ಪುತ್ತೂರು: ಯುವಶಕ್ತಿಎನ್ನುವುದು ಒಂದು ರಾಷ್ಟ್ರದ ಶಕ್ತಿ. ಇದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಅದು ಒಂದು ಉತ್ತಮ ಶಕ್ತಿಯಾಗಿ ಹೊರಹೊಮ್ಮುತ್ತದೆ. ಯಶಸ್ಸನ್ನು ಸಾಧಿಸಬೇಕಾದರೆಧೈರ್ಯ, ಶಿಸ್ತು ಮತ್ತು ಪರಿಶ್ರಮ ಈ ಮೂರು ಅಂಶಗಳು ನಮ್ಮಲ್ಲಿರಬೇಕು. ಭಾರತದ ಸಂಸ್ಕೃತಿಯ ತಿರುಳಾದ ವೇದಾಂತ ಭಾವ, ಜ್ಞಾನ, ಭ್ರಾತೃತ್ವವನ್ನು ವಿಶ್ವಕ್ಕೆ ಪರಿಚಯಿಸಿ ಯುವಕರನ್ನು ಜಾಗೃತಗೊಳಿಸಿದವರು ಸ್ವಾಮಿ ವಿವೇಕಾನಂದರು ಎಂದು ಉಡುಪಿಯ ಎಂಜಿಎಂ ಸಂಧ್ಯಾಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾಕೇಂದ್ರ ಮತ್ತು ಐಕ್ಯೂಎಸಿ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇದರ ಸಹಯೋಗದಲ್ಲಿ ನಡೆದ ವಿವೇಕ ಸ್ಮೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ವಿವೇಕಾನಂದರು ಆಧುನಿಕ ಭಾರತದೇಶವನ್ನು ಸರಿಯಾಗಿ ಅರ್ಥೈಸಿಕೊಂಡು ಯುವಜನತೆಗೆ ಅದನ್ನು ಪಸರಿಸಿದರು. ವೃದ್ಧರ ಮನೋಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ತಿಳಿದ ಅವರು ಯುವಕರನ್ನು ಪ್ರೇರೇಪಿಸಿದರು. ಜಗತ್ತಿನ ಎಷ್ಟೇ ದೇವರುಗಳನ್ನು ನಂಬಿಯೂ ನಮ್ಮಲ್ಲಿ ನಿಮಗೆ ನಂಬಿಕೆಯಿಲ್ಲದಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ. ಜೀವನದಲ್ಲಿಎಷ್ಟೇ ಅಡಚಣೆಗಳು ಬಂದರೂ ಅದನ್ನು ದಾಟಿ ಮುನ್ನುಗ್ಗಬೇಕು. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಫಲಾಪೇಕ್ಷೆಯನ್ನು ನಿರೀಕ್ಷಿಸಬಾರದು. ಯಾರು ಇತರರಿಗೋಸ್ಕರ ಬದುಕುತ್ತಾರೋ ಅವರು ತಮ್ಮ ಜೀವನದಲ್ಲಿ ಯಶಸ್ಸನ್ನುಕಾಣುತ್ತಾರೆ. ಸಾಧಿಸಬೇಕಾದರೆ ವಿವೇಕಾನಂದರ ಚಿಂತನೆಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಪಾತ್ರವಹಿಸಬೇಕು ಎಂದರು.
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿವೇಕಾನಂದರು ಒಬ್ಬ ದೇಶ ನಾಯಕ. ಇವರು ರೋಮಾಂಚನಕಾರಿಯಾದ ವ್ಯಕ್ತಿತ್ವವನ್ನು ಹೊಂದಿದ್ದು, ಸಾಮಾಜಿಕ ಚಿಂತನೆಗಳನ್ನು ಜನತೆಗೆ ನೀಡಿದ್ದಾರೆ. ಇವರು ಸಿದ್ಧಿ ಪುರುಷ ಎಂದೇ ಪ್ರಸಿದ್ಧರಾದವರು. ಭಾರತದೇಶದ ಸಂಸ್ಕೃತಿ ಕೇವಲ ಇಲ್ಲಿಗೆ ಮಾತ್ರ ಸೀಮಿತವಾಗಿರದೆ ಹೊರ ದೇಶಕ್ಕೂ ತಲುಪಿದೆ ಎಂದರು.
ವೇದಿಕೆಯಲ್ಲಿಕಾಲೇಜಿನ ಪ್ರಾಂಶುಪಾಲ ಮುರಳೀಧರ್ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನಕೇಂದ್ರದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನಕೇಂದ್ರದ ನಿರ್ದೇಶಕಿಡಾ. ವಿಜಯಸರಸ್ವತಿ ಸ್ವಾಗತಿಸಿ, ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ್‍ಎಸ್ ವಂದಿಸಿದರು. ಸ್ನಾತಕೋತ್ತರ ಎಂಕಾಂ ವಿಭಾಗದ ವಿದ್ಯಾರ್ಥಿನಿ ಅನನ್ಯಾ ಎಸ್ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


