ಪೌರಾಣಿಕ ಪ್ರಜ್ಞೆ ಉಳಿದಿರುವುದರ ಹಿಂದೆ ಯಕ್ಷಗಾನ ಬಲವಾಗಿ ನಿಂತಿದೆ: ಕಲ್ಕೂರ

Upayuktha
0


ಮಂಗಳೂರು, ಮಾ. 24: “ಯಕ್ಷಗಾನವು ಜನಸಾಮಾನ್ಯರ ಪೌರಾಣಿಕ ಜ್ಞಾನಾಸಕ್ತಿಯನ್ನು ತಣಿಸುವ ಪ್ರಮುಖ ಮಾಧ್ಯಮವಾಗಿದೆ. ನಾವು ಎಷ್ಟೇ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡರೂ, ಪುರಾಣಗಳು ನೀಡುವ ಜ್ಞಾನಧಾರೆಯನ್ನು ಅವು ಪರ್ಯಾಯವಾಗಿ ನೀಡಲು ಸಾಧ್ಯವಿಲ್ಲ. ಯಕ್ಷಗಾನ ಕಲೆಯ ಮೂಲಕ ನಿರಕ್ಷರರೂ ಅಗಾಧ ಪಾಂಡಿತ್ಯವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಗಳಿಸುತ್ತಾರೆ,” ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.


ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗುರುಪುರ ಸುರೇಂದ್ರ ಮಲ್ಲಿಯವರನ್ನು ಸನ್ಮಾನಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.


“ಒಂದು ಹಂತದಲ್ಲಿ ಯಕ್ಷಗಾನ ಕುಸಿತದ ಅಂಚಿನಲ್ಲಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಪುನರುಜ್ಜೀವನ ಪಡೆದು, ಸಂಘಟಿತ ಹಾಗೂ ವೃತ್ತಿಪರ ಮೇಳವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದ ಯಜಮಾನತ್ವವನ್ನು ಹೊತ್ತುಕೊಂಡು, ಅದನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಗುರುಪುರ ಸುರೇಂದ್ರ ಮಲ್ಲಿಯವರ ಸೇವೆ ಶ್ಲಾಘನೀಯವಾಗಿದ್ದು, ಅವರು ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ,” ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಆರಂಭದಲ್ಲಿ ಹರಿಕೃಷ್ಣ ಪೆಜತ್ತಾಯರು ಯಕ್ಷಗಾನದ ಶೈಲಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬೆಂಕಿನಾಥೇಶ್ವರ ಮೇಳದ ಸಲಹಾ ಸಮಿತಿಯ ಅಧ್ಯಕ್ಷ ಶೀನಿವಾಸ ಭಟ್ಟರು ಸ್ವಾಗತ ಭಾಷಣ ಮಾಡಿದರು. ವರ್ಕಾಡಿ ರವಿ ಅಲೆವೂರಾಯರು ಅಭಿನಂದನಾ ಭಾಷಣಗೈದರು.


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಚಿತ್ತರಂಜನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಾಳ ರವೀಂದ್ರ ರಾವ್, ಕಿಶೋರ್ ಕುಮಾರ್ ಬಾಳ, ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಲಹಾ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಬಿ. ಧನ್ಯವಾದಗಳನ್ನು ಸಲ್ಲಿಸಿದರು.


ಬ್ರಹ್ಮಕಲಶೋತ್ಸವದ ಅಂಗವಾಗಿ ಬೆಂಕಿನಾಥೇಶ್ವರ ಮೇಳದ ವತಿಯಿಂದ “ಓಂ ನಮಃ ಶಿವಾಯ” ಎಂಬ ಬಯಲಾಟ ಪ್ರದರ್ಶನ ನಡೆಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top