ಕಟ್ಟೆಚ್ಚರ ಅಲ್ಲ, ನೆಲವಾಸಿಗಳ ಸಮಸ್ಯೆಗೆ ಸಮಗ್ರ ಪರಿಹಾರ ಬೇಕು

Upayuktha
0



ಟ್ಟೆಚ್ಚರ ಪರಿಹಾರ ಅಲ್ಲ; ಗ್ಯಾಸ್ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಬಗ್ಗೆ ಸರಕಾರ ಗಮನ ಹರಿಸಲಿ.


ಆ ಕಡೆ ಗ್ಯಾಸೂ ಇಲ್ಲ (ಸದ್ಯಕ್ಕೆ ಮನೆಯ ಗ್ಯಾಸ್‌ಗೆ ಸಮಸ್ಯೆ ಇಲ್ಲ). ಈ ಕಡೆ ಸೌದೆ ಮುಟ್ಟಬೇಡಿ ಎಂದರೆ, ನೆಲವಾಸಿಗಳು ಅಕ್ಕಿ ನೆನೆಸಿಟ್ಟು ತಿನ್ನೋಕಾಗುತ್ತೆಯೇ?


ಮೊದಲು ಆನೆಗಳಿಂದ ಮನುಷ್ಯರ ಹತ್ಯೆ ಆಗದಂತೆ ಕಟ್ಟೆಚ್ಚರ ಕ್ರಮ ಕೈಗೊಳ್ಳಲಿ. ಕಳೆದ 10 ದಿನಗಳಲ್ಲಿ ಕೊಡಗಿನಲ್ಲಿ ಆನೆಯಿಂದ ಎರಡು ಹತ್ಯೆಗಳು ನಡೆದಿವೆ. ಕಟ್ಟೆಚ್ಚರ ಕ್ರಮ ಮೊದಲು ಎಲ್ಲಿ ಅಗತ್ಯವಿದೆ ಎಂಬುದನ್ನು ಸರಕಾರ ವಿವೇಚನೆಯಿಂದ ನಿರ್ಧರಿಸಬೇಕು. ಇದು ಒಂದು ವಿಚಾರ.


ಇನ್ನೊಂದು, ಗ್ಯಾಸ್ ಸಮಸ್ಯೆಯಿಂದ ಸೌದೆ ಕಡಿದು ಸಾಗಿಸುವುದು ನಾಳೆ ದಂದೆಯಾಗುವ ಸಾಧ್ಯತೆಯೂ ಇದೆ. ಮರಳು ದಂಧೆಯಂತೆ ಸೌದೆ ಸಾಗಾಣಿಕೆ ದಂಧೆಯೂ ಆರಂಭವಾಗಬಹುದು. ಎಷ್ಟೇ ತೋರಿಕೆಗೆ ಕಟ್ಟೆಚ್ಚರ ಕ್ರಮ ಕೈಗೊಂಡರೂ ಇಂದಿಗೂ ಮರಳು ದಂಧೆ ನಿಲ್ಲಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಸೌದೆ ದಂಧೆಯನ್ನೂ ಕಟ್ಟೆಚ್ಚರ ಕ್ರಮದಿಂದ ನಿಯಂತ್ರಿಸಲು ಸಾಧ್ಯವಾಗುತ್ತದೆಯೇ?


ಅಕಸ್ಮಾತ್ ಸೌದೆ ಸಾಗಾಣಿಕೆ ದಂಧೆ ಶುರುವಾದರೆ, ಸೌದೆ ಸಾಗಾಣಿಕೆ ಮಾಡುವವರು ಸಿಕ್ಕಿಬಿದ್ದರೆ, ಅದೇ ಕಟ್ಟೆಚ್ಚರ ಕ್ರಮ ವಹಿಸುವವರಿಗೆ ನೂರೋ ಇನ್ನೂರೋ ಕೊಟ್ಟರೆ ಕೇಸು ಸ್ಥಳದಲ್ಲೇ ಖುಲಾಸೆಯಾಗುವ ಪರಿಸ್ಥಿತಿ ಉಂಟಾಗಬಹುದು.


ಅಕ್ರಮ ಮರಳು ಸಾಗಾಣಿಕೆ ಕೇಸು, ಹೆಲ್ಮೆಟ್ ಧರಿಸದಿರುವ ಕೇಸು, ಕಾರಿನ ಸೀಟ್ ಬೆಲ್ಟ್ ಧರಿಸದಿರುವ ಕೇಸು, ವ್ಯಾಪಾರಸ್ಥರು GST ಬಿಲ್ ನೀಡದಿರುವ ಕೇಸು-  ಯಾವುದರಲ್ಲೂ ಕಟ್ಟೆಚ್ಚರ ಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಕಟ್ಟೆಚ್ಚರ ಕ್ರಮದಿಂದ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚಾಗಿದೆ.


ಸಕಲ ಬಂದೋಬಸ್ತ್ ಇದ್ದರೂ ಅಕ್ರಮ ವಿದೇಶಿ ಅಡಿಕೆ ಆಮದನ್ನು ತಡೆಯಲು ಸಾಧ್ಯವಾಗದ ಸರಕಾರಕ್ಕೆ, ಅರಣ್ಯ ಇಲಾಖೆಯಲ್ಲಿ ಸೀಮಿತ ಅಧಿಕಾರಿಗಳಿರುವ ಪರಿಸ್ಥಿತಿಯಲ್ಲಿ ಮರಳು ಮತ್ತು ಸೌದೆ ದಂಧೆಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವೇ?


ಕಾಡುಪ್ರಾಣಿಗಳಿಂದ ಮನುಷ್ಯರ ಜೀವಹಾನಿ, ಕೃಷಿಭೂಮಿ ಹಾಗೂ ಬೆಳೆಗಳ ಹಾನಿಯನ್ನು ತಡೆಯಲು ಸಾಧ್ಯವಾಗದ ಸರಕಾರಕ್ಕೆ ಸೌದೆ ದಂಧೆಗಳನ್ನು ತಡೆಯಲು ಸಾಧ್ಯವೇ?


ಮೊದಲು ಕಾಡುಪ್ರಾಣಿಗಳಿಂದ ನೆಲವಾಸಿಗಳನ್ನು ರಕ್ಷಿಸುವಲ್ಲಿ, ಕೃಷಿ ಬೆಳೆಗಳನ್ನು ಕಾಪಾಡುವಲ್ಲಿ ಕಟ್ಟೆಚ್ಚರ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮೊದಲು ಭ್ರಷ್ಟಾಚಾರದ ಮೇಲೆಯೇ ಕಟ್ಟೆಚ್ಚರ ಕ್ರಮ ಅಗತ್ಯ.


ರೈತರು, ನೆಲವಾಸಿಗಳು ಹಾಗೂ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಹಯೋಗದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರೋಪಾಯಗಳನ್ನು ಅನುಷ್ಠಾನಕ್ಕೆ ತರಬೇಕು.


ಮಾಧವ ಗಾಡ್ಗೀಳ್ ಅವರು ಹೇಳಿದಂತೆ, ಸರಕಾರ ಮತ್ತು ಅರಣ್ಯ ಇಲಾಖೆಗಳು “ಜಪ್ತಿ ಕೆಲಸ” ಹಾಗೂ “ಕೋಟೆ ರಕ್ಷಕನ ರೀತಿಯ ವರ್ತನೆ” ತೋರಿಸುವುದು ಅರಣ್ಯ ನಾಶಕ್ಕೂ ಕಾರಣವಾಗಬಹುದು ಎಂಬ ಮಾತನ್ನು ಮೊದಲು ಅರ್ಥ ಮಾಡಿಕೊಂಡು, ನಂತರ ಕಟ್ಟೆಚ್ಚರ ಕ್ರಮಗಳ ಸಾಧ್ಯತೆ ಬಗ್ಗೆ ಚಿಂತನೆ ಮಾಡಬೇಕು.


– ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top