ಎ.16-19: ಪುತ್ತೂರಿನ ‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’

Upayuktha
0


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ತಿಂಗಳಾಡಿ ಎಂಬಲ್ಲಿ ನಡೆಯುವ ರಾಜ್ಯಮಟ್ಟದ ‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’ವನ್ನು ಈ ಬಾರಿ ಏಪ್ರಿಲ್ 16 ರಿಂದ 19 ರ ವರೆಗೆ ನಡೆಸಲಾಗುತ್ತಿದೆ. ಕಾಡಿನ ರಹಸ್ಯ ತಿಳಿಯುವಿಕೆಯ ಜೊತೆಗೆ ಟ್ರೆಷರ್ ಹಂಟ್, ವರ್ಲಿ ಆರ್ಟ್, ನೀರಾಟ, ಗೋವು ಮೇವು, ಗೋ ಪೂಜೆ, ನಿತ್ಯ ಪೂಜೆ, ರಾಮಾಯಣ ದೃಶ್ಯ ಕಾವ್ಯ, ಭಗವದ್ ಗೀತೆ ಜೊತೆಗೆ ಜೀವನ ಕೌಶಲ್ಯಗಳನ್ನು ತಿಳಿಸುವ ಹತ್ತು ಹಲವು ಕುತೂಹಲಕಾರಿ ಮನರಂಜನಾ ಆಟಗಳನ್ನು ಜೋಡಿಸಿಕೊಳ್ಳಲಾಗಿದೆ. ಆಕಾಶ ವೀಕ್ಷಣೆ-ನಿದ್ರೆ, ರಂಗೋಲಿ, ಸೌದೆ ಒಲೆ ಅಡಿಗೆ ಕಲಿಕೆ, ಗೆರಟೆ ಚಿತ್ರ, ವ್ಯವಹಾರದ ಪಾಠದ ಜೊತೆ ಮಕ್ಕಳ ನಿತ್ಯ ಕರ್ಮಗಳ ಅಭ್ಯಾಸವು ಸಾಧ್ಯವಾಗುತ್ತಿದೆ. 


ಇದರ ಸಂಪೂರ್ಣ ನಿರ್ವಹಣೆಯನ್ನು ರಾಮಕೃಷ್ಣ ಮಠದ ಭಕ್ತರು ಹಾಗೂ ಮನಃಶಾಸ್ತ್ರಜ್ಞರಾದ ಲಕ್ಷ್ಯ ಸಂಸ್ಥೆಯ ಸಂಸ್ಥಾಪಕರು, ಶ್ರೀ ದುರ್ಗಾ ಪರಮೇಶ್ವರ ಭಟ್ ಇವರು ವಹಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಜೊತೆಗಿನ ಸಂಪರ್ಕ ಶಾಲಾ ಮಕ್ಕಳಿಗೆ ಕಡಿತವಾಗುತ್ತಿರುವುದರಿಂದ ಸುಬ್ಬಜ್ಜನ ಮನೆ ಶಿಬಿರವು ಮಕ್ಕಳಿಗೆ ಪ್ರಕೃತಿ ಒಡಲಿನ ಅವಶ್ಯಕತೆಯನ್ನು ಹಾಗೂ ಅಗಾಧತೆಯನ್ನು ತಿಳಿಸುತ್ತದೆ. ಮೊದಲು ನೋಂದಾಯಿಸಿಕೊಳ್ಳುವ ಆಸಕ್ತ 30 ಮಕ್ಕಳಿಗೆ ಅವಕಾಶವನ್ನು ನೀಡಲಾಗುತ್ತಿದೆ. ದೂರವಾಣಿ ಸಂಖ್ಯೆ 9740645095 / 9663826972 ಕರೆ ಮಾಡುವುದರ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top