿಗಳ ಸಂಖ್ಯೆ ಏರಿಸಿದರೆ ಅದು ದಕ್ಷಿಣ ಭಾರತಕ್ಕೆ ದೊಡ್ಡ ಅಸಮಾನತೆಯ ಹೊಡತ ಕೊಡಲಿದೆ ಎಂಬ ಲೆಕ್ಕಾಚಾರದಲ್ಲಿ, ಎಲ್ಲ ರಾಜ್ಯಗಳಿಗೂ ರ್‍ಯಾಂಡಮ್ ಆಗಿ 50% MP ಸೀಟ್ ಏರಿಸುವ ಯೋಜನೆಯ ಬಿಲ್ ತಯಾರಾಗಿತ್ತು ಎನ್ನಲಾಗುತ್ತಿದೆ.
ಕುಟುಂಬ ಯೋಜನೆಯನ್ನು ದಕ್ಷಿಣ ಭಾರತ ಮಾತ್ರ ಹೆಚ್ಚು ಅನುಸರಿಸಿದ್ದು, ಉತ್ತರ ಭಾರತದ ಜನಸಂಖ್ಯೆ ಒಟ್ಟಾರೆ ಆವರೇಜ್ ಪ್ರಮಾಣ ಏರಿಕೆಗಿಂತ ಗಣನೀಯವಾಗಿ ಹೆಚ್ಚಿದೆ. ಇದರ ಪರಿಣಾಮ, ಜನಸಂಖ್ಯೆಯನ್ನೇ ಆಧರಿಸಿ MP ಸೀಟ್ ಹೆಚ್ಚಿಸಿದರೆ... ಉತ್ತರ ಭಾರತದಲ್ಲಿ 50% ಹೆಚ್ಚಿನ ಸೀಟುಗಳೂ, ದಕ್ಷಿಣ ಭಾರತದಲ್ಲಿ 50% ಕಡಿಮೆ ಸೀಟುಗಳು ಏರಿಕೆಯಾಗಿ, ಉತ್ತರ-ದಕ್ಷಿಣದಲ್ಲಿ ತೀವ್ರ ಅಸಮತೋಲನ ಉಂಟಾಗುತ್ತದೆ. ಈ ಕಾರಣಕ್ಕೆ ರ‌್ಯಾಂಡಮ್ 50% MP ಸೀಟ್ ಏರಿಸುವ, ಅದರ ಜೊತೆಯಲ್ಲೇ 33% ಮಹಿಳಾ ಮೀಸಲಾತಿ (2023 ರಲ್ಲಿನ 33% ಮಹಿಳಾ ಮೀಸಲಾತಿಯನ್ನು 2026-27 ರ ಜನಗಣತಿಯನ್ನು ಆಧರಿಸಿ ವಿದೇಯಕಕ್ಕೆ ಅನುಮೋದನೆ ಮಾಡಲಾಗಿತ್ತು) ವಿಧೇಯಕವನ್ನು ಸೂಕ್ತ ಬದಲಾವಣೆಯೊಂದಿಗೆ (50% ರ್‍ಯಾಂಡಮ್) ತರುವ ಪ್ರಯತ್ನ ಈಗ ಮಾಡಲಾಯಿತು. ಆದರೆ, ಭಾರತದ ಸಮಸ್ತ ಸ್ತ್ರೀಯರ ದುರಾದೃಷ್ಟ, ಕಾಂಗ್ರೆಸ್ ಮತ್ತು ಅದರ ಮೈತ್ರಿ ಕೂಟ ಮತ್ತೊಮ್ಮೆ ತಪ್ಪು ಹೆಜ್ಜೆ ಇಟ್ಟು, ಪಾರ್ಲಿಮೆಂಟ್‌ನಲ್ಲಿ ಗೆದ್ದಿದೆ ಮತ್ತು ಹೊರಗಡೆ ತನ್ನ ಭವಿಷ್ಯದ ಸೋಲಿಗೆ ಹಾಗೂ ಸಮಸ್ತ ಭಾರತ ನಾರಿಯರ ಸೋಲಿಗೆ ನಾಂದಿ ಹಾಡಿದೆ ಎಂಬುದು ಸ್ಪಷ್ಟ.
ಅದು ಹಾಗೇ ಆದಲ್ಲಿ, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮೋದಿಗೆ ನಾರೀ ಶಕ್ತಿಯಿಂದ ಇನ್ನಷ್ಟು ಬಲ ಬರುವ ಸಾಧ್ಯತೆ ಇದೆ.
ಈ ಮಾತು ಸತ್ಯವಾದರೆ, "ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ" ಎಂಬ ಮಾತಿನಂತೆ, ಮೋದಿಯವರ ಮುಂದಿನ ಸಂಭವನೀಯ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಅಲ್ಲ, ಭಾರತದ ಬಹುಸಂಖ್ಯಾತ ಮಹಿಳೆಯರು ಇರುತ್ತಾರೆ ಎನ್ನಬಹುದು.
"ಪ್ರತಿಯೊಬ್ಬ ಪುರುಷನ ಸೋಲಿನ ಹಿಂದೆ, ಗೆಲುವನ್ನು ತರುವ ಮಹಿಳೆ ಇಲ್ಲದಿರುವುದೇ ಕಾರಣ" ಎಂಬ ಮಾತು ಕಾಂಗ್ರೆಸ್ ಪುರುಷ ನಾಯಕರ ಸಂಭವನೀಯ ಸೋಲಿಗೆ ಅನ್ವಯಿಸಿ, ಪ್ರಚಾರ ಪಡೆಯಬಹುದು!!?
ಸಂಭವನೀಯ ಸೋಲಿನ ವಿರುದ್ಧ ಕಾಂಗ್ರೆಸ್ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದು ರಾಜಕೀಯ ಪಡಸಾಲೆಗಳಲ್ಲಿ ಮುಂದಿನ ದಿನಗಳಲ್ಲಿನ ಚರ್ಚೆಗೆ ವಸ್ತುವಾಗಲಿದೆ:
1) ಕಳೆದ ಬಾರಿ ಲೋಕ ಸಭೆ ಚುನಾವಣೆಯಲ್ಲಿ ದೇಶದ ಪ್ರತೀ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ ₹.8,500 ಕೊಡುವ ಗೃಹಲಕ್ಷ್ಮೀ ಯೋಜನೆಗೆ ಮಹಿಳೆಯರು ಮತ ಹಾಕಲಿಲ್ಲ!! ಹಾಗಾಗಿ ಈ ಯೋಜನೆ ಮತ್ತೆ 'ಕೈ' ಹಿಡಿಯಲಿಕ್ಕಿಲ್ಲ!!?
2) ಅತ್ಯಂತ ಕಡಿಮೆ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ, ಚುನಾವಣಾ ಪೂರ್ವದಲ್ಲೇ (ಕಾಂಗ್ರೆಸ್ ಗೃಹಲಕ್ಷ್ಮೀ ಗ್ಯಾರಂಟಿಯನ್ನು ಬಿಜೆಪಿ ಹೈಜಾಕ್ ಮಾಡಿ, ಬಿಹಾರವನ್ನು ಕಬ್ಜ ಮಾಡಿದಂತೆ) ಒಂದು ₹.25,000 ದ್ದೋ, ₹.50,000 ಇಡೀ ಗಂಟನ್ನು ಚುನಾವಣಾ ಪೂರ್ವದಲ್ಲೇ ಹಂಚಲು ಸಾಧ್ಯವಿಲ್ಲ!!? (ಬಿಜೆಪಿಯೇ ಇಡೀ ದೇಶದಲ್ಲಿ, ಬಿಹಾರದಲ್ಲಿ ಮಾಡಿದಂತೆ, ಗ್ಯಾರಂಟಿ ಗೃಹಲಕ್ಷ್ಮೀ ಗಂಟನ್ನು ಲೋಕಸಭಾ ಚುನಾವಣೆಯ ಪೂರ್ವದಲ್ಲೇ ಮಹಿಳೆಯರಿಗೆ ಹಂಚುವ ಕೆಟ್ಟ ಸಾಧ್ಯತೆ ಯೂ ಇಲ್ಲದಿಲ್ಲ!!!)
3) ಕಾಂಗ್ರೆಸ್ 33% ಮಹಿಳಾ ಮೀಸಲಾತಿ ಬದಲಾಗಿ, ಜನಸಂಖ್ಯಾ ಆಧಾರದಲ್ಲಿ, ಪುರುಷರ ಮತ್ತು ಮಹಿಳೆಯರ ಜನಸಂಖ್ಯಾ ಅನುಪಾತದಲ್ಲಿ ಮಹಿಳಾ ಮೀಸಲಾತಿ ವಿದೇಯಕ ವನ್ನು ಮುಂದಿನ ಲೋಕಸಭಾ ಚುನಾವಣಾ ಪ್ರಣಾಳಿಕೆಯಾಗಿಸಿ, ಘೋಷಣೆ ಮಾಡಿ, ಮಹಿಳೆಯರ ಮನ, ಮತ ಸೆಳೆಯುವ ಚಿಂತನೆ ಮಾಡಬಹುದು!!?
4) ಇತಿಹಾಸದ ಚಾಣಕ್ಯ, ಬಿಜೆಪಿಯ ಅಮಿತ್ ಶಾನಂತವರು ಕಾಂಗ್ರೆಸ್‌ನಿಂದ ಎದ್ದು ಬಂದು, ನಿರೀಕ್ಷಿಸಲಾಗದ ಪ್ರತಿ ತಂತ್ರ ಮಾಡಬಹುದು!!? (ಸಾಧ್ಯತೆ ಇದೆ, ಆದರೆ ಕಷ್ಟ ಸಾಧ್ಯ!)
"ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ" ಎಂಬ ಮಾತಿಗೆ ಪೂರಕವಾಗಿ, ವರ್ತಮಾನದ ಪರಿಸ್ಥಿತಿಯಲ್ಲಿ ಭಾರತದ ಮಹಿಳೆಯರ ಮುಂದೆ ಮೋದಿ ಹೆಚ್ಚು ಬ್ರೈಟ್ ಆಗಿ ಕಾಣಿಸುತ್ತಿದ್ದಾರೆ!!.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


