ಉಡುಪಿ: ಎಂ.ಜಿ.ಎಂ, ಸಂಧ್ಯಾಕಾಲೇಜಿನಲ್ಲಿ ಮಾರ್ಚ್ 27ರಂದು ಅಂತರ್ ಕಾಲೇಜು ConFest "Beyond the Scroll” ಆಯೋಜನೆ ಉಡುಪಿ, ಮಾರ್ಚ್ 2026: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು, ಉಡುಪಿ, "Beyond the Scroll: Rewriting the Social Narrative" ಎಂಬ ಶೀರ್ಷಿಕೆಯಲ್ಲಿ ಅಂತರ್ ಕಾಲೇಜು ConFest ಮಾರ್ಚ್ 27, 2026 ಶುಕ್ರವಾರದಂದು ಟಿ. ಮೊಹನದಾಸ್ ಪೈ ಪ್ಲಾಟಿನಮ್ ಜ್ಯೂಬಿಲಿ ಬ್ಲಾಕ್, ಎಂ.ಜಿ.ಎಂ.ಸಂಧ್ಯಾಕಾಲೇಜು ಆವರಣದಲ್ಲಿ ಆಯೋಜಿಸಿದೆ.
ಈ ಒಂದು ದಿನದ ಕಾರ್ಯಕ್ರಮವು ಉಡುಪಿ, ಮಂಗಳೂರು ಮತ್ತು ಕುಂದಾಪುರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶ ಹೊಂದಿದ್ದು, ಡಿಜಿಟಲ್ ಮಿಡಿಯಾ, ಸೃಜನಶೀಲತೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬದಲಾಗುತ್ತಿರುವ ಅಂಶಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸುತ್ತದೆ.
ConFest ಕಾರ್ಯಕ್ರಮವು "The Trophy Trail" ಎಂಬ ಭವ್ಯ ಉದ್ಘಾಟನೆಯೊಂದಿಗೆ ಪ್ರಾರಂಭವಾಗಲಿದ್ದು, ಮೆರವಣಿಗೆ, ಫಾಶ್‌ಮಾಬ್ ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ನಂತರ ಬೆಳಿಗ್ಗೆ 10:00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜ್ ಟ್ರಸ್‌ಟ್‌ನ ಅಧ್ಯಕ್ಷರಾದ ಟಿ. ಸತೀಶ್ ಯು. ಪ್ರೈ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಯಕ್ಷಗಾನ ಕಲಾರಂಗ, ಉಡುಪಿ ಕಾರ್ಯದರ್ಶಿಯಾದ ಮುರಳಿ ಕಡೇಕಾರ್ ಉದ್ಘಾಟಿಸಲಿದ್ದಾರೆ. ಮಣಿಪಾಲದ ಎ.ಜಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ್ ಆರ್. ಪ್ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಪ್ರೊ. ವನಿತಾ ಮೈಯ್ಯ ಮತ್ತು ಮಾಲತಿ ದೇವಿ ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಈ ConFestನಲ್ಲಿ ಶೈಕ್ಷಣಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಸಂಯೋಜನೆ ಕಂಡುಬರಲಿದ್ದು, ಡಿಜಿಟಲ್ ಡಿಸೈನ್, ಕಂಟೆಂಟ್ ಕ್ರಿಯೇಷನ್,, ಸಂಶೋಧನಾ ಮನೋಭಾವ, ಸಾಮಾಜಿಕ ಮಾಧ್ಯಮದ ಪ್ರಭಾವ ಹಾಗೂ ಶಾರ್ಟ್ ಫಾರ್ಮಾಟ್ ಕಥನಗಳಂತಹ ವಿಷಯಗಳ ಕುರಿತು ತಜ್ಞರ ಉಪನ್ಯಾಸಗಳು, ಪ್ಯಾನೆಲ್ ಚರ್ಚೆಗಳು ಮತ್ತು ಕ್ರಿಯೇಟರ್ ಸೆಷನ್‌ಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಎಂಟು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, ಡಿಬೇಟ್, ಡಿಜಿಟಲ್ ಪೋಸ್ಟರ್ ವಿನ್ಯಾಸ, ಕ್ಯಾಪ್ಟನ್ ಬರವಣಿಗೆ, ಪೇಪರ್ ಪ್ರೆಸೆಂಟೇಶನ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಶಾರ್ಟ್ ಫಿಲ್ಡ್, ರೀಲ್ಸ್ ತಯಾರಿ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿವೆ. ವಿಜೇತರಿಗೆ ರೂ. 10,000/- ಮತ್ತು ರನ್ನರ್-ಅಪ್‌ಗೆ ರೂ. 5,000/-ಬಹುಮಾನ ನೀಡಲಾಗುತ್ತದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆಟೋಮೊಬೈಲ್ ಆಸಕ್ತರಾದ ನಿರೀಕ್ಷಿತ್ ಹೆಬ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ವಹಿಸಲಿದ್ದು, ಗಣ್ಯರು ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಹಕಾರ ಮನೋಭಾವವನ್ನು ಉತ್ತೇಜಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಆಗಮಿಸಿ ಸಹಕರಿಸುವಂತೆ ಕೋರಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


