ಪುತ್ತೂರು:
ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮಂಗಳೂರಿನ
ಗುರುಚರಣ್ ಇಂಡಸ್ಟ್ರೀಸ್‌ಗೆ ಇತ್ತೀಚೆಗೆ ಕೈಗಾರಿಕಾ ಭೇಟಿ ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದ ನೈಜ
ಕಾರ್ಯವಿಧಾನಗಳನ್ನು ಪರಿಚಯಿಸುವ ಉದ್ದೇಶ ಹೊಂದಿತ್ತು.
ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ
ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ನೀಡಿ, ಉತ್ಪಾದನಾ ಪ್ರಕ್ರಿಯೆಗಳ ವಿವಿಧ ಹಂತಗಳನ್ನು
ವಿವರಿಸಿದರು. ಪಿ.ಪಿ. ವಿಭಾಗದ ಸಹಾಯಕ ವ್ಯವಸ್ಥಾಪಕ ಸೈಫ್ ಹಾಗೂ ಎಚ್.ಎಂ. ವಿಭಾಗದ ಸಹಾಯಕ
ವ್ಯವಸ್ಥಾಪಕ ಸಜಿತ್ ಅವರು ಕೈಗಾರಿಕೆಯ ಕಾರ್ಯವಿಧಾನಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಕಚ್ಚಾ ವಸ್ತುಗಳ ಸ್ವೀಕಾರದಿಂದ ಆರಂಭಿಸಿ ಅಂತಿಮ ಉತ್ಪನ್ನಗಳ ತಯಾರಿವರೆಗೆ ನಡೆಯುವ ಕ್ರಮಗಳನ್ನು
ಹಂತ ಹಂತವಾಗಿ ತಿಳಿಸಲಾಯಿತು. ಜೊತೆಗೆ ಯಂತ್ರೋಪಕರಣಗಳ ಬಳಕೆ, ಸುರಕ್ಷತಾ ಕ್ರಮಗಳು ಹಾಗೂ
ಗುಣಮಟ್ಟ ನಿಯಂತ್ರಣ ವಿಧಾನಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಯಿತು.
ವಿದ್ಯಾರ್ಥಿಗಳು ಕೈಗಾರಿಕಾ ವ್ಯವಸ್ಥಾಪನೆ,
ಕಾರ್ಮಿಕರ ಕಾರ್ಯಪದ್ಧತಿ ಹಾಗೂ ಉತ್ಪಾದನಾ ನಿರ್ವಹಣೆಯ ಬಗ್ಗೆ ನೇರವಾಗಿ ತಿಳಿದುಕೊಂಡರು.ಈ
ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಕಿಶೋರ್ ಕುಮಾರ್ ರೈ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಮೇಘಶ್ರೀ,
ರಾಕೇಶ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



