ಜಮಖಂಡಿ: ಲಿಂಗತತ್ವ ಮತ್ತು ನಡೆ-ನುಡಿ ಸಿದ್ಧಾಂತದಿಂದಾಗಿ ಬಸವತತ್ತ ಗಟ್ಟಿಯಾಗಿ ನಿಲ್ಲುತ್ತದೆ. ಸೌಹಾರ್ದ ಸಮಾಜ ಬೆಳೆಸಬೇಕೆಂದು ಬಸವಣ್ಣನವರು ಲಿಂಗತತ್ವ ಪ್ರತಿಪಾದಿಸಿದರು. ಭಾರತೀಯ ಸಂಸ್ಕೃತಿ ಸೌಹಾರ್ದ ಸಂಸ್ಕೃತಿಯಾಗಿದೆ ಎಂದು ಗೋಠೆ ಗ್ರಾಮದ ಶರಣೆ ಡಾ.ಗಂಗಾಶ್ರೀ ಪಾಟೀಲ ಹೇಳಿದರು.
ಬಸವ ಜಯಂತಿ ನಿಮಿತ್ತ ಒಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಆರು ದಿನಗಳ ಓಲೆಮಠದ ಜಾತ್ರಾ ಮಹೋತ್ಸವದ ಶುಕ್ರವಾರ ಸಂಜೆಯ ಕಾರ್ಯಕ್ರಮದಲ್ಲಿ ಅವರು ‘ವಚನಗಳಲ್ಲಿ ಸೌಹಾರ್ದತೆಯ ನೆಲೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಲಿಂಗದಿಂದಾಚೆಗೆ ಬಸವಧರ್ಮವಿದೆ. ಆತ್ಮವೇ ಲಿಂಗಸ್ವರೂಪ. ಲಿಂಗ ಅರಿವಿನ ಕುರುಹು. ಬುದ್ಧಿಯನ್ನು ಹತೋಟಿಯಲ್ಲಿಡಲು ಲಿಂಗಪೂಜೆ ಮಾಡಬೇಕು. ತಮ್ಮನ್ನೆ ತಾವು ಸವಾಲಿಗಿಟ್ಟು ನಡೆದಂತೆ ನುಡಿಯುವುದು ನಿಜವಾದ ತತ್ವ ಎಂದರು.
ಓಲೆಮಠದ ಆನಂದ ದೇವರು ಶ್ರೀಗಳು ನೇತೃತ್ವ ವಹಿಸಿ ಮಾತನಾಡಿ, ಸೌಹಾರ್ದತೆ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ. ಬಸವಾದಿ ಶಿವಶರಣರು ಪ್ರೀತಿ, ವಿಶ್ವಾಸದಿಂದ ಬದುಕಲು ತಿಳಿಸಿದ್ದಾರೆ. ಆದ್ದರಿಂದ ದ್ವೇಷ ಬಿಟ್ಟು ಪ್ರೀತಿ ಮಾಡುವುದೆ ಸೌಹಾರ್ದತೆ ಎಂದು ಆಶೀರ್ವಚನ ನೀಡಿದರು.
ದೇವರು ಮತ್ತು ದೆವ್ವ ಹೊರಗಡೆಯಿಲ್ಲ, ಒಳಗಡೆಯಿವೆ. ಒಳ್ಳೆಯ ವಿಚಾರವೇ ದೇವರು. ಕೆಟ್ಟ ವಿಚಾರವೇ ದೆವ್ವ. ಆದ್ದರಿಂದ ಇನ್ನೊಬ್ಬರ ಮನಸ್ಸು ನೋಯಿಸದಂತೆ ಬದುಕಿದರೆ ದೇವರು ಒಲಿಯುತ್ತಾನೆ. ದೇವಮಾನವರಾಗಲು ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯ ವಿಚಾರಗಳನ್ನು ಮೈಗೂಡಿಸಕೊಳ್ಳಬೇಕು ಎಂದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿದರು. ಹಿರೇಪಡಸಲಗಿಯ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಹುಲ್ಯಾಳ ಸಾರವಾಡ ಮಠದ ಕೃಷ್ಣಯ್ಯ ಸ್ವಾಮಿಗಳು, ಹುಲ್ಯಾಳದ ದುಂಡಯ್ಯಾ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಪೌರಾಯುಕ್ತ ಜ್ಯೋತಿ ಗಿರೀಶ, ಎಂಜಿನಿಯರ್ ಎ.ಆರ್. ಶಿಂಧೆ, ರಮೇಶ ಅಣ್ಣಿಗೇರಿ, ಉಮೇಶ ಶಿದರಡ್ಡಿ, ಡಿ.ಡಿ. ಜೋಗದಂಡೆ, ಮಹೇಶ ಮಡಿವಾಳರ, ಹನಮಂತ ಮಗದುಮ, ದಶರಥ ವಗ್ಗೆನ್ನವರ, ಪತ್ರಕರ್ತ ಕೇದಾರೆಪ್ಪ ರಾವಳೋಜಿ, ಅನಿತಾ ಪಾಟೀಲ, ಪ್ರತೀಕ್ಷಾ ಜಿರಲಿ, ಜ್ಯೋತಿ ಕಟಗಿ, ಗಿರಿಜಾ ಮೇತ್ರಿ, ಶ್ವೇತಾ ಬಣ್ಣದ, ಲಕ್ಷ್ಮೀ ನಾಯಕ, ಅನು ನಾಯಕ, ಮುತ್ತವ್ವ ಪೂಜಾರಿ ಇತರರು ಇದ್ದರು.
ಜೈನ ಸಮಾಜ ಬಾಂಧವರಾದ ದಯಾನಂದ ಶಿರಗಾರ, ಆರ್.ಪಿ. ನ್ಯಾಮಗೌಡ, ಶೀತಲ ನ್ಯಾಮಗೌಡ, ಕಿರಣ ದೇಸಾಯಿ, ವಿನಯ ಸಿದ್ದಾರ, ಬಸವರಾಜ ಆಲಗೂರ ಮಹಾಪ್ರಸಾದದ ಸೇವೆ ಸಲ್ಲಿಸಿದರು. ಉಪನ್ಯಾಸಕಿ ಚಂದ್ರಕಲಾ ಜನಗೌಡ, ಬಸವ ಕೇಂದ್ರದ ಸದಸ್ಯ ಅಣ್ಣಾಸಾಹೇಬ ಜಗದೇವ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


