ಒತ್ತಡದ ಬದುಕಿನಲ್ಲಿ ತನ್ನತನವನ್ನೇ ಕಳೆದುಕೊಳ್ಳುತ್ತಿರುವ ಮಹಿಳೆ: ಡಾ. ಆಶಾ ಜ್ಯೋತಿ ರೈ

Upayuktha
0


ಮಂಗಳೂರು: ಆಧುನಿಕ ಒತ್ತಡದ ಬದುಕಿನಲ್ಲಿ ಮಹಿಳೆ ತನ್ನತನವನ್ನೇ ಕಳೆದುಕೊಳ್ಳುತ್ತಿದ್ದಾಳೆಯೇ ಎಂಬ ಪ್ರಶ್ನೆ ಕಾಡಲು ಪ್ರಾರಂಭವಾಗಿದೆ. ಮಹಿಳೆ ಮೂಲತಃ ಮೂಲತತ್ತ್ವ. ಸಮಾಜ ಅವಳ ಮೇಲೆ ದೌರ್ಜನ್ಯವೆಸಗಿದಾಗ ಇಂತಹ ಸಂಶಯ ಮೂಡುತ್ತದೆ ಎಂದು ಆಸರೆ ಚಾರಿಟಬಲ್ ಟ್ರಸ್ಟ್ ಮತ್ತು ಆಯುಷ್ ನಿರ್ದೇಶಕಿ ಡಾ. ಆಶಾಜ್ಯೋತಿ ರೈ ವಿಷಾದ ವ್ಯಕ್ತಪಡಿಸಿದರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಹಿಳಾ ವಿಭಾಗ, ಮಹಿಳಾ ಕೋಶ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಯಾವುದೇ ಮಹಿಳೆ ದುರ್ಬಲಳಲ್ಲ, ಆದರೆ ವ್ಯವಸ್ಥೆ ಆಕೆಯನ್ನು ದುರ್ಬಲ ಮಾಡುತ್ತಿದೆ. ಮೂಲತಃ ಹೆಂಗರುಳಾದ್ದರಿಂದ ಎಂದಿಗೂ ಕೊಡುವ ಮನಸ್ಥಿತಿ ಇದ್ದೇ ಇರುತ್ತದೆ. ತಾಯ್ತನ ಆಕೆಗೆ ಮಾತ್ರ ಸೀಮಿತವಾದುದಲ್ಲ. ಇದು ಸಾರ್ವತ್ರಿಕವಾದುದು. ಸಾರ್ವತ್ರೀಕರಣಗೊಂಡಾಗ ಮಾತ್ರ ಇಡೀ ಸಮಾಜ ಬೆಳಕಾಗುತ್ತದೆ. ಸೋದರತ್ವ ಭಾವನೆ ಬೆಳೆಸಿಕೊಂಡಾಗ ಯಾವುದೇ ವ್ಯಕ್ತಿ ಬದುಕಿನಲ್ಲಿ ಏಕಾಂಗಿಯಾಗಲು ಸಾಧ್ಯವಿಲ್ಲ ಎಂದರು. 


ವೇಗ ಹಾಗೂ ಒತ್ತಡದ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಆತಂಕ ಎದುರಾಗಿದೆ. ಇಂರಹ ಸಂದರ್ಭದಲ್ಲಿ ಸಮಾಜದಲ್ಲಿ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಕೊಂಡೋಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. 


ಇದೇ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಲಸ್ಟರ್‍ ನ ಸಂಪನ್ಮೂಲ ವ್ಯಕ್ತಿ ಹಾಗೂ ಸಹಾಯಕ ಶಿಕ್ಷಕಿ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಕುಸುಮಾ ಕೆ. ಆರ್. ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಗಣಪತಿ ಗೌಡ ಎಸ್., ಅಧ್ಯಾಪಕ ಕೇವಲ ಪಾಠ ಮಾಡುವುದಕ್ಕೆ ಮಾತ್ರವೇ ಸೀಮಿತವಾಗಬಾರದು. ವಿದ್ಯಾರ್ಥಿಗಳ ಬದುಕಿಗೆ ಆದರ್ಶವಾಗಬೇಕು. ವಿದ್ಯಾರ್ಥಿಗಳ ಬದುಕಿನ ಬದಲಾವಣೆಗೆ ಕಾಲೇಜು ಉತ್ತಮ ವೇದಿಕೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. 


ಇದೇ ವೇಳೆ, ಅಧ್ಯಾಪಕ ವೃಂದ ನ್ಯಾಪ್ಕಿನ್ ದಹನ ಯಂತ್ರವನ್ನು ಕಾಲೇಜಿಗೆ ಕೊಡಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸಹ ನಿರ್ದೇಶಕಿ ಪ್ರೊ. ಸುಭಾಷಿಣಿ ಶ್ರೀವತ್ಸ, ಮಹಿಳಾ ಕೋಶದ ಸಹ ನಿರ್ದೇಶಕಿ ಪ್ರೊ. ನಾಗರತ್ನ ಎನ್. ರಾವ್, ಮಹಿಳಾ ವೇದಿಕೆಯ ಸಹ ನಿರ್ದೇಶಕಿ ಡಾ. ಭಾರತಿ ಪ್ರಕಾಶ್ ಸೇರಿದಂತೆ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.  


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top