"ಇಂಟರ್ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಕಾನ್ಪರೆನ್ಸ್ ಆನ್ ಟೆಕ್ನಾಲಾಜಿಕಲ್ ಅಡ್ವಾನ್ಸಸ್ ಇನ್ ಪ್ರಾಕ್ಟೀಸ್ ಆಂಡ್ ಸಸ್ಟೈನೆಬಿಲಿಟಿ"
ಮಂಗಳೂರು: ಮಂಗಳೂರಿನ ವಳಚ್ಚಿಲ್‍ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜ್‍ನಲ್ಲಿ 14 ಮತ್ತು 15 ಮಾರ್ಚ್ 2026ರಂದು ಇಂಟರ್ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಕಾನ್ಪರೆನ್ಸ್ ಆನ್ ಟೆಕ್ನಾಲಾಜಿಕಲ್ ಅಡ್ವಾನ್ಸಸ್ ಇನ್ ಪ್ರಾಕ್ಟೀಸ್ ಆಂಡ್ ಸಸ್ಟೈನೆಬಿಲಿಟಿ ಎಂಬ ವಿಷಯದಲ್ಲಿ ಅಂತರಾಷ್ಟ್ರೀಯ ವಿಚಾರಸಂಕಿರಣವು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಮತ್ತು ಶ್ರೀನಿವಾಸ ಯುನಿವರ್ಸಿಟಿ, ಮುಕ್ಕ ಇದರ ಸಹಯೋಗದೊಂದಿಗೆ ನಡೆಯಿತು.
ಈ ವಿಚಾರಸಂಕಿರಣವನ್ನು ಡಾ. ಮೆಡ್.ಕ್ರಿಸ್ಟೋಪರ್ ರೋರಿಗ್, ಎಎನ್‍ಎಸ್‍ಪಿ, ಜರ್ಮನಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಇಂತಹ ಅಂತರಾಷ್ಟ್ರೀಯ ಸಮ್ಮೇಳನವನ್ನು ನಡೆಸುವಲ್ಲಿ ಸಂಘಟಕರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಆರೋಗ್ಯ ರಕ್ಷಣೆ ಮತ್ತು ಔಷಧ ವಿಜ್ಞಾನವನ್ನು ಮುನ್ನಡೆಸುವಲ್ಲಿ ತಾಂತ್ರಿಕ ನಾವೀನ್ಯತೆ, ಅಂತರಶಿಸ್ತೀಯ ಸಹಯೋಗಗಳು ಮತ್ತು ಸುಸ್ಥಿರತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ವೈಜ್ಞಾನಿಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಡಾ.ಎ.ಆರ್. ಶಬರಾಯ, ಪ್ರಾಂಶುಪಾಲರು, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಾಗತಿಕ ರಕ್ಷಣಾ ಸವಾಲುಗಳನ್ನು ಎದುರಿಸಲು ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯ ಮಹತ್ವವನ್ನು ಎತ್ತಿ ತೋರಿಸಿದರು. ಸಮ್ಮೇಳನವನ್ನು ಯಶಸ್ವಯಾಗಿ ಆಯೋಜಿಸುವಲ್ಲಿ ಸಂಘಟನಾ ಸಮಿತಿಯ ಪ್ರಯತ್ನವನ್ನು ಶ್ಲಾಘಿಸಿದರು.
ಹಾಗೂ ಗೌರವಾನ್ವಿತ ಅತಿಥಿಗಳಾಗಿ ಪ್ರೊ. ಇ.ಎಮ್ ಡಾ. ಮೆಡ್, ಅಪು ರೋರಿಗ್, ಪ್ರಾಜೆಕ್ಟ್ ಸೈಂಟಿಪಿಕ್ ಡೈರೆಕ್ಟರ್, ಅರ್‍ಡಿಎಮ್ ಪಾರ್ ಕ್ವಾಲಿಟಿ ಆಫ್ ಲೈಫ್ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್, ಜರ್ಮನಿ ಔಷಧ ಮತ್ತು ಔಷಧಾಲಯದ ಭವಿಷ್ಯವನ್ನು ರೂಪಿಸುವಲ್ಲಿ ತಾಂತ್ರಿಕ ಪ್ರಗತಿಗಳು, ಕೃತಕ ಬುದ್ಧಿಮತ್ತೆ, ಸುಸ್ಥಿರ ಆರೋಗ್ಯ ರಕ್ಷಣಾ ಪದ್ದತಿಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು.
ಡಾ.ಶ್ರೀನಿವಾಸಮಯ್ಯ ಡಿ, ರಿಜಿಸ್ಟ್ರಾರ್ ಇವಾಲ್ಯುವೇಶನ್, ಶ್ರೀನಿವಾಸ ಯುನಿವರ್ಸಿಟಿ, ಮಂಗಳೂರು, ಡಾ.ಸುಚೇತ ಕುಮಾರಿ ಎನ್, ಪ್ರೊಫೆಸರ್ ಆಂಡ್ ಡೈರೆಕ್ಟರ್, ರಿಸರ್ಚ್ ಆಂಡ್ ಡೆವಲಪ್‍ಮೆಂಟ್, ಶ್ರೀನಿವಾಸ ಯುನಿವರ್ಸಿಟಿ, ಮಂಗಳೂರು, ಡಾ. ಇ.ವಿ.ಎಸ್. ಸುಬ್ರಹ್ಮಣ್ಯಂ, ಅಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು, ಡಾ. ಕೃಷ್ಣಾನಂದ ಕಾಮತ್, ಪ್ರೊಫೆಸರ್ ಮತ್ತು ಡಾ.ಕುಮಾರ ಪ್ರಸಾದ್, ಎಸ್.ಎ, ಪ್ರೊಫೆಸರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಚಾರ ಸಂಕಿರಣದ ಪ್ರಮುಖ ಟಿಪ್ಪಣಿಯನ್ನು, ರಾಷ್ಟ್ರೀಯ ವಿಚಾರಸಂಕಿರಣದ ಸಂಚಿಕೆ ಮತ್ತು ಇಂಡೋ ಜರ್ಮನ್ ಕೊಲಾಬರೇಶನ್‍ನ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ಮಹಮ್ಮದ್ ರಶೀದ್, ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್, ಪಾರ್ಮಕೋಥೆರಪಿ, ಯುನಿವರ್ಸಿಟಿ ಆಫ್ ಉತಃ ಕಾಲೇಜ್ ಆಫ್ ಫಾರ್ಮಸಿ, ಯುಎಸ್.ಎ ಮತ್ತು ಬಿಜೋಯ್ ಫಿಲಿಪ್ ವರ್ಗೀಸ್, ಸೀನಿಯರ್ ಬಯಾಕಂಪಾಟೆಬಿಲಿಟಿ / ಟಾಕ್ಸಿಕಾಲಾಜಿಸ್ಟ್ ಎಸ್ ಎಮ್‍ಇ, ಮೆಡ್‍ಟ್ರೋನಿಕ್, ಐರ್ಲಾಂಡ್. ಡಾ.ತಿಪ್ಪೇಸ್ವಾಮಿ ಬಿಎಸ್, ಪ್ರೊಫೆಸರ್, ಪಾರ್ಮಕಾಲಜಿ ವಿಭಾಗ, ಕಾಲೇಜ್ ಆಫ್ ಫಾರ್ಮಸಿ, ಶಕ್ರ ಯುನಿವರ್ಸಿಟಿ, ಆಲ್ ದವಾದ್ಮಿ ಕಿಂಗ್‍ಡಮ್ ಆಫ್ ಸೌದಿ ಅರೇಬಿಯಾ ಇವರು ವೈಜ್ಞಾನಿಕ ಚರ್ಚೆಗಳನ್ನು ನಡೆಸಿದರು.
ಡಾ.ವೀರೇಶ್ ಕೆ. ಚೆಂಡೂರ, ಪ್ರೊಫೆಸರ್, ಇವರು ಅತಿಥಿಗಳನ್ನು ಸ್ವಾಗತಿಸಿದರು. ಡಾ.ಪದ್ಮಾವತಿ ಪಿ ಪ್ರಭು, ಪ್ರೊಫೆಸರ್, ಅನ್ವಿತಾ ಡಿ.ಕೆ, ಆಸೋಸಿಯೇಟ್ ಪ್ರೊಫೆಸರ್, ಕುಮಾರಿ ನಿಹಾರ ಮತ್ತು ಕುಮಾರಿ ಹಿಮಸ್ವಿ ಫಾರ್ಮಾ ಡಿ ಇವರು ಕಾರ್ಯಕ್ರಮ ನಿರ್ವಹಿಸಿದರು.
ಡಾ. ಕೃಷ್ಣಾನಂದ ಕಾಮತ್, ಪ್ರೊಫೆಸರ್ ಇವರು ವಂದನಾರ್ಪಣೆಗ್ಯೆದರು. ಈ ವಿಚಾರ ಸಂಕಿರಣದಲ್ಲಿ ಫಾರ್ಮಸಿ ವಿಭಾಗದ ಆಭ್ಯರ್ಥಿಗಳು ಭಾಗವಹಿಸಿ ಸಂಶೋಧನಾ ಪತ್ರಗಳನ್ನು ಮಂಡಿಸಿದರು. ಸುಮಾರು 350ಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರಸಂಕಿರಣದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ರಸಪ್ರಶ್ನೆ, ರೀಲ್ಸ್, ರೋಗಿಗಳ ಸುರಕ್ಷತೆಯ ವಿಷಯದ ಮೇಲೆ ಪಿಲ್ಸ್, ಛಾಯಾಗ್ರಹಣ, ಚರ್ಚೆ ಮತ್ತು ವೀಡಿಯೋಗ್ರಫಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


