ಆರೋಗ್ಯ ಸಂಪತ್ತು ನೀತಿ ಮಹಿಳೆಯರ ಕಾಳಜಿಯಾಗ ಬೇಕು-ಡಾ. ಅನುಪ್ತಾ ಶೆಟ್ಟಿ

Upayuktha
0


ಸುರತ್ಕಲ್: ಹಿಂದೂ ವಿದ್ಯಾದಾಯಿನಿ ಸಂಘ ರಿ. ಸುರತ್ಕಲ್ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟಖಾತರಿ ಕೋಶ (IQAC), ಗ್ರಾಹಕರ ವೇದಿಕೆ ಹಾಗೂ ಮಹಿಳಾ ವೇದಿಕೆಗಳ  ಸಹಯೋಗದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳೆಯರ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀನಿವಾಸ ಮೆಡಿಕಲ್ ವಿಜ್ಞಾನ ಸಂಸ್ಥೆಯ ಒಬಿಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನುಪ್ತಾ ಶೆಟ್ಟಿ ಅವರು ಮಾತನಾಡಿ, ಮಹಿಳೆಯರು ತಮ್ಮದೈನಂದಿನ ಜೀವನದಲ್ಲಿ “ಆರೋಗ್ಯವೇ ಸಂಪತ್ತು” ಎಂಬ ನೀತಿಯನ್ನು ಅಳವಡಿಸಿಕೊಳ್ಳಬೇಕು. ನಿಯಮಿತಆರೋಗ್ಯತಪಾಸಣೆ, ಸಮತೋಲನ ಆಹಾರ, ಮಾನಸಿಕ ಆರೋಗ್ಯದ ಕಾಳಜಿ ಹಾಗೂ ರೋಗಗಳ ತ್ವರಿತ ಪತ್ತೆ ಮಹಿಳೆಯರ ಬದುಕಿನಲ್ಲಿ ಬಹಳ ಮುಖ್ಯವೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಾಲೇಜು ಪ್ರಾಂಶುಪಾಲ ಪ್ರೊ. ಹರೀಶಆಚಾರ್ಯ ಪಿ. ವಹಿಸಿ, ಶೈಕ್ಷಣಿಕ ಅಗತ್ಯತೆಗಳ ನಡುವೆ ವಿದ್ಯಾರ್ಥಿನಿಯರುತಮ್ಮಆರೋಗ್ಯದ ಬಗೆಗೂ ಹೆಚ್ಚಿನ ಗಮನ ಹರಿಸುವಂತೆಕರೆ ನೀಡಿದರು.


ಕಾರ್ಯಕ್ರಮವನ್ನುಗ್ರಾಹಕ ಹಕ್ಕುಗಳ ಘಟಕ ಮತ್ತು ಮಹಿಳಾ ವೇದಿಕೆ ಸಂಯೋಜಕರಾದ ದಯಾ ಸುವರ್ಣ ಹಾಗೂ ಡಾ.ಶ್ರೀದೇವಿ ಯಶಸ್ವಿಯಾಗಿ ಸಂಘಟಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿಡಾ.ಆಶಾಲತಾ ಪಿ., ಡಾ.ಸುಜಾತಾ, ಮೇಜರ್‍ಡಾ. ಸುಧಾಯು.,ಗೀತಾ ಕೆ., ವಿದ್ಯಾ ಪಾಟೀಲ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಆಡಳಿತಾತ್ಮಕ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಥಮ ಬಿ.ಎ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾಗಿ, ರಚನಾ ದ್ವಿತೀಯ ಬಿ.ಬಿ.ಎ ಅತಿಥಿ ಪರಿಚಯ ಮಾಡಿದರು. ಮಂಜುಳಾ ತೃತೀಯ ಬಿ.ಎ ಕಾರ್ಯಕ್ರಮ ನಿರ್ವಹಿಸಿ ನಂದಿನಿ ತೃತೀಯ ಬಿ.ಎ ಧನ್ಯವಾದ ಸಮರ್ಪಿಸಿದರು.


ವಿದ್ಯಾರ್ಥಿನಿಯರ ಕ್ರಿಯಾಶೀಲ ಭಾಗವಹಿಸುವಿಕೆಯೊಂದಿಗೆ, ಕಾರ್ಯಕ್ರಮವು ಮಹಿಳೆಯರಲ್ಲಿ ಆರೋಗ್ಯಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top