ಮಂಗಳೂರು: ಶ್ರೀನಿವಾಸ ಯುನಿವರ್ಸಿಟಿ, ಮುಕ್ಕ, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ, ಮಂಗಳೂರು ಮತ್ತು ರೋರಿಗ್ ಇನ್‍ಸ್ಟಿಟ್ಯೂಟ್, ಬೋನ್ ಯುನಿವರ್ಸಿಟಿ, ಜರ್ಮನಿ ಇವರ ನಡುವೆ ಒಪ್ಪಂದ ಪತ್ರ (MoU)ವು ಹೋಟೇಲ್ ಶ್ರೀನಿವಾಸದಲ್ಲಿ ದಿನಾಂಕ 17.03.2026ರಂದು ಅಧಿಕೃತವಾಗಿ ಸಹಿ ಮಾಡುವ ಮೂಲಕ ಒಂದು ಮಹತ್ವದ ಮೈಲಿಗಲ್ಲು ಸಾಧಿಸಲಾಯಿತು. ಈ ಸಂದರ್ಭದಲ್ಲಿ ಡಾ.ಮೆಡ್.ಕ್ರಿಸ್ಟೋಪರ್ ರೋರಿಗ್, ಎಎನ್‍ಎಸ್‍ಪಿ, ಜರ್ಮನಿ ಪ್ರೊ. ಇ.ಎಮ್ ಡಾ. ಮೆಡ್, ಅಪು ರೋರಿಗ್, ಪ್ರಾಜೆಕ್ಟ್ ಸೈಂಟಿಪಿಕ್ ಡೈರೆಕ್ಟರ್, ಅರ್‍ಡಿಎಮ್ ಪಾರ್ ಕ್ವಾಲಿಟಿ ಆಫ್ ಲೈಫ್ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್, ಜರ್ಮನಿ, ಹಾಗೂ ಶ್ರೀನಿವಾಸ ಯುನಿವರ್ಸಿಟಿಯ ಗೌರವಾನ್ವಿತ ಪ್ರೊ. ಚಾನ್ಸೆಲರ್, ಡಾ.ಎ.ಶ್ರೀನಿವಾಸ್‍ರಾವ್, ಮಾಸ್ಟರ್ ಇಶಾನ್, ಡಾ. ಸತ್ಯನಾರಾಯಣ ರೆಡ್ಡಿ, ಉಪ ಕು¯ಪತಿ, ಶ್ರೀನಿವಾಸ ಯುನಿವರ್ಸಿಟಿ, ಡಾ.ಅನಿಲ್ ಕುಮಾರ್, ರಿಜಿಸ್ಟ್ರಾರ್, ಶ್ರೀನಿವಾಸ ಯುನಿವರ್ಸಿಟಿ, ಡಾ.ಶ್ರೀನಿವಾಸಮಯ್ಯ ಡಿ, ರಿಜಿಸ್ಟ್ರಾರ್ ಇವಾಲ್ಯುವೇಶನ್, ಶ್ರೀನಿವಾಸ ಯುನಿವರ್ಸಿಟಿ, ಡಾ.ಆಜಯ್ ಕುಮಾರ್, ರಿಜಿಸ್ಟ್ರಾರ್ ಡೆವಲಪ್‍ಮೆಂಟ್, ಶ್ರೀನಿವಾಸ ಯುನಿವರ್ಸಿಟಿ, ಡಾ.ಎ.ಆರ್. ಶಬರಾಯ, ಪ್ರಾಂಶುಪಾಲರು, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ, ವಳಚ್ಚಿಲ್, ಮಂಗಳೂರು, ಡಾ. ಪ್ರವೀನ್ ಬಿ.ಎಮ್, ಡೈರೆಕ್ಟರ್, ರಿಸರ್ಚ್, ಶ್ರೀನಿವಾಸ ಯುನಿವರ್ಸಿಟಿ, ಮುಕ್ಕ, ಮತ್ತು ಡಾ.ವೀರೇಶ್.ಕೆ ಚೆಂಡೂರ, ಪ್ರೊಫೆಸರ್, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ, ವಳಚ್ಚಿಲ್, ಮಂಗಳೂರು ಇವರು ಉಪಸ್ಥಿತರಿದ್ದರು. ಈ ಸಹಭಾಗಿತ್ವವು ಅಂತರರಾಷ್ಟ್ರೀಯ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರವನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.
ಈ (MoU) ಉದ್ದೇಶವು ಮೆಟಾ-ವಿಶ್ಲೇಷಣೆ (Meta-Analysis), ಸಂಯುಕ್ತ ಸಂಶೋಧನಾ ಚಟುವಟಿಕೆಗಳು ಮತ್ತು ವೈಜ್ಞಾನಿಕ ಪ್ರಕಟಣೆಗಳು ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುವುದಾಗಿದೆ. ಈ ಒಪ್ಪಂದದ ಮೂಲಕ, ಸಂಸ್ಥೆಗಳು ತಮ್ಮ ಪರಿಣತಿ, ಸಂಪನ್ಮೂಲಗಳು ಮತ್ತು ಶೈಕ್ಷಣಿಕ ಸಾಮಥ್ರ್ಯಗಳನ್ನು ಒಗ್ಗೂಡಿಸಿ ಉನ್ನತ ಮಟ್ಟದ ಸಂಶೋಧನೆಯನ್ನು ಪ್ರೋತ್ಸಾಹಿಸಲು ಬದ್ಧರಾಗಿವೆ. ಈ ಸಹಭಾಗಿತ್ವವು ಸಾಕ್ಷ್ಯಾಧಾರಿತ ವಿಧಾನಗಳನ್ನು ಬಲಪಡಿಸುವುದರ ಜೊತೆಗೆ ಔಷಧಶಾಸ್ತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಗೆ ಸಹಕಾರಿಯಾಗಲಿದೆ.
ಸಹಕಾರದ ಪ್ರಮುಖ ಕ್ಷೇತ್ರಗಳು:
ಉದಯೋನ್ಮುಖ ಆರೋಗ್ಯ ವಿಷಯಗಳ ಕುರಿತು ಸಿಸ್ಟಮ್ಯಾಟಿಕ್ ವಿಮರ್ಶೆಗಳು ಮತ್ತು ಮೆಟಾ-ವಿಶ್ಲೇಷಣೆಗಳು ನಡೆಸುವುದು, ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಸಂಯುಕ್ತ ಸಂಶೋಧನಾ ಯೋಜನೆಗಳು ಪ್ರಾರಂಭಿಸುವುದು, ಖ್ಯಾತ ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಸಹ-ಲೇಖನ ಪ್ರಕಟಣೆಗಳನ್ನು ಉತ್ತೇಜಿಸುವುದು ಮತ್ತು ಅಧ್ಯಾಪಕರು ಮತ್ತು ಸಂಶೋಧಕರ ನಡುವೆ ಶೈಕ್ಷಣಿಕ ವಿನಿಮಯವನ್ನು ಸುಗಮಗೊಳಿಸುವುದು.
ಈ (MoU) ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಜ್ಞಾನ ಹಂಚಿಕೆ, ಸಾಮಥ್ರ್ಯ ವೃದ್ಧಿ ಮತ್ತು ಜಾಗತಿಕ ಸಂಶೋಧನಾ ಮಾನದಂಡಗಳ ಪರಿಚಯಕ್ಕಾಗಿ ವೇದಿಕೆಯನ್ನು ಒದಗಿಸುತ್ತದೆ. ಇದು ನವೀನತೆ, ಸಂಶೋಧನಾ ಶ್ರೇಷ್ಠತೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುತ್ತದೆ.
ಜರ್ಮನಿಯ ಸಂಸ್ಥೆಯೊಂದಿಗಿನ ಈ ಸಹಭಾಗಿತ್ವವು ಅಂತರಶಾಸ್ತ್ರೀಯ ಸಂಶೋಧನೆಗೆ ಹೊಸ ದಾರಿಗಳನ್ನು ತೆರೆಯುವ ನಿರೀಕ್ಷೆಯಿದ್ದು, ಭಾಗವಹಿಸುವ ಸಂಸ್ಥೆಗಳ ಜಾಗತಿಕ ಶೈಕ್ಷಣಿಕ ಪ್ರತಿಷ್ಠೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


